ಮೈಸೂರು: ಕತ್ತು ಕುಯ್ತುಕೊಂಡು ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ದುಗ್ಗಹಳ್ಳಿ ಗ್ರಾಮದಲ್ಲಿ ನಡೆದಿದೆ.
ನವ್ಯಾ ಮತ್ತು ಚಂದ್ರು (ಹೆಸರು ಬದಲಾಯಿಸಲಾಗಿದೆ) ಆತ್ಮಹತ್ಯೆಗೆ ಯತ್ನಿಸಿದ ಜೋಡಿ. ದುಗ್ಗಹಳ್ಳಿಯ ನವ್ಯಾ ಮತ್ತು ಕುರಿಹುಂಡಿಯ ಗ್ರಾಮದ ಚಂದ್ರು ಇಬ್ಬರು ಪ್ರೀತಿಸುತ್ತಿದ್ದರು. ಇಬ್ಬರ ಜಾತಿ ಬೇರೆ ಆಗಿದ್ದರಿಂದ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಇಂದು ದುಗ್ಗಹಳ್ಳಿಗೆ ಬಂದಿದ್ದ ಚಂದ್ರು, ಯಾರು ಇಲ್ಲದ ವೇಳೆ ನವ್ಯಾಳ ಮನೆಗೆ ಹೋಗಿದ್ದಾನೆ.
ಮದುವೆಗೆ ಪೋಷಕರ ವಿರೋಧದ ಹಿನ್ನೆಲೆ ಇಬ್ಬರು ಕತ್ತು ಕುಯ್ದುಕೊಂಡು ಮನೆಯ ಹೊರಗೆ ಬಂದು ಕುಳಿತಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರು ಮತ್ತು ಅಂಬುಲೆನ್ಸ್ ಗೆ ಕರೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.