ಮುಂಬೈ: ಬಾಲಿವುಡ್ ಮಣಿಕರ್ಣಿಕಾ ಕಂಗನಾ ರಣಾವತ್‍ಗೆ ನಟಿ ರಾಖಿ ಸಾವಂತ್ ಮನವಿ ಮಾಡಿಕೊಂಡಿದ್ದಾರೆ. ನಿಮ್ಮ ಬಳಿ ಕೋಟಿ ಕೋಟಿ ಹಣವಿದೆ. ಆಕ್ಸಿಜನ್ ಖರೀದಿಸಿ ದೇಶ ಸೇವೆಯಲ್ಲಿ ಭಾಗಿಯಾಗಿ ಎಂದು ಹೇಳಿದ್ದಾರೆ.
ಕಂಗನಾ ರಣಾವತ್ ಮತ್ತು ರಾಖಿ ಸಾವಂತ್ ಇಬ್ಬರ ನಡುವಿನ ಕೋಳಿ ಜಗಳ ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಿಂದೆ ಮುಂಬೈ ಕುರಿತು ಕಂಗನಾ ನೀಡಿದ ಹೇಳಿಕೆಯಲ್ಲಿ ರಾಖಿ ಸಾವಂತ್ ಅತ್ಯಂತ ಕಟು ಪದಗಳಲ್ಲಿ ಟೀಕಿಸಿದ್ದರು. ಇದೀಗ ಕಂಗನಾ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಕಂಗನಾಜೀ ನಿಮ್ಮ ಬಳಿ ಕೋಟ್ಯಂತರ ರೂಪಾಯಿ ಹಣವನ್ನ ದೇಶಸೇವೆಗಾಗಿ ಬಳಸಿ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ನಿವಾಸದ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ರಾಖಿ ಸಾವಂತ್, ಎಲ್ಲರೂ ಸ್ಯಾನಿಟೈಸರ್ ಬಳಸಿ ಡಬಲ್ ಮಾಸ್ಕ್ ಹಾಕಿಕೊಳ್ಳಿ. ಸ್ಮಶಾನದಲ್ಲಿ ಹೆಣಗಳನ್ನ ಸುಡಲು ಜಾಗವಿಲ್ಲ. ದೇಶದ ಪರಿಸ್ಥಿತಿ ತುಂಬಾ ಕಠಿಣವಾಗಿದೆ. ನಿಮ್ಮನ್ನು ನೀವು ಕಾಪಾಡಿಕೊಳ್ಳೋದರ ಜೊತೆ ಪೋಷಕರನ್ನ ಕಾಪಾಡಿಕೊಳ್ಳಿ ಎಂದು ಕೊರೊನಾ ಜಾಗೃತಿ ಮೂಡಿಸಿದರು. ಇದನ್ನೂ ಓದಿ: ನೀನು ಸುಳ್ಳಿ, ಸುಶಾಂತ್ ಸಾವನ್ನ ವೈಯಕ್ತಿಯ ಲಾಭಕ್ಕೆ ಬಳಕೆ- ಮಹಾರಾಷ್ಟ್ರ ಸರ್ಕಾರದ ಬಳಿ ಕ್ಷಮೆ ಕೇಳು: ಕಂಗನಾಗೆ ರಾಖಿ ಸಾವಂತ್ ಆಗ್ರಹ
View this post on Instagram
ಕೆಲ ದಿನಗಳ ಹಿಂದೆ ತರಕಾರಿ ಖರೀದಿಗಾಗಿ ಮಾರುಕಟ್ಟೆಗೆ ಬಂದಿದ್ದ ರಾಖಿ ಸಾವಂತ್ ಪಿಪಿಇ ಕಿಟ್ ಧರಿಸಿದ್ದರು. ಈ ವೀಡಿಯೋ ನೋಡಿದ ನೆಟ್ಟಿಗರು ನಿಮ್ಮ ಪಿಪಿಇ ಕಿಟ್ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನೀನೇನು ಕೊಹಿನೂರು ವಜ್ರನಾ? ಭಿಕ್ಷೆ ಬೇಡೋಕೆ ಮುಂಬೈಗೆ ಯಾಕೆ ಬಂದೆ- ಕಂಗನಾಗೆ ರಾಖಿ ಪ್ರಶ್ನೆ