– ಇದು ಸುಮಲತಾv/sಜೆಡಿಎಸ್ ಅಲ್ಲ, ಸುಮಲತಾv/sಅಕ್ರಮ ಗಣಿಗಾರಿಕೆ
– ಬಿಲೋದಿ ಬೆಲ್ಟ್ ಭಾಷೆ ಶುರುವಾಗಿದೆ
ಮೈಸೂರು: ಕೆಆರ್‍ಎಸ್ ಬಿರುಕಿನ ವಿಚಾರ ಸುಮಲತಾ ವರ್ಸಸ್ ಜೆಡಿಎಸ್ ಅಲ್ಲ. ಬದಲಾಗಿ ಸುಮಲತಾ ವರ್ಸಸ್ ಅಕ್ರಮ ಗಣಿಗಾರಿಕೆ. ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ನನ್ನ ಮಾತಿಗೆ ಹೆದರಿ ಪ್ರಕರಣ ಡೈವರ್ಟ್ ಮಾಡುವ ಯತ್ನ ಮಾಡ್ತಿದ್ದಾರೆ. ಇದು ಜನರಿಗೆ ಅರ್ಥವಾಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ವಾಗ್ದಾಳಿ ನಡೆಸಿದ್ದಾರೆ.
Advertisement
ನಗರದಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಕಣ್ಣೀರು ಹಾಕಿ ಮತ ಪಡೆಯೋದು, ಕಣ್ಣೀರು ಹಾಕಿ ಚುನಾವಣಾ ಪ್ರಚಾರ ಮಾಡೋದು ಯಾರ ಕೆಲಸ ಅಂತ ರಾಜ್ಯದ ಜನರಿಗೆ ಗೊತ್ತಿದೆ. ನನಗೆ ಅಂತಹ ಕಣ್ಣೀರಿನ ಪಾಲಿಟಿಕ್ಸ್ ಬೇಕಾಗಿಲ್ಲ. ನನ್ನ ಮೇಲಿನ ಆರೋಪಗಳ ಅಸ್ತ್ರಗಳು ಮುಗಿದಿವೆ. ಹೀಗಾಗಿ ಈಗ ಸೊಂಟದ ಕೆಳಗಿನ ಭಾಷೆ ಶುರು ಮಾಡಿದ್ದಾರೆ. ಫೋಟೋ ಎಡಿಟ್, ವೀಡಿಯೋ ಎಡಿಟ್ ಮಾಡಲಿ. ಇದು ಅವರಿಗೆ ಹೊಸದಲ್ಲ. ಹೀಗೆ ಮಾಡಿ ನನಗೆ ಹೆದರಿಸು ವ್ಯರ್ಥ ಪ್ರಯತ್ನ ಸಾಗಿದೆ. ನಾನು ಇದಕ್ಕೆ ಹೆದರಲ್ಲ, ಕುಗ್ಗಲ್ಲ ಎಂದು ಎಚ್ಚರಿಸಿದ್ದಾರೆ.
Advertisement
Advertisement
ಜಲಾಶಯದ ಬಿರುಕಿನ ವಿಚಾರ ಮಾತನಾಡಿದ್ರೆ ಅಂಬರೀಶ್ ಪ್ರಾರ್ಥಿವ ಶರೀರದ ವಿಚಾರ ಮಾತಾಡುತ್ತಾರೆ. ಇದೇ ವಿಚಾರ ಅವರು ಮಾತಾಡಿ ಮಾತಾಡಿ ಚುನಾವಣೆಯಲ್ಲಿ ಪಾಠ ಕಲಿತಿದ್ದಾರೆ. ಇನ್ನೂ ಮಾತಾಡಲಿ ಬಿಡಿ. ಕೆಆರ್ ಎಸ್ ವಿಚಾರದಲ್ಲಿ ಧ್ವನಿ ಎತ್ತಿದ್ದಕ್ಕೆ ನಾನು ಯಾಕೆ ಕ್ಷಮೆ ಕೇಳಲಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ವಿಧಾನಸೌಧಕ್ಕೆ ಇರುವ ಸೇಫ್ಟಿ KRSಗೆ ಇಲ್ಲ: ಸುಮಲತಾ ಆತಂಕ
Advertisement
ಅಕ್ರಮ ಗಣಿಗಾರಿಕೆ ಪರ ಇರುವವರು ಮಹಿಳೆಯನ್ನು ಅವಮಾನಿಸುವವರು ಮಂಡ್ಯ ಜನರ ಕ್ಷಮೆ ಕೇಳಲಿ. ಮೊನ್ನೆ ಜಲಾಶಯದ ಬಿರುಕಿನ ವಿಚಾರದಲ್ಲಿ ಬಂದಿರೋ ರೀಪೋರ್ಟ್ ತಜ್ಞರ ವರದಿಯಲ್ಲ. ಅದು ಅಧಿಕಾರಿಗಳ ವರದಿ ಅಷ್ಟೆ ಎಂದರು.