ಮುಂಬೈ: ಸುಶಾಂತ್ ಸಿಂಗ್ ಸಾವಿಗೆ ಬಾಲಿವುಡ್‌ನಲ್ಲಿರುವ ಡ್ರಗ್ಸ್ ಮಾಫಿಯಾವೇ ಕಾರಣ ಎಂದು ಆರೋಪಿಸಿದ್ದ ನಟಿ ಕಂಗನಾ ರಣಾವತ್ ವಿರುದ್ಧ ಡ್ರಗ್ ಪರೀಕ್ಷೆ ನಡೆಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.
ಮಂಗಳವಾರ ಗೃಹ ಸಚಿವ ಅನಿಲ್ ದೇಶ್‌ಮುಖ್ ಕಂಗನಾ ವಿರುದ್ಧ ಡ್ರಗ್ ತನಿಖೆ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಮುಂಬೈ ಪೊಲೀಸರು ಶುಕ್ರವಾರದಿಂದ ಕಂಗನಾ ವಿರುದ್ಧ ತನಿಖೆ ಆರಂಭಿಸಿದ್ದಾರೆ.
Advertisement
Babur and his army ????#deathofdemocracy pic.twitter.com/L5wiUoNqhl
— Kangana Ranaut (@KanganaTeam) September 9, 2020
Advertisement
Advertisement
ಈ ಬಗ್ಗೆ ಟ್ವೀಟ್ ಮಾಡಿದ ಕಂಗನಾ, ಬಹಳ ಸಂತೋಷ. ನನ್ನನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಿ. ನನ್ನ ಕರೆಗಳನ್ನು ತನಿಖೆ ಮಾಡಿ ಡ್ರಗ್ ಪೆಡ್ಲರ್ ಜೊತೆ ಇರುವ ಸಂಬಂಧವನ್ನು ಪತ್ತೆ ಹಚ್ಚಿ. ಒಂದು ವೇಳೆ ತಪ್ಪು ಸಾಬೀತಾದರೆ ನಾನು ಮುಂಬೈ ತೊರೆಯುತ್ತೇನೆ ಎಂದು ಹೇಳಿದ್ದಾರೆ.
Advertisement
#DeathOfDemocracy pic.twitter.com/pbLleNulYa
— Kangana Ranaut (@KanganaTeam) September 9, 2020
ಈಗಾಗಲೇ ಕಂಗನಾ ಅಕ್ರಮವನ್ನು ಮನೆ ಮತ್ತು ಕಚೇರಿ ಕಟ್ಟಡಗಳನ್ನು ಕಟ್ಟಿದ್ದಾರೆ ಎಂದು ಆರೋಪಿಸಿ ಮುಂಬೈ ಪಾಲಿಕೆ ಕೆಡವಿ ಹಾಕಿದೆ. ಕಂಗನಾ ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಬಾಬರ್‌ಗೆ ಹೋಲಿಸಿ ಏಕ ವಚನದಲ್ಲಿ ಟೀಕೆ ಮಾಡಿದ ಬಳಿದ್ದರು. ಇದಾದ ಬಳಿಕ ಕಂಗನಾ ವಿರುದ್ಧ ಸರ್ಕಾರ ಡ್ರಗ್ ಪರೀಕ್ಷೆಗೆ ಆದೇಶಿಸಿತ್ತು.
संजय जी मुझे अभिव्यक्ति की पूरी आज़ादी है
मुझे अपने देश में कहीं भी जाने की आज़ादी है ।
मैं आज़ाद हूँ । pic.twitter.com/773n8XDESI
— Kangana Ranaut (@KanganaTeam) September 6, 2020