ಬಾಗಲಕೋಟೆ: ಬಾಗಲಕೋಟೆ ಸಮೀಪದ ಮುಚಖಂಡಿ ಗ್ರಾಮದಲ್ಲಿ ವಿಷ ಸರ್ಪ ಕಾಣಿಸಿಕೊಂಡಿದ್ದು, ಅಲ್ಲಿದ್ದ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಇದನ್ನೂ ಓದಿ:ಬೆಂಗ್ಳೂರಲ್ಲಿ ಪತ್ತೆ ಆಯ್ತು ಮರಿ ಬಿಳಿ ನಾಗರಹಾವು
ಮನೆಯೊಂದರ ಕಟ್ಟಿಗೆಯೊಂದರಲ್ಲಿ ಸರ್ಪವೊಂದು ಅವಿತುಕೊಂಡಿತ್ತು. ನಂತರ ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞರಾದ ಸಂತೋಷ್ ಪಾಟೀಲ ಹಾಗೂ ಮಹ್ಮದ್ ಶಫೀಕ್ ಎಂಬವರು ವಿಷ ಸರ್ಪ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ.
ಇಷ್ಟು ದಿನ ಕಾಣಿಸಿಕೊಳ್ಳದೇ ಇದ್ದ ಸರ್ಪ ಇಂದು ಮಳೆಯಿಂದಾಗಿ ಹೊರಗೆ ಬಂದು ಕಟ್ಟಿಗೆಯಲ್ಲಿ ಅವಿತುಕೊಂಡಿತ್ತು. ಈ ವೇಳೆ ಹಾವನ್ನು ಕಂಡು ಅಲ್ಲಿದ್ದ ಸ್ಥಳೀಯರು ಗಾಬರಿಗೊಂಡು ಹಾವು ಹಿಡಿಯುವವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಲ್ಲದೇ ಇದು ಅತ್ಯಂತ ವಿಷಕಾರಿ ಸರ್ಪವಾಗಿದ್ದು, ಕಚ್ಚಿದರೆ ಪ್ರಾಣಾಪಾಯ ಆಗುವುದು ಖಚಿತ ಎಂದು ತಿಳಿದ ಗ್ರಾಮಸ್ಥರು ವಿಷಕಾರಿ ಸರ್ಪಕ್ಕೆ ಯಾವುದೇ ತೊಂದರೆ ಮಾಡದೆ, ಹಾವು ಹಿಡಿಯವವರು ಬರುವವರೆಗೂ ಅದನ್ನು ಎಲ್ಲಿಯೂ ಹೋಗದಂತೆ ನೋಡಿಕೊಂಡರು. ಇದನ್ನೂ ಓದಿ:ಅಪರೂಪದ ಬಿಳಿ ನಾಗರಹಾವು ಪ್ರತ್ಯಕ್ಷ – ರಸ್ತೆಯಲ್ಲಿಯೇ ಕೈ ಮುಗಿದ ಜನ
ನಂತರ ಸ್ನೇಕ್ ಕ್ಯಾಚರ್ ಬಂದು ಹಾವನ್ನ ಹಿಡಿದು ಚೀಲದಲ್ಲಿ ಹಾಕಿಕೊಂಡು ಅರಣ್ಯಕ್ಕೆ ಕೊಂಡೊಯ್ದದರು. ಇದನ್ನೂ ಓದಿ: ಭಾರೀ ಗಾತ್ರದ ನಾಗರಹಾವಿನ ರಕ್ಷಣೆ- ಐತಾಳರ ಕಾರ್ಯಾಚರಣೆ ಬಹಳ ರೋಚಕ