ಬೀಜಿಂಗ್: ಕೆಲ ತಿಂಗಳಿಂದ ಸಾರ್ವಜನಿಕವಾಗಿ ಕಾಣೆಯಾಗಿದ್ದ ಆಲಿಬಾಬಾ ಸಂಸ್ಥಾಪಕ, ಶತಕೋಟ್ಯಧಿಪತಿ ಜಾಕ್ ಮಾ ಇಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಬುಧವಾರ ಸುಮಾರು 100 ಶಿಕ್ಷಕರಿಗೆ ಆನ್‍ಲೈನ್ ತರಬೇತಿ ನಡೆಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಅಕ್ಟೋಬರ್ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಗ್ರಾಮೀಣ ಶಿಕ್ಷಕರ ಸಾಧನೆಗಳನ್ನು ಗುರುತಿಸಲು ಮಾಜಿ ಇಂಗ್ಲಿಷ್ ಶಿಕ್ಷಕರಾಗಿರುವ ಜಾಕ್ ಮಾ ಅವರು ಪ್ರತಿ ವರ್ಷ ವಾರ್ಷಿಕ ಸಮ್ಮೇಳನ ನಡೆಸುತ್ತಾರೆ. ಅದೇ ರೀತಿ ಈ ವರ್ಷವೂ ಸಮ್ಮೇಳನ ನಡೆಸಿದ್ದು, ಈ ವೇಳೆ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಮೂಲಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
Advertisement
Ma, who used to be an English teacher and founder of #Alibaba, also gives wishes to village teachers via a video on Wednesday, saying usually the activity is held in Sanya in southern Hainan but this year, due to #Covid19 it has to be done via video conference. pic.twitter.com/yfi7oPB5Sb
— Qingqing_Chen (@qingqingparis) January 20, 2021
Advertisement
ಜಾಕ್ ಮಾ ಅವರ ಆನ್‍ಲೈನ್ ವಿಮಾ ವ್ಯವಹಾರ ಚೀನಾದ ಆ್ಯಂಟಿ ಟ್ರಸ್ಟ್ ರೆಗ್ಯೂಲೇಟರ್ಸ್ ಪರಿಶೀಲನೆಗೆ ಒಳಪಟ್ಟ ಬಳಿಕ ಅವರ ಭವಿಷ್ಯದ ಬಗ್ಗೆ ವದಂತಿಗಳು ಹರಡಿದ್ದವು. ಅಲ್ಲದೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ್ದರಿಂದ ಹಲವು ಅನುಮಾನಗಳು ಸಹ ಕಾಡ ತೊಡಗಿದ್ದವು. ಇದೀಗ ಅವರು ಕಾಣಿಸಿಕೊಂಡಿದ್ದಾರೆ.
Advertisement
ಶಿಕ್ಷಕರನ್ನುದ್ದೇಶಿಸಿ ಮಾತನಾಡಿರುವ ಉದ್ಯಮಿ ಜಾಕ್ ಮಾ, ಸಾಮಾನ್ಯವಾಗಿ ಪ್ರತಿ ವರ್ಷ ಸೌತ್ ಹೈನಾನ್‍ನ ಸನ್ಯಾ ಪ್ರದೇಶದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿತ್ತು. ಆದರೆ ಕೊರೊನಾ ವೈರಸ್ ಹಿನ್ನೆಲೆ ಈ ಬಾರಿ ಆನ್‍ಲೈನ್ ಮೂಲಕ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
Advertisement
#JUSTIN: #JackMa not disappear, here we go: Ma just had a video conference with 100 village teachers on Wednesday morning, saying: after #COVID19, we’ll meet each other again https://t.co/cBm1ryZJQr
— Qingqing_Chen (@qingqingparis) January 20, 2021
ಜಾಕ್ ಮಾ ಅವರು ಕಾಣಿಸಿಕೊಂಡಿರುವ ಕುರಿತು ಸ್ಥಳೀಯ ಬ್ಲಾಗ್‍ನಲ್ಲಿ ಬಿತ್ತರವಾಗಿತ್ತು. ಬಳಿಕ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಈ ಕುರಿತು ಖಚಿತಪಡಿಸಿತ್ತು. ಚೀನೀಸ್ ರೆಗ್ಯೂಲೇಟರ್ಸ್ ನವರು ಅಲಿಬಾಬಾ ಸಂಸ್ಥೆಯ ಫಿಂಟೆಕ್ ದೈತ್ಯ ಆಂಟ್ ಫೈನಾನ್ಶಿಯಲ್‍ನ ಐಪಿಒವನ್ನು ಅಮಾನತಿನಲ್ಲಿಟ್ಟು, ಆಲಿಬಾಬಾ ಕಂಪನಿಯ ಮಾರುಕಟ್ಟೆ ಏಕಸ್ವಾಮ್ಯದ ಬಗ್ಗೆ ತನಿಖೆ ಆರಂಭಿಸಿದ್ದರು. ಆ ಬಳಿಕ ಜಾಕ್ ಮಾ ಕಾಣೆಯಾಗಿದ್ದರು ಎನ್ನಲಾಗಿತ್ತು.
ಕಳೆದ ಅಕ್ಟೋಬರ್‍ನಿಂದ ಆಲಿಬಾಬಾ ಸಂಸ್ಥಾಪಕ, ಶತಕೋಟ್ಯಧಿಪತಿ ಜಾಕ್ ಮಾ ಸಾರ್ವಜನಿಕವಾಗಿ ಕಣ್ಮರೆಯಾಗಿದ್ದರು. 2 ತಿಂಗಳ ಹಿಂದೆ ಜಾಕ್ ಮಾ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ನೇತೃತ್ವದ ಸರ್ಕಾರದ ನೀತಿಯನ್ನು ಟೀಕಿಸಿದ್ದರು. ಈ ಟೀಕೆಯ ಬಳಿಕ ಜಾಕ್ ಮಾ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಲ್ಲ ಎಂದು ವರದಿಯಾಗಿತ್ತು.
ತನ್ನ ನೀತಿಯನ್ನು ಸಾರ್ವಜನಿಕವಾಗಿ ಟೀಕಿಸಿದ್ದರೆ ಚೀನಾ ಸರ್ಕಾರ ಸಾರ್ವಜನಿಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಅದೇ ರೀತಿ ಚೀನಾ ಜಾಕ್ ಮಾ ವಿರುದ್ಧ ಕ್ರಮ ಕೈಗೊಂಡಿರಬಹುದು ಎಂದು ಹಲವರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.
ಅನುಮಾನ ಎದ್ದಿದ್ದು ಯಾಕೆ?
ಅಮೆರಿಕ ಬಿಸಿನೆಸ್ ಹೀರೋ ಟ್ಯಾಲೆಂಟ್ ಕಾರ್ಯಕ್ರಮವನ್ನು ಜಾಕ್ ಮಾ ಪ್ರಯೋಜಿಸಿದ್ದರು. ಈ ಶೋ ನ ಅಂತಿಮ ಕಾರ್ಯಕ್ರಮದಲ್ಲಿ ಜಾಕ್ ಮಾ ಭಾಗವಹಿಸಬೇಕಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಜಾಕ್ ಮಾ ಕಾಣಿಸಿರಲಿಲ್ಲ. ಅಲ್ಲದೆ ಆಫ್ರಿಕಾದ ಉದ್ಯಮಿಗಳ ಜೊತೆ ಕಾರ್ಯಕ್ರಮ ನಡೆಸಲು ಆಫ್ರಿಕಾ ಬಿಸಿನೆಸ್ ಹೀರೋ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಜಾಕ್ ಮಾ ನೇಮಕವಾಗಿದ್ದರು. ಆದರೆ ಈ ಕಾರ್ಯಕ್ರಮದ ವೆಬ್‍ಸೈಟ್‍ನಿಂದ ಜಾಕ್ ಮಾ ಫೋಟೋವನ್ನು ತೆಗೆಯಲಾಗಿತ್ತು.
ಜಾಕ್ ಮಾ ಹೇಳಿದ್ದೇನು?
ಅಕ್ಟೋಬರ್ 24 ರಂದು ಶಾಂಘೈನಲ್ಲಿ ಜಾಕ್ ಮಾ ಮಾತನಾಡಿದ್ದರು. ಈ ವೇಳೆ ಇಂದಿನ ಹಣಕಾಸು ವ್ಯವಸ್ಥೆಯು ಕೈಗಾರಿಕಾ ಯುಗದ ಪರಂಪರೆಯಾಗಿದೆ. ಮುಂದಿನ ಪೀಳಿಗೆ ಮತ್ತು ಯುವಜನರಿಗಾಗಿ ನಾವು ಹೊಸದನ್ನು ಸ್ಥಾಪಿಸಬೇಕು. ನಾವು ಪ್ರಸ್ತುತ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಭಾಷಣ ಮಾಡಿದ್ದು ಚೀನಾ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿತ್ತು.
ಜಾಕ್ ಮಾ ಭಾಷಣ ಚೀನಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಜನ ಜಾಕ್ ಮಾ ಸುರಕ್ಷತೆಯ ಬಗ್ಗೆ ಆಗಲೇ ಅನುಮಾನ ವ್ಯಕ್ತಪಡಿಸಿ ಪ್ರಶ್ನೆಗಳನ್ನು ಎತ್ತಿದ್ದರು.
ತನಿಖೆ ಆರಂಭಿಸಿದ್ದು ಯಾಕೆ?
ಜಾಕ್ ಮಾ ಆಂಟ್ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದರು. ನವೆಂಬರ್ ನಲ್ಲಿ ಈ ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ ಮಾಡಿ 37 ಶತಕೋಟಿ ಡಾಲರ್ ಹಣ ಸಂಗ್ರಹಿಸಲು ಮುಂದಾಗಿತ್ತು. ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಐಪಿಒ ಸಂಗ್ರಹಿಸಿದ ಕಂಪನಿಯಾಗಿ ಹೊರ ಹೊಮ್ಮುವ ಸಾಧ್ಯತೆ ಇತ್ತು. ಮಾಧ್ಯಮಗಳಲ್ಲಿ ಈ ವಿಚಾರ ಪ್ರಕಟವಾಗುತ್ತಿದ್ದಂತೆ ಹಲವು ಮಂದಿ ಅನುಮಾನ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಚೀನಾ ಸರ್ಕಾರ ಐಪಿಒವನ್ನು ಅಮಾನತಿನಲ್ಲಿಟ್ಟು, ಆಲಿಬಾಬಾ ಕಂಪನಿಯ ಮಾರುಕಟ್ಟೆ ಏಕಸ್ವಾಮ್ಯದ ಬಗ್ಗೆ ತನಿಖೆ ಆರಂಭಿಸಿತ್ತು.
ಚೀನಾ ಸರ್ಕಾರದ ಬಗ್ಗೆ ಬಹಿರಂಗ ಟೀಕೆ, ಐಪಿಒ ಬಿಡುಗಡೆ, ಆಲಿಬಾಬಾ ಕಂಪನಿಯ ಮೇಲೆ ತನಿಖೆ ಈ ಎಲ್ಲ ವಿಚಾರಗಳು ಒಂದಕ್ಕೊಂದು ಹೋಲಿಕೆ ಆಗುತ್ತಿರುವ ಕಾರಣ ಜಾಕ್ ಮಾ ಸುರಕ್ಷತೆಯ ಬಗ್ಗೆ ಜನ ಆಗಲೇ ಪ್ರಶ್ನಿಸಿದ್ದರು.