ನವದೆಹಲಿ: ಭಾರತದ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಅವರು ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಹೆಸರಿಸಿದ್ದು, ಓರ್ವ ಬ್ಯಾಟ್ಸ್ ಮ್ಯಾನಿಗಾಗಿ ಆ ತಂಡವನ್ನು ಬೆಂಬಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಮಾಧ್ಯಮದ ಜೊತೆಗೆ ಮಾತನಾಡಿರುವ ಸ್ಮೃತಿ ಮಂದಾನ, ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಸಂಜು ಸಮ್ಸನ್ ಅವರಿಗಾಗಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬೆಂಬಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಬಾರಿಯ ಐಪಿಎಲ್‍ನಲ್ಲಿ ಸಂಜು ಸಮ್ಸನ್ ಅವರು ಉತ್ತಮವಾಗಿ ಆಡುತ್ತಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.
Advertisement
Advertisement
ಸಂಜು ಸಮ್ಸನ್ ವಿಚಾರವಾಗಿ ಮಾತನಾಡಿರುವ ಸ್ಮೃತಿ ಮಂದಾನ, ಓರ್ವ ಯುವ ಆಟಗಾರ ಸ್ಫೋಟಕವಾಗಿ ಬ್ಯಾಟ್ ಬೀಸುವುದನ್ನು ನೋಡಲು ಬಹಳ ಸ್ಫೂರ್ತಿದಾಯಕವಾಗಿದೆ. ಸಂಜು ಸಮ್ಸನ್ ಅವರು ಬ್ಯಾಟ್ ಬೀಸುವ ಶೈಲಿ ನೋಡಿ ನಾನು ಅವರಿಗೆ ದೊಡ್ಡ ಅಭಿಮಾನಿಯಾಗಿದ್ದೇನೆ. ಆತನಿಗಾಗಿಯೇ ನಾನು ರಾಜಸ್ಥಾನ್ ರಾಯಲ್ಸ್ ತಂಡವನ್ನು ಬೆಂಬಲಿಸಲು ಆರಂಭಿಸಿದ್ದೇನೆ. ಅವರ ಬ್ಯಾಟಿಂಗ್ ನೆಕ್ಟ್ ಲೆವೆಲಿನಲ್ಲಿದೆ ಆತನಿಂದ ನಾನು ಕಲಿಯುತ್ತಿದ್ದೇನೆ ಎಂದು ಹೇಳಿದ್ದಾರೆ.
Advertisement
Advertisement
ನಾನು ಐಪಿಎಲ್‍ನಲ್ಲಿ ಎಲ್ಲ ಪಂದ್ಯಗಳನ್ನು ನೋಡುತ್ತೇನೆ. ಯಾವುದೋ ಒಂದೇ ಒಂದು ನಿರ್ದಿಷ್ಟ ತಂಡವನ್ನು ನಾನು ಬೆಂಬಲಿಸುವುದಿಲ್ಲ. ನಾನು ಎಲ್ಲ ತಂಡವನ್ನು ಬೆಂಬಲಿಸುತ್ತೇನೆ. ಎಲ್ಲ ತಂಡದ ಆಟಗಾರರನ್ನು ಇಷ್ಟಪಡುತ್ತೇನೆ. ನನಗೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ಎಂದರೆ ಇಷ್ಟ. ಹೀಗಾಗಿ ಎಲ್ಲರ ಪಂದ್ಯವನ್ನು ನೋಡುತ್ತೇನೆ. ಎಲ್ಲರನ್ನೂ ಬೆಂಬಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಸ್ಮೃತಿ ಮಂದಾನ ಅವರು ಮಹಿಳಾ ಐಪಿಎಲ್ ಆಡಲು ಸಿದ್ಧವಾಗಿದ್ದಾರೆ. ಪ್ರಪಂಚದ ಉನ್ನತ ಮಟ್ಟದ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಜೊತೆ ಯುಎಇನಲ್ಲಿ ಟಿ-20 ಆಡಲು ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಾರೆ. ಆದರೆ ಬಿಸಿಸಿಐ ಮಹಿಳಾ ಐಪಿಎಲ್ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಮೂಲಗಳ ಪ್ರಕಾರ ಮಹಿಳಾ ಐಪಿಎಲ್, ನವೆಂಬರ್ 4ರಿಂದ 9ರವರೆಗೆ ನಡೆಯಲಿದೆ ಎನ್ನಲಾಗಿದೆ. ಮೂರು ಮಹಿಳಾ ತಂಡಗಳು ನಾಲ್ಕು ಪಂದ್ಯಗಳನ್ನು ಆಡಲಿವೆ ಎಂದು ಹೇಳಲಾಗಿದೆ.
ಈ ಬಾರಿಯ ಐಪಿಎಲ್‍ನಲ್ಲಿ ಸಂಜು ಸಮ್ಸನ್ ಅವರು ಉತ್ತಮವಾಗಿ ಆಡಿದ್ದಾರೆ. ತಾವು ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡಿರುವ ಮೂರು ಪಂದ್ಯಗಲ್ಲಿ ಎರಡು ಭರ್ಜರಿ ಅರ್ಧಶತಕದ ಸಮೇತ 167 ರನ್ ಗಳಿಸಿದ್ದಾರೆ. ಜೊತೆಗೆ 16 ಭರ್ಜರಿ ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 42 ಬಾಲಿಗೆ 85 ರನ್ ಸಿಡಿಸಿರುವುದು ಈ ಬಾರಿಯ ಐಪಿಎಲ್‍ನ ಗರಿಷ್ಠ ಮೊತ್ತವಾಗಿದೆ.