ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ತಮ್ಮ ಕಚೇರಿ ಹಾನಿ ಮಾಡಿದ್ದಕ್ಕೆ 2 ಕೋಟಿ ರೂ. ಪರಿಹಾರ ಕೋರಿ ಮುಂಬೈ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ಸೆಪ್ಟೆಂಬರ್ 9 ರಂದು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಕಂಗನಾ ಅವರ ಮುಂಬೈನ ಬಾಂದ್ರಾದಲ್ಲಿರುವ ಪಾಲಿ ಹಿಲ್ ಬಂಗಲೆಯನ್ನು ಅಕ್ರಮ ಕಟ್ಟಡ ಎಂದು ಪರಿಗಣಿಸಿ ತೆರವು ಕಾರ್ಯಾಚರಣೆ ಮಾಡಿತ್ತು.
Advertisement
Advertisement
ಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಕಂಗನಾ ಅವರು, ಬಿಎಂಸಿ ಈಗಾಗಲೇ ಬಂಗಲೆಗೆ ಶೇ.40ರಷ್ಟು ಹಾನಿ ಮಾಡಿದೆ. ಅಲ್ಲದೆ ಬಂಗಲೆಯ ಒಳಗಡೆ ಇದ್ದ ಕೆಲವೊಂದು ಅಪರೂಪದ ಕಲಾತ್ಮಕ ವಸ್ತುಗಳನ್ನು ಕೂಡ ನಾಶಪಡಿಸಿದೆ. ಹೀಗಾಗಿ ಬಿಎಂಸಿ ತನಗೆ 2 ಕೋಟಿ ರೂ. ಪರಿಹಾರ ನೀಡಬೇಕು ಎಂದು ತಿಳಿಸಿದ್ದಾರೆ.
Advertisement
Advertisement
ಸೆಪ್ಟೆಂಬರ್ 7 ರಂದು ಬಿಎಂಸಿ ನೋಟಿಸ್ ಕಳುಹಿಸುವ ಮೂಲಕ ಕಿರುಕುಳ ನೀಡಲು ಹೊರಟಿದೆ. ಅಲ್ಲದೆ ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ತಾನು ಮನಾಲಿಯಲ್ಲಿದ್ದಾಗ 24 ಗಂಟೆಯೊಳಗಡೆ ನೋಟಿಸ್‍ಗೆ ಉತ್ತರ ನೀಡಲು ತಿಳಿಸಿದ್ದರು ಎಂದು ಆರೋಪಿಸಿದ್ದಾರೆ. ಅದಾದ ಎರಡು ದಿನಗಳ ಬಳಿಕ ಕಂಗನಾ ಮುಂಬೈಗೆ ವಾಪಸ್ಸಾಗಿದ್ದರು. ಈ ವೇಳೆ ಅವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬರಲು ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ದೂರು ನೀಡಿದ್ದರ ಪರಿಣಾಮ ಅವರಿಗೆ ಕೇಂದ್ರ ಸರ್ಕಾರ ‘ವೈ-ಪ್ಲಸ್’ ಭದ್ರತೆ ಒದಗಿಸಿತ್ತು.
ಕಂಗನಾ ಸಲ್ಲಿಸುವ ಅರ್ಜಿ ಸಂಬಂಧ ಸೆಪ್ಟೆಂಬರ್ 22 ರಂದು ಮುಂಬೈ ಹೈಕೊರ್ಟ್‍ನಲ್ಲಿ ವಿಚಾರಣೆ ನಡೆಯಲಿದೆ.