ಬೆಂಗಳೂರು: ಜನತಾ ಲಾಕ್‍ಡೌನ್ ನಲ್ಲಿ ಸರ್ಕಾರ ಜನಸಾಮಾನ್ಯರಿಗೆ ಒಂದಿಷ್ಟು ರಿಲೀಫ್ ನೀಡಿದೆ. ಆದ್ರೆ ಜನ ಮಾತ್ರ ಬೆಳಗ್ಗೆ 6 ರಿಂದ 10ರೊಳಗೆ ಅನಾವಶ್ಯಕವಾಗಿ ನಗರದಲ್ಲಿ ಸಂಚರಿಸುತ್ತಿದ್ದಾರೆ. ಜನರ ನಿಯಂತ್ರಣಕ್ಕಾಗಿ ಪೂರ್ಣ ಪ್ರಮಾಣದ ಲಾಕ್‍ಡೌನ್ ಮಾಡುವ ಕುರಿತ ಚಚೆಗಳು ಸರ್ಕಾರದ ಮಟ್ಟದಲ್ಲಿ ನಡೆದಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಲಾಕ್‍ಡೌನ್ ಇದ್ರೂ ಕೆಲವರು ಅನಗತ್ಯವಾಗಿ ಓಡಾಡುತ್ತಿದ್ದಾರೆ. ಜನ ಜವಾಬ್ದಾರಿಯಿಂದ ನಡೆದುಕೊಂಡಲ್ಲಿ ಮಾತ್ರ ಕೊರೊನಾ ಕಂಟ್ರೋಲ್ ಮಾಡಬಹುದು. ಐದಾರು ದಿನದ ಲಾಕ್‍ಡೌನ್‍ಗೆ ಕೊರೊನಾ ನಿಯಂತ್ರಣಕ್ಕೆ ಬರಲ್ಲ. ಕಂಪ್ಲೀಟ್ ಲಾಕ್‍ಡೌನ್ ಮಾಡೋ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಆದ್ರೂ ಕೊರೊನಾ ತೀವ್ರತೆ ನೋಡಿದ್ರೇ ಮತ್ತೆ ಲಾಕ್‍ಡೌನ್ ಮಾರ್ಗಸೂಚಿ ಬದಲಾಗಬಹುದು. ಇದೇ ವಾರದಲ್ಲಿ ಕಂಪ್ಲೀಟ್ ಲಾಕ್‍ಡೌನ್ ಆದ್ರೂ ಅಚ್ಚರಿಯಿಲ್ಲ ಎಂಬ ಮಾತು ಕೇಳಿಬರುತ್ತಿವೆ.
ಕಂಪ್ಲೀಟ್ ಲಾಕ್‍ಡೌನ್ ಘೋಷಣೆಯಾದ್ರೆ ಈಗ ನೀಡಿರುವ ಎಲ್ಲ ವಿನಾಯ್ತಿಗಳು ರದ್ದಾಗುವ ಸಾಧ್ಯತೆಗಳಿವೆ. ಅಗತ್ಯ ವಸ್ತು ಖರೀದಿಗೆ 2 ಗಂಟೆಯಷ್ಟೇ ಅನುಮತಿ ಸಿಗಬಹುದು. ಬೆಳಗ್ಗೆ 6 ಗಂಟೆಯಿಂದ 8 ಗಂಟೆವರೆಗಷ್ಟೇ ಖರೀದಿಗೆ ಅವಕಾಶ ನೀಡಬಹುದು. ಬೆಳಗ್ಗೆ 8 ಗಂಟೆ ಬಳಿಕ ಎಲ್ಲವೂ ಸಂಪೂರ್ಣವಾಗಿ ಬಂದ್ ಆಗಬಹುದು. ವಾಹನಗಳ ಓಡಾಟದ ಮೇಲೆ ಸಂಪೂರ್ಣ ನಿರ್ಬಂಧ ಹೇರಬಹುದು. ಹೋಟೆಲ್, ಬಾರ್, ರೆಸ್ಟೋರೆಂಟ್‍ಗಳು ಕಂಪ್ಲೀಟ್ ಬಂದ್ ಆಗಬಹುದು. ಎಲ್ಲಾ ಸರ್ಕಾರಿ ಕಚೇರಿಗಳು, ಎಲ್ಲಾ ಕೈಗಾರಿಕೆಗಳು ಬಂದ್ ಆಗಬಹುದು ಮದುವೆ ವಿನಾಯ್ತಿ, ಕಟ್ಟಡ ಕಾಮಗಾರಿ ಬಂದ್ ಆಗಬಹುದು.
ಈ ನಡುವೆ ಎಂಎಲ್‍ಸಿ ಹೆಚ್.ವಿಶ್ವನಾಥ್ ಸಹ ಪೂರ್ಣ ಪ್ರಮಾಣದ ಲಾಕ್‍ಡೌನ್ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇತ್ತ ದೆಹಲಿಯಲ್ಲಿ ಲಾಕ್‍ಡೌನ್ ಒಂದು ವಾರ ವಿಸ್ತರಣೆಯಾಗಿದೆ.