– ಐಡಿ ಹ್ಯಾಕ್ ಆಗಿದೆ ಎಂದ ಲಾಯರ್
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅತ್ಯಾಚಾರದ ಬೆದರಿಕೆ ಬಂದಿದೆ. ಕಂಗನಾ ನವರಾತ್ರಿ ಹಬ್ಬದ ಶುಭಾಶಯ ತಿಳಿಸಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಗೆ ಕಮೆಂಟ್ ಮಾಡಿದ್ದ ವಕೀಲರೊಬ್ಬರ ಖಾತೆಯಿಂದ ನಿಮ್ಮನ್ನ ನಡುರಸ್ತೆಯಲ್ಲಿ ರೇಪ್ ಮಾಡಬೇಕೆಂದು ಬೆದರಿಕೆ ಬಂದಿತ್ತು. ಕಮೆಂಟ್ ಗೆ ವ್ಯಾಪಕ ಆಕ್ರೋಶವಾಗುತ್ತಲೇ ಸ್ಪಷ್ಟನೆ ನೀಡಿರುವ ವಕೀಲ, ನನ್ನ ಫೇಸ್‍ಬುಕ್ ಐಡಿ ಹ್ಯಾಕ್ ಆಗಿದೆ ಎಂದಿದ್ದಾರೆ.
Advertisement
ಓಡಿಶಾದ ವಕೀಲ ಮೆಹೆಂದಿ ರಾಜಾ ಫೇಸ್‍ಬುಕ್ ಖಾತೆಯಿಂದ ವಿವಾದಾತ್ಮಕ ಕಮೆಂಟ್ ಮಾಡಲಾಗಿತ್ತು. ನಗರದ ಹೃದಯ ಭಾಗದಲ್ಲಿ ನಿಮ್ಮ ಅತ್ಯಾಚಾರ ಆಗಬೇಕೆಂದು ಆಕ್ಷೇಪಾರ್ಹ ಕಮೆಂಟ್‍ಗೆ ನೆಟ್ಟಿಗರು ಗರಂ ಆಗಿದ್ದರು. ಈ ಸಂಬಂಧ ಮೆಹೆಂದಿ ರಾಜಾ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಮೆಹೆಂದಿ ರಾಜಾ ಓಡಿಶಾದ ಝಾರಸಗುಢ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ. ಇದನ್ನೂ ಓದಿ: ಕಂಗನಾ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ – ಕ್ವೀನ್ ಗೆ ಶುರುವಾಯ್ತು ಬಂಧನ ಭೀತಿ?
Advertisement
Advertisement
ಇಂದು ನನ್ನ ಫೇಸ್‍ಬುಕ್ ಐಡಿ ಹ್ಯಾಕ್ ಆಗಿದ್ದರಿಂದ ಆಕ್ಷೇಪಾರ್ಹ ಕಮೆಂಟ್ ಪೋಸ್ಟ್ ಆಗಿದೆ. ಯಾವುದೇ ಮಹಿಳೆ ಮತ್ತು ಸಮುದಾಯದ ಬಗ್ಗೆ ನನಗೆ ದ್ವೇಷವಿಲ್ಲ. ಕಮೆಂಟ್ ನೋಡಿ ನಾನೇ ಆಶ್ಚರ್ಯಗೊಂಡಿದ್ದೇನೆ. ನನ್ನ ಖಾತೆಯಿಂದ ಕಮೆಂಟ್ ಬಂದ ಹಿನ್ನೆಲೆ ನಾನು ಕ್ಷಮೆ ಕೇಳುತ್ತೇನೆ. ಜನರು ನನ್ನ ಕ್ಷಮೆಯನ್ನ ಪ್ಪಿಕೊಳ್ಳಬೇಕು. ಜನರ ಭಾವನೆಗಳಿಗೆ ನೋವುಂಟು ಮಾಡಿದಕ್ಕೆ ಮತ್ತೊಮ್ಮೆ ಎಲ್ಲರ ಬಳಿ ಕ್ಷಮೆ ಕೇಳುತ್ತೇನೆ ಎಂದು ಮೆಹೆಂದಿ ರಾಜಾ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕಂಗನಾ ಕಟ್ಟಡ ನೆಲಸಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಶಿವಸೇನೆ
Advertisement
ಶನಿವಾರ ಮುಂಬೈನ ಬಾಂದ್ರಾ ನ್ಯಾಯಾಲಯ ಕಂಗನಾ ವಿರುದ್ಧ ಎಫ್‍ಐಆರ್ ದಾಖಲು ಮಾಡುವಂತೆ ಆದೇಶಿಸಿದೆ. ಸಾಹಿಲ್ ಆಶ್ರಫ್ ಅಲಿ ಸೈಯದ್ ಎಂಬವರು ಕಂಗನಾ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನ ಸಲ್ಲಿಸಿದ್ದರು. ಕಂಗನಾ ರಣಾವತ್ ಕಳೆದ ಕೆಲ ತಿಂಗಳುಗಳಿಂದ ಸ್ವಜನಪಕ್ಷಪಾತ ಮತ್ತು ಫೇವರಿಟಿಸಂ ಹೆಸರಲ್ಲಿ ಬಾಲಿವುಡ್ ನ್ನು ಅವಮಾನಿಸುತ್ತಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆ ಮತ್ತು ಖಾಸಗಿ ವಾಹಿನಿಗಳಿಗೆ ನೀಡಿರುವ ಸಂದರ್ಶನದಲ್ಲಿ ಹಿಂದೂ ಮತ್ತು ಮುಸ್ಲಿಂ ಎಂದು ಕಲಾವಿದರನ್ನ ವಿಂಗಡನೆ ಮಾಡುವ ಮೂಲಕ ಉದ್ಯಮವನ್ನ ಇಬ್ಭಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಸಾಹಿಲ್ ಅರ್ಜಿಯಲ್ಲಿ ಆರೋಪಿಸಿದ್ದರು. ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರದ ಬಳಿ ಕ್ಷಮೆ ಕೇಳು: ಕಂಗನಾಗೆ ರಾಖಿ ಸಾವಂತ್ ಆಗ್ರಹ
ಬಾಂದ್ರಾ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಜಯದೇವ್ ವೈ. ಗುಲೆ, ನಟಿ ಕಂಗನಾ ರಣಾವತ್ ವಿರುದ್ಧ ಸಿಆರ್ಪಿಸಿ 156 (3) ಪ್ರಕಾರ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಂಗನಾ ಅವರನ್ನ ವಿಚಾರಣೆಗೆ ಒಳಪಡಿಸಬಹುದು ಮತ್ತು ನಟಿ ವಿರುದ್ಧ ಸಾಕ್ಷ್ಯ ಲಭ್ಯವಾದ್ರೆ ಬಂಧಿಸುವ ಸಾಧ್ಯತೆಗಳು ದಟ್ಟವಾಗಿವೆ. ಇದನ್ನೂ ಓದಿ: ಕೋರ್ಟ್ ಆದೇಶದಂತೆ ತುಮಕೂರಲ್ಲಿ ಕಂಗನಾ ವಿರುದ್ಧ ಎಫ್‍ಐಆರ್
ತಮ್ಮ ವಿರುದ್ಧ ಎಫ್‍ಐಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಂಗನಾ, ನನ್ನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದ ಪಪ್ಪು ಸೇನೆ ನನ್ನ ಹಿಂದೆಯೇ ಬಿದ್ದಿದೆ. ನೀವು ನನ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ನಾನೇ ನಿಮ್ಮ ಬಳಿ ಬರುತ್ತೇನೆ ಎಂದು ಹೇಳಿದ್ದಾರೆ.