ಮನುಷ್ಯನ ದೇಹದಲ್ಲಿ ಕಣ್ಣು ಬಹುಮುಖ್ಯವಾದ ಅಂಗ. ಮನುಷ್ಯನ ಆರೋಗ್ಯ, ಸುಖ-ಸಂತೋಷ, ನೋವು-ದುಃಖ ಎಲ್ಲವೂ ಕೂಡ ಕಣ್ಣಿನಲ್ಲಿಯೇ ವ್ಯಕ್ತವಾಗುತ್ತದೆ. ಕಣ್ಣು ಅತ್ಯಂತ ಸೂಕ್ಷ್ಮವಾಗಿರುತ್ತದೆ. ನಾವು ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಮೊದಲು ನಮ್ಮ ಕಣ್ಣುಗಳಿಗೆ ಅಗತ್ಯವಾಗಿ ಆರೋಗ್ಯಕರ ಸ್ಥಿತಿಯಲ್ಲಿ ಇರಬೇಕೆಂದರೆ ನಮ್ಮ ಕಣ್ಣುಗಳಿಗೆ ರಕ್ಷಣೆಕೊಡುವ ಆಹಾರಗಳನ್ನು ಸೇವಿಸಿದರೆ ಮಾತ್ರ ಸಾಧ್ಯ.
Advertisement
* ಕ್ಯಾರೆಟ್ ಮತ್ತು ಇತರ ಹಣ್ಣು-ತರಕಾರಿಗಳು ಕಣ್ಣಿನ ಆರೋಗ್ಯಕ್ಕೆ ಉತ್ತಮ. ವಿಟಮಿನ್ ಎ ಇರುವ ಆಹಾರ ಪದಾರ್ಥಗಳು ರೆಟಿನಾ ಮತ್ತು ಕಣ್ಣಿನ ಇತರ ಭಾಗಗಳು ಚೆನ್ನಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
Advertisement
Advertisement
* ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಕೂಡ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು, ಇದು ಕಣ್ಣುಗಳ ದೃಷ್ಟಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.
Advertisement
* ಮೊಟ್ಟೆಯನ್ನು ಒಂದು ಸಂಪೂರ್ಣ ಆಹಾರವೆಂದು ಪರಿಗಣಿಸಬಹುದು. ನಿಮ್ಮ ಉಪಹಾರಕ್ಕೆ ಒಂದು ಮೊಟ್ಟೆಯನ್ನು ಸೇರಿಸಿದರೆ ನಿಮ್ಮ ದಿನಪೂರ್ತಿ ಅಗತ್ಯವಿರುವ ವಿಟಮಿನ್‍ಗಳ ಮತ್ತು ಜೀವಸತ್ವಗಳ ಪೂರೈಕೆಯಾಗುತ್ತದೆ.
* ಬೀಟ್‍ರೂಟ್ ವಿಟಮಿನ್ ಎ ಸಮೃದ್ಧವಾಗಿ ಇರುವ ಬೇರಿನ ಜಾತಿಯ ಆಹಾರ. ನಿಮ್ಮ ಕಣ್ಣುಗಳು ಉತ್ಸಾಹಭರಿತ ಮತ್ತು ಸಂತೋಷದಿಂದ ಕೂಡಿರಬೇಕಾದಲ್ಲಿ ಈ ಬೀಟ್‍ರೂಟ್ ತರಕಾರಿಯನ್ನು ಸಾಕಷ್ಟು ಸೇವಿಸಬೇಕು.
* ಕ್ಯಾರೆಟ್ ಜ್ಯೂಸ್ ಕಣ್ಣಿನ ದೃಷ್ಟಿಗೆ ವಿಟಮಿನ್ ಎ ಬಹಳ ಮುಖ್ಯ. ಕ್ಯಾರೆಟ್‍ನಲ್ಲಿ ವಿಟಮಿನ್ ಎ ಅಧಿಕವಾಗಿದ್ದು,ಕಣ್ಣುಗಳ ರೆಟಿನಾದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
* ಪಾಲಕ್, ಮೆಂತ್ಯೆ, ಹರಿವೆ ಮುಂತಾದ ಸೋಪ್ಪುಗಳಲ್ಲಿ ವಿಟಮಿನ್ ಸಿ ಇರುತ್ತದೆ.
* ಮೂಸಂಬಿ, ಕಿತ್ತಳೆ, ನಿಂಬೆ, ದಾಳಿಂಬೆ ಮುಂತಾದ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಈ ವಿಟಮಿನ್ ಕಣ್ಣಿನ ನರಗಳು ಆರೋಗ್ಯವನ್ನು ಕಾಪಾಡುತ್ತದೆ.