ಸಂಡೇ ಇವತ್ತು ರಜೆ. ಹೊರಗಡೆ ಬಾಡೂಟ ಮಾಡೋಣ ಅಂದ್ರೆ ಕೊರೊನಾ ಭಯ. ಇತ್ತ ಊರು ನೆನಪು ಆಗ್ತಿರುತ್ತೆ. ಅದೇ ಅನ್ನ-ಸಾಂಬಾರ್ ತಿಂದು ಬೇಜಾರು ಆಗಿರುತ್ತೆ. ಇನ್ನು ಚಿಕನ್ ಮಾಡೋಣ ಅಂದ್ರೆ ಬ್ಯಾಚೂಲರ್ ಗಳ ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಎಲ್ಲ ವ್ಯವಸ್ಥೆ ಇರಲ್ಲ. ಕಡಿಮೆ ಪದಾರ್ಥ ಬಳಸಿ ಹೆಚ್ಚು ಶ್ರಮವಿಲ್ಲದೇ ನಾಟಿ ಚಿಕನ್ ಫ್ರೈ ಮಸಾಲ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ನಾಟಿ ಚಿಕನ್ – 1 ಕೆಜಿ
ಈರುಳ್ಳಿ- 1 (ಮಧ್ಯಮ ಗಾತ್ರದ್ದು)
ಕೆಂಪು ಮೆಣಸಿನಕಾಯಿ- 8 ರಿಂದ 10
ಬೆಳ್ಳುಳ್ಳಿ- 8
ಶುಂಠಿ- ಒಂದು ಇಂಚು
ಏಲಕ್ಕಿ- 4
ಧನಿಯಾ- 2 ಟಿ ಸ್ಪೂನ್
ಗರಂ ಮಸಾಲ- 1 ಟೀ ಸ್ಪೂನ್
ಚಕ್ಕೆ- ಸ್ವಲ್ಪ
ಕರಿಬೇವು- 5 ರಿಂದ 6 ದಳ
ಉಪ್ಪು – ರುಚಿಗೆ ತಕ್ಕಷ್ಟು
ಅರಿಶಿನ- ಚಿಟಿಕೆ
ಎಣ್ಣೆ
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಬಿಸಿ ನೀರಿನಲ್ಲಿ ಎರಡು ಬಾರಿ ಚಿಕನ್ ತೊಳೆದು ಎತ್ತಿಟ್ಟುಕೊಳ್ಳಿ.
* ಬೆಳ್ಳುಳ್ಳಿ ಮತ್ತು ಶುಂಠಿಯನ್ನ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ.
* ನಂತರ ಧನಿಯಾ, ಚಕ್ಕೆ, ಏಲಕ್ಕಿ, ಕೆಂಪು ಮೆಣಸಿನಕಾಯಿ ಹುರಿದುಕೊಂಡು ಮಿಕ್ಸಿ ಬೌಲ್ ಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ.
* ಇದೀಗ ಸ್ಟೌವ್ ಆನ್ ಪ್ಯಾನ್ ಇಟ್ಟುಕೊಳ್ಳಿ. ಪ್ಯಾನ್ ಬಿಸಿಯಾಗ್ತಿದ್ದಂತೆ ಎರಡರಿಂದ ಮೂರು ಟೇಬಲ್ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗ್ತಿದ್ದಂತೆ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಫ್ರೈ ಮಾಡಿ.
Advertisement
* ಇದೇ ಪ್ಯಾನ್‍ಗೆ ಸಣ್ಣದಾಗಿ ಕತ್ತಿರಿಸಿಕೊಂಡಿರುವ ಈರುಳ್ಳಿ ಮತ್ತು ಕರಿಬೇವು ಮಿಕ್ಸ್ ಮಾಡಿ. ಈರುಳ್ಳಿ ಗೋಲ್ಡನ್ ಕಲರ್ ಬರೋವರೆಗೂ ಕಡಿಮೆ ಉರಿಯಲ್ಲಿ ಫ್ರೈ ಮಾಡಬೇಕು.
* ತದನಂತರ ರುಬ್ಬಿಕೊಂಡಿರುವ ಮಸಲಾವನ್ನ ಮಿಕ್ಸ್ ಮಾಡಿ, ಚೆನ್ನಾಗಿ ಕಲಕಿದ ನಂತರ ಚಿಕನ್ ಸೇರಿಸಿ 4 ರಿಂದ 5 ನಿಮಿಷ ಪ್ಲಿಪ್ ಮಾಡುತ್ತಿರಬೇಕು.
* ಮಸಲಾದಲ್ಲಿ ಚಿಕನ್ ಡಿಪ್ ಆಗ್ತಿದ್ದಂತೆ ಚಿಟಿಕೆ ಅರಿಶಿನ, ಒಂದು ಟೀ ಸ್ಪೂನ್ ಗರಂ ಮಸಲಾ, ಕೋತಂಬರಿ ಸೊಪ್ಪು ಸೇರಿಸಿ 4 ರಿಂದ 5 ನಿಮಿಷ ಬೇಯಿಸಿದ್ರೆ ನಾಟಿ ಚಿಕನ್ ಫ್ರೈ ರೆಡಿ.