ಕಾರವಾರ: ಬೃಹದಾಕಾರದ ಕಡಲಾಮೆಗಳ 125 ಮೊಟ್ಟೆಗಳು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನಲ್ಲಿ ಪತ್ತೆಯಾಗಿದೆ.
ಅಳಿವಿನಂಚಿನಲ್ಲಿರುವ ಬೃಹದಾಕಾರದ ಕಡಲಾಮೆ 125 ಮೊಟ್ಟೆಗಳು ಕಡಲತೀರದಲ್ಲಿ ಪತ್ತೆಯಾಗಿದ್ದು, ಅವುಗಳನ್ನು ರಕ್ಷಣೆ ಮಾಡಲಾಗಿದೆ. ಪ್ರತಿ ವರ್ಷ ಕಡಲಾಮೆಗಳು ಕಾಸರಕೋಡಿನ ಬಂದರು ಜಾಗದ ಬಳಿ ಮೊಟ್ಟೆ ಇಟ್ಟು 45 ದಿನದ ನಂತರ ಮರಿ ಮಾಡಿ ಕರೆದುಕೊಂಡು ಹೋಗುತ್ತವೆ. ಐದು ಅಡಿ ಸುತ್ತಳತೆಗೂ ಹೆಚ್ಚು ಹಾಗೂ ಮೂರು ಅಡಿಗೂ ಹೆಚ್ಚು ಈ ಆಮೆಗಳು ಬೆಳೆಯುತ್ತದೆ.
Advertisement
Advertisement
ಸದ್ಯ ಅವನತಿಯ ಅಂಚಿನಲ್ಲಿರುವ ಈ ಆಮೆಗಳು ಸಮುದ್ರದ ತಡದಲ್ಲಿನ ಯಾಂತ್ರಿಕ ಬದಲಾವಣೆಯಿಂದಾಗಿ ತನ್ನ ವಂಶಗಳನ್ನು ಕಳೆದುಕೊಳ್ಳುತಿದ್ದು ಅಳಿವಿನಂಚಿಗೆ ತಲುಪಿದೆ. ಇಂದು ಅರಣ್ಯ ಇಲಾಖೆ ಈ ಮೊಟ್ಟೆಗಳನ್ನು ರಕ್ಷಣೆಮಾಡಿದ್ದು ಕೃತಕ ಶಾಖ ನೀಡಿ 45 ದಿನದ ನಂತರ ಸಮುದ್ರಕ್ಕೆ ಬಿಡಲಿದ್ದಾರೆ.