ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿನ ಸರಪಳಿಯ ಲಿಂಕ್ ಬ್ರೇಕ್ ಮಾಡಲು ಕನಿಷ್ಠ 15 ದಿನಗಳ ಲಾಕ್‍ಡೌನ್ ಅಗತ್ಯವಿದೆ. ಇದು ನನ್ನ ವೈಯಕಿಕ್ತ ಅಭಿಪ್ರಾಯ ಮಾತ್ರ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿದ್ದಾರೆ.
ಸಿಎಂ ಬಿಎಸ್‍ವೈ ಸಭೆಗೂ ಮುನ್ನ ಮಾತನಾಡಿದ ಅನಿಲ್ ಕುಮಾರ್ ಅವರು, ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇನ್ನು 1 ವಾರ ಲಾಕ್‍ಡೌನ್ ಅಗತ್ಯವಿದೆ. ಏಕೆಂದರೆ ಯಾವುದೇ ಚೈನ್ ಬ್ರೇಕ್ ಆಗಲು 15 ದಿನಗಳ ಸೈಕಲ್ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕನಿಷ್ಠ 15 ದಿನ ಲಾಕ್‍ಡೌನ್ ಅಗತ್ಯವಿದೆ. ಸಿಎಂ ಅವರ ಸಭೆಯಲ್ಲೂ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ ಎಂದರು.
Advertisement
Advertisement
ಇತ್ತ ಮತ್ತೊಂದು ವಾರದ ಲಾಕ್‍ಡೌನ್‍ಗೆ ಬಿಬಿಎಂಪಿ ಒಲವು ತೋರಿದೆ. ಮತ್ತೊಂದು ವಾರ ಲಾಕ್ ಡೌನ್ ಅವಧಿ ವಿಸ್ತರಣೆಯಾದರೆ ಚೈನ್ ಲಿಂಕ್ ಕಟ್ ಆಗುತ್ತದೆ. ಸದ್ಯ ಬ್ಯಾಕ್‍ಲಾಗ್ ಆಗಿರುವ ಸ್ಯಾಂಪಲ್ ವರದಿ ಕ್ಲೀಯರ್ ಮಾಡಬಹುದು. ಅಲ್ಲದೇ ಮತ್ತೊಮ್ಮೆ ರ‍್ಯಾಂಡಮ್ ಟೆಸ್ಟ್ ಗೆ ಮುಂದಾಗಬಹುದು. ಕ್ಲಾಸ್ಟರ್ ಜಾಗಗಳಲ್ಲಿ ರ‍್ಯಾಪಿಡ್ ಆಂಟಿಜನ್ ಕಿಟ್ ಬಳಕೆ ಮಾಡಬಹುದು ಎಂಬುವುದು ಬಿಬಿಎಂಪಿ ಅಧಿಕಾರ ಅಭಿಪ್ರಾಯವಾಗಿದೆ.
Advertisement
Advertisement
ಬೆಂಗಳೂರಿನ ಜನರು ಕೂಡ ಒಂದು ವಾರದ ಲಾಕ್‍ಡೌನ್ ಬಗ್ಗೆ ಮೈಂಡ್ ಸೆಟ್ ಮಾಡಿಕೊಂಡಿದ್ದಾರೆ. ಇದೇ ವೇಳೆ ಮತ್ತೊಂದು ವಾರದ ಲಾಕ್‍ಡೌನ್‍ಗೆ ಭಾರೀ ವಿರೋಧ ವ್ಯಕ್ತ ಆಗಲ್ಲ. ಈ ಅವಧಿಯಲ್ಲಿ ಆಸ್ಪತ್ರೆಗಳ ಸಿದ್ಧತೆಯನ್ನು ಮಾಡಿಕೊಳ್ಳಬಹುದು. ಜನರಿಗೆ ಹೋಂ ಯಸೋಲೇಶನ್ ಬಗ್ಗೆ ಅರಿವು ಹೆಚ್ಚಿಸಬಹುದು. ಜನರನ್ನೇ ಕೊರೊನಾ ಸ್ವಯಂ ಸೇವಕರಾಗಿಸಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸ ಹುದು. ಪದೇ ಪದೇ ಲಾಕ್‍ಡೌನ್ ನೆಪ ಹೇಳಲು ಆಗಲ್ಲ. ಸದ್ಯದ ಒಂದು ವಾರದ ಲಾಕ್ ಡೌನ್ ಮತ್ತೆ ಮುಂದುವರೆಸಿದರೆ ಒಳಿತು ಎಂಬ ಸಿಎಂ ಅವರಿಗೆ ಬಿಬಿಎಂಪಿ ಸಲಹೆ ನೀಡಿದೆ ಎನ್ನಲಾಗಿದೆ.