ಕನಸನ್ನು ನನಸು ಮಾಡಲು ದಾವಣಗೆರೆಯಿಂದ ಬೆಂಗಳೂರಿಗೆ ಬಂದೆ – ವಿನಯ್ ಕುಮಾರ್ ಭಾವುಕ ನುಡಿ

Public TV
2 Min Read
vinay kumar

– ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ
– ಸಚಿನ್ ಮಾರ್ಗದರ್ಶನ ಸಿಕ್ಕಿದ್ದು ನನ್ನ ಭಾಗ್ಯ

ಬೆಂಗಳೂರು: ಭಾರತ ತಂಡದ ಮಾಜಿ ವೇಗದ ಬೌಲರ್ ಕರ್ನಾಟಕದ ಹೆಮ್ಮೆಯ ಕ್ರಿಕಟ್ ಪಟು ಆರ್ ವಿನಯ್ ಕುಮಾರ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.

vinay

ಟ್ವಿಟ್ಟರ್ ನಲ್ಲಿ ತನ್ನ ನಿವೃತ್ತಿ ಪತ್ರವನ್ನು ಟ್ವೀಟ್ ಮಾಡಿರುವ ವಿನಯ್, ಕಳೆದ 25 ವರ್ಷಗಳಿಂದ ಕ್ರಿಕೆಟ್‍ನಲ್ಲಿ ಹಳವು ಏರಿಳಿತಗಳನ್ನು ಕಂಡಿದ್ದೇನೆ ಇದೀಗ ಮಿಶ್ರಭಾವನೆಗಳ ಮೂಲಕ ಅಂತರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಇದು ನನ್ನ ಪಾಲಿಗೆ ಸುಲಭವಾದ ವಿಷಯವಲ್ಲ ಆದರೆ ಎಲ್ಲ ಕ್ರೀಡಾಪಟುಗಳು ಒಂದಲ್ಲ ಒಂದು ದಿನ ನಿವೃತ್ತಿ ಹೇಳಲೇ ಬೇಕು ಇಂದು ನಾನು ಅದೇ ಹಾದಿಯಲ್ಲಿ ತೆರಳಿ ನಿವೃತ್ತಿ ಹೇಳುತ್ತಿದ್ದೇನೆ ಎಂದು ತಮ್ಮ ಪತ್ರದಲ್ಲಿ ಭಾವುಕ ನುಡಿಗಳನ್ನು ಬರೆದಿದ್ದಾರೆ.

ನನ್ನ ಕ್ರಿಕೆಟ್ ಜೀವನದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅದೃಷ್ಟ ನನಗೆ ದೊರಕಿದ್ದು, ನನ್ನಿಂದಾಗುವ ಸರ್ವಸ್ವವನ್ನು ತಂಡಕ್ಕೆ ನೀಡಿದ್ದೇನೆ. ನನ್ನ ಕ್ರೀಡಾ ಜೀವನದ ದಾರಿಯಲ್ಲಿ ಹಲವು ಮರೆಯಾಲಾಗದ ಘಟನೆಗಳು ನನ್ನ ಮನಸಿನಲ್ಲಿ ತುಂಬಿಕೊಂಡಿದೆ. ನಾ ಕಂಡ ಕನಸನ್ನು ನನಸಾಗಿಸಲು ದಾವಣಗೆರೆಯಿಂದ ಬೆಂಗಳೂರಿಗೆ ಆಗಮಿಸಿದ್ದೆ. ಈ ಸಂದರ್ಭ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ರಾಜ್ಯ ತಂಡವನ್ನು ಪ್ರತಿನಿಧಿಸಲು ಅವಕಾಶ ಮಾಡಿಕೊಟ್ಟು ನನ್ನನ್ನು ಉತ್ತಮ ಕ್ರಿಕೆಟ್ ಆಟಗಾರನಾಗುವಂತೆ ಮಾಡಿದೆ. ಬಳಿಕ ಭಾರತ ತಂಡಕ್ಕೆ ಆಯ್ಕೆಯಾಗಿ ಎಲ್ಲ ಪ್ರಕಾರದ ಕ್ರಿಕೆಟ್‍ನಲ್ಲಿ ದೇಶವನ್ನು ಪ್ರತಿನಿಧಿಸಿದ್ದೇನೆ.

vinay kumar

ದೇಶದ ಪರ ಆಡುವುದು ಪತಿಯೊಬ್ಬ ಕ್ರೀಡಾಪಟುವಿನ ಕಟ್ಟಕಡೆಯ ಕನಸಾಗಿದೆ. ಅದನ್ನು ಸಾಧಿಸಲು ಸಾಧ್ಯವಾಗಿರುವುದು ಸಂತಸ ತಂದಿದೆ. ಭಾರತ ತಂಡದ ನೀಲಿ ಜೆರ್ಸಿ ಧರಿಸಿ ಎದುರಾಳಿಗಳ ವಿರುದ್ಧ ಆಟ ವಾಡಿರುವ ನೆನಪುಗಳು ಸದಾ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಕ್ರಿಕೆಟ್ ನನ್ನ ಪಾಲಿಗೆ ಆಟದೊಂದಿಗೆ ಅದು ನನ್ನ ಜೀವನ ಕೂಡ ಆಗಿತ್ತು. ಅನೇಕ ಅಂಶಗಳನ್ನು ಕ್ರಿಕೆಟ್ ನನಗೆ ಕಲಿಸಿದೆ. ಹಲವು ಏರಿಳಿತಗಳು, ಯಶಸ್ಸು ವೈಫಲ್ಯ, ಒಳ್ಳೆಯ ದಿನಗಳು, ಕೆಟ್ಟ ದಿನಗಳು. ಇವೆಲ್ಲವೂ ಜೀವನದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆದು ಬರುವಲ್ಲಿ ನೆರವಾಗಿದೆ ಎಂದು ತಿಳಿಸಿದ್ದಾರೆ.

Vinay Kumar

ಐಪಿಎಲ್ ಬಗ್ಗೆ ಬರೆದುಕೊಂಡಿರುವ ವಿನಯ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಕೊಚ್ಚಿ ಟಸ್ಕರ್ಸ್ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಬೆರೆತು ಆಡಿದ್ದೇನೆ ಅವರಿಗೆ ಧನ್ಯವಾದ. ಅದೇ ರೀತಿ ಹಲವು ಖ್ಯಾತನಾಮ ಆಟಗಾರರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಎಂಎಸ್ ಧೋನಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ ಹಾಗೂ ರೋಹಿತ್ ಶರ್ಮಾ ನಾಯಕತ್ವದಡಿಯಲ್ಲಿ ಆಡಿದ್ದೇನೆ. ಅವರೆಲ್ಲರಿಂದ ಹಲವು ಅನುಭವಗಳನ್ನು ಕಲಿತಿದ್ದೇನೆ. ನನ್ನ ಕ್ರಿಕಟ್ ಹಾದಿಯಲ್ಲಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾಗ ಸಚಿನ್ ತೆಂಡೂಲ್ಕರ್ ಮಾರ್ಗದರ್ಶನವು ಲಭಿಸಿತ್ತು ಇದು ನನ್ನ ಭಾಗ್ಯ ಎಂದು ಉಲ್ಲೇಖಿಸಿದರು.

05sachin1

ಇವೆಲ್ಲ ಸಂಗತಿಗಳೊಂದಿಗೆ ತನ್ನ ಜೀವನದ ಜೊತೆಯಾಗಿರುವ ಹೆತ್ತವರು, ಪತ್ನಿ ರಿಚಾ, ಸ್ನೇಹಿತರು, ಸಹ ಆಟಗಾರರು, ದಾವಣೆಗೆರೆ ಯುನೈಟೆಡ್ ಕ್ರಿಕೆಟರ್ಸ್ ಹಾಗೂ ತರಬೇತುದಾರರ ಕೊಡುಗೆಯನ್ನು ವಿನಯ್ ಕುಮಾರ್ ಸ್ಮರಿಸಿಕೊಂಡು ವಿದಾಯವನ್ನು ತಿಳಿಸಿದ್ದಾರೆ.

ವಿನಯ್ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಒಟ್ಟು 504 ವಿಕೆಟ್ (139 ಪಂದ್ಯ) ಪಡೆದಿದ್ದು, ರಣಜಿ ಪಂದ್ಯಗಳಲ್ಲಿ 442 ವಿಕೆಟ್‍ಕಬಳಿಸಿದ್ದಾರೆ. 2011-12 ರಲ್ಲಿ ಭಾರತ ತಂಡದ ಪರ ಆಸ್ಟ್ರೇಲಿಯಾ ಪ್ರವಾಸದಲ್ಲಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಭಾರತ ಪರ ಒಟ್ಟು 31 ಏಕದಿನ ಪಂದ್ಯ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *