– ಡೆನ್ಮಾರ್ಕ್ ಮತ್ತು ಕೆನಡಾದ ಅಧ್ಯಯನ ವರದಿ
– ಎ, ಬಿ, ಎಬಿ ರಕ್ತದ ಗುಂಪಿನವರಿಗೆ ಬೇಗ ಸೋಂಕು
ನವದೆಹಲಿ: ಕೋವಿಡ್ 19 ‘ಒ’ ರಕ್ತದ ಗುಂಪಿನವರಿಗೆ ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನ ಹೇಳಿದೆ.
ಡೆನ್ಮಾರ್ಕ್ ಮತ್ತು ಕೆನಡಾದ ಸಂಶೋಧಕರು ರೋಗಿಗಳ ರಕ್ತದ ಗುಂಪುಗಳನ್ನು ಅಧ್ಯಯನ ಮಾಡಿ ಯಾವ ರಕ್ತದ ಗುಂಪು ಹೊಂದಿದವರಿಗೆ ಬೇಗ ಕೊರೊನಾ ಬರುತ್ತದೆ ಎಂಬ ವರದಿಯನ್ನು ಪ್ರಕಟಿಸಿದ್ದಾರೆ.
Advertisement
ಎ, ಬಿ, ಎಬಿ ರಕ್ತದ ಗುಂಪಿನವರಿಗೆ ಕೊರೊನಾ ಬೇಗ ಬರುತ್ತದೆ ಎಂದು ಡೆನ್ಮಾರ್ಕ್ ಅಧ್ಯಯನ ತಿಳಿಸಿದೆ. ಈ ರಕ್ತವನ್ನು ಹೊಂದಿರುವ ರೋಗಿಗಳ ಮೇಲೆ ಯಾಕೆ ಬೇಗ ಸೋಂಕು ಬರುತ್ತದೆ ಎಂಬುದರ ಬಗ್ಗೆ ವರದಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಫೆ. 27ರಿಂದ ಜುಲೈ 30 ರವರೆಗೆ 8,41,327 ರೋಗಿಗಳಳ ಮೇಲೆ ಅಧ್ಯಯನ ನಡೆಸಿ ಈ ವರದಿಯನ್ನು ಡೆನ್ಮಾರ್ಕ್ ಸಂಶೋಧಕರು ತಯಾರಿಸಿದ್ದಾರೆ.
Advertisement
Advertisement
ಜಗತ್ತಿನಲ್ಲಿ ‘ಒ’ ರಕ್ತದ ಗುಂಪಿನವರು ಹೆಚ್ಚು ಜನರಿದ್ದಾರೆ. ಬೇರೆ ರಕ್ತದ ಗುಂಪಿನವರಿಗೆ ಹೋಲಿಸಿದರೆ ಇವರಿಗೆ ಕೊರೊನಾ ಬರುವ ಸಾಧ್ಯತೆ ಕಡಿಮೆ. ಒಂದು ವೇಳೆ ತಗಲಿದರೂ ಗಂಭೀರ ಸ್ವರೂಪಕ್ಕೆ ಹೋಗುವ ಸಾಧ್ಯತೆ ಕಡಿಮೆ ಎಂದು ವರದಿ ತಿಳಿಸಿದೆ.
Advertisement
ಕೆನಡಾ ಅಧ್ಯಯನದ ಪ್ರಕಾರ ಎ ಮತ್ತು ಎಬಿ ರಕ್ತದ ಗುಂಪಿನವರಿಗೆ ಕೊರೊನಾ ಬರುವ ಸಾಧ್ಯತೆ ಹೆಚ್ಚು ಮತ್ತು ಅಪಾಯವೂ ಹೆಚ್ಚು ಎಂದು ಹೇಳಿದೆ. ‘ಒ’ ರಕ್ತದ ಗುಂಪಿನವರಿಗೆ ಹೋಲಿಸಿದರೆ ಈ ರಕ್ತದ ಗುಂಪಿನವರು ಹೆಚ್ಚಿನ ಸಂಖ್ಯೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದೆ.
ಈ ಹಿಂದೆ ನಡೆದ ಅಧ್ಯಯನದಲ್ಲಿ ಎ ರಕ್ತದ ಗುಂಪು ಹೊಂದಿರುವ ಮಂದಿಗೆ ಹೃದಯ ಮತ್ತು ಗ್ಯಾಸ್ಟ್ರೀಕ್ ಕ್ಯಾನ್ಸರ್ ಕಡಿಮೆ ಎಂದು ಹೇಳಿದ್ದವು.
‘ಒ’ ಗುಂಪಿನವರಿಗೆ ಅಪಾಯ ಕಡಿಮೆ ‘ಎ’ ರಕ್ತದ ಗುಂಪಿನವರಿಗೆ ಬೇಗ ಕೊರೊನಾ ವೈರಸ್ ಬರುತ್ತದೆ ಎಂದು ಈ ಹಿಂದೆ ಚೀನಾದ ಅಧ್ಯಯನ ತಿಳಿಸಿತ್ತು. ಈ ಅಧ್ಯಯನಕ್ಕೆ ಪೂರಕ ಎಂಬಂತೆ ಈಗ ಡೆನ್ಮಾರ್ಕ್ ಮತ್ತು ಕೆನಡಾದ ಅಧ್ಯಯನ ಸಹ ಪ್ರಕಟವಾಗಿದೆ. ಇದನ್ನೂ ಓದಿ: ಯಾವ ರಕ್ತದ ಗುಂಪಿನವರಿಗೆ ಕೊರೊನಾ ಬೇಗ ಬರುತ್ತದೆ? – ಚೀನಾ ಅಧ್ಯಯನ ವರದಿ ಬಹಿರಂಗ
‘ಒ’ ಗುಂಪಿನ ರಕ್ತವನ್ನು ಹೊಂದಿರುವವರು ಸಾರ್ವತ್ರಿಕ ದಾನಿಗಳೆಂದು ಗುರುತಿಸಿಕೊಂಡಿದ್ದಾರೆ. ಇವರು ಯಾರಿಗೆ ಬೇಕಾದರೂ ರಕ್ತವನ್ನು ದಾನ ಮಾಡಬಹುದು. ಆದರೆ ಈ ಗುಂಪಿನವರು ‘ಒ’ ನೆಗೆಟಿವ್ ಹೊಂದಿರುವ ವ್ಯಕ್ತಿಗಳಿಂದ ಮಾತ್ರ ರಕ್ತವನ್ನು ಪಡೆಯಬೇಕು.
ಕೊರೊನಾ ವೈರಸ್ ಮೂಗಿನ ಮೂಲಕ ಶ್ವಾಸಕೋಶವನ್ನು ಪ್ರವೇಶಿಸಿ ಬಳಿಕ ರಕ್ತದಲ್ಲಿ ಸೇರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೆ ಬಹಳ ಬೇಗ ವೈರಸ್ ತಗುಲುತ್ತದೆ.
‘ಒ’ ರಕ್ತದ ಗುಂಪಿನವರಿಗೆ ಸೋಂಕು ಬರುವುದೇ ಇಲ್ಲ ಎಂದು ಎಲ್ಲೂ ಅಧ್ಯಯನ ಹೇಳಿಲ್ಲ. ಅಷ್ಟೇ ಅಲ್ಲದೇ ಈ ಅಧ್ಯಯನಗಳು ಭಾರತದಲ್ಲಿ ನಡೆದಿಲ್ಲ. ಕೊರೊನಾ ವೈರಸ್ ಒಂದೊಂದು ದೇಶದಲ್ಲಿ ಒಂದೊಂದು ರೀತಿ ವರ್ತಿಸುವ ಕಾರಣ ಪ್ರತಿಯೊಬ್ಬರು ಜಾಗೃತಿ ವಹಿಸುವುದು ಬಹಳ ಮುಖ್ಯ.