ಬೆಂಗಳೂರು: ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಇಂದು ರೈತರ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೈತರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಸಂಬಂಧ ತಮ್ಮ ಫೇಸ್‍ಬುಕ್ ಲ್ಲಿ ಬರೆದುಕೊಂಡಿರುವ ದಾಸ, ರೈತರ ಕಠಿಣ ಶ್ರಮಕ್ಕೆ ಧನ್ಯವಾದಗಳನ್ನು ಧನ್ಯವಾದಗಳನ್ನು ಸಮರ್ಪಿಸೋಣ ಎಂದು ಕರೆ ನೀಡಿದ್ದಾರೆ.
Advertisement
Advertisement
ದರ್ಶನ್ ಹೇಳಿದ್ದೇನು..?
ರೈತರು ನಿಜವಾದ ವೀರರಾಗಿದ್ದಾರೆ ಏಕೆಂದರೆ ಅವರ ಸಮರ್ಪಣೆ ಮತ್ತು ಶ್ರಮದಿಂದ, ಬಂಜರು ಭೂಮಿಯನ್ನು ಆಹಾರವನ್ನು ಉತ್ಪಾದಿಸುವ ಭೂಮಿಯಾಗಿ ಪರಿವರ್ತಿಸಿ ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಮಣ್ಣಿನಲ್ಲಿ ಇರಿಸಿ ಅದನ್ನು ಜೀವಿಸಲು ಮತ್ತು ನಮಗೆ ಆಹಾರವನ್ನು ಕೊಡುತ್ತಾರೆ. ಅವರ ಪ್ರಯತ್ನಕ್ಕೆ ಧನ್ಯವಾದಗಳು ಮತ್ತು ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ. ರೈತ ದಿನಾಚರಣೆಯ ಶುಭಾಶಯಗಳು ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
Advertisement
Advertisement
ದೇಶದ 5ನೇ ಪ್ರಧಾನಿ ಮತ್ತು ರೈತ ನಾಯಕ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವಾದ ಡಿಸೆಂಬರ್ 23 ರಂದು ಪ್ರತಿವರ್ಷ ರಾಷ್ಟ್ರೀಯ ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ. ಚರಣ್ ಸಿಂಗ್ ರವರು ತಮ್ಮ ಅವಧಿಯಲ್ಲಿ ದೇಶದ ಅನ್ನದಾತರ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಹತ್ತಾರು ನೀತಿಗಳನ್ನು ಜಾರಿಗೆ ತಂದಿದ್ದಾರೆ. ಆಧುನಿಕ ಕೃಷಿ ಪದ್ಧತಿ ಅಳವಡಿಕೆಗೆ ಪ್ರೋತ್ಸಾಹ ನೀಡಿದ್ದರು. ಅವರು ಸ್ವತಹಃ ರೈತ ಕುಟುಂಬಕ್ಕೆ ಸೇರಿದವರಾಗಿದ್ದರಿಂದ ರೈತರ ಕಷ್ಟಗಳನ್ನು ಅರಿತವರಾಗಿದ್ದರು. ಸ್ವಾತಂತ್ರ್ಯ ಪೂರ್ವದಿಂದ ಸ್ವಾತಂತ್ಯ್ರ ನಂತರದವರೆಗೂ ಕೃಷಿಗೆ ಅವರ ಕೊಡುಗೆ ಅಪಾರವಾಗಿದೆ.
ದೇಶದ ಕೃಷಿಕರ ಸಮಸ್ಯೆಗಳಿಗೆ ದನಿಯಾದ ಮಾಜಿ ಪ್ರಧಾನಮಂತ್ರಿ ದಿ. ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದಂದು ಎಲ್ಲ ರೈತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನದ ಶುಭಕಾಮನೆಗಳು. ಕೃಷಿ ಪ್ರಧಾನವಾದ ನಮ್ಮ ದೇಶದ ಹಿತ ಅನ್ನದಾತನ ಹಿತದಲ್ಲೇ ಅಡಗಿದೆ. #KisanDiwas pic.twitter.com/bogOejQ4Q3
— CM of Karnataka (@CMofKarnataka) December 23, 2020
ಭಾರತದ ಗ್ರಾಮೀಣ ಜನಸಂಖ್ಯೆಯ ಶೇ.80 ಕ್ಕಿಂತ ಹೆಚ್ಚು ಜನರಿಗೆ ಕೃಷಿಯೇ ಆದಾಯದ ಮುಖ್ಯ ಮೂಲವಾಗಿದೆ. ರೈತ ದಿನ ಅಥವಾ ರಾಷ್ಟ್ರೀಯ ರೈತ ದಿನಾಚರಣೆ ಅಥವಾ ಕಿಸಾನ್ ದಿವಸ್ ಅನ್ನು ಪ್ರತಿವರ್ಷ ಡಿಸೆಂಬರ್ 23 ರಂದು ರಾಷ್ಟ್ರವ್ಯಾಪಿ ಆಚರಿಸಲಾಗುತ್ತದೆ.
View this post on Instagram