ಮಂಗಳೂರು: ಒಳ ಉಡುಪಿನಲ್ಲಿ 1.10 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಅಕ್ರವಾಗಿ ಸಾಗಿಸುತ್ತಿದ್ದ ಮಹಿಳೆಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಮಾಡಲಾಗಿದೆ.
ಕಸ್ಟಮ್ ಅಧಿಕಾರಿಗಳ ಬಲೆಗೆ ಬಿದ್ದ ಮಹಿಳೆಯನ್ನು ಕೇರಳದ ಕಾಸರಗೋಡು ಮೂಲದ ಮೊಹಮ್ಮದ್ ಅಲಿ ಸಮೀರಾ ಎಂದು ಗುರುತಿಸಲಾಗಿದೆ. ಸಮೀರಾ ದುಬೈನಿಂದ ಅಕ್ರಮ ಚಿನ್ನ ಮತ್ತು ವಿದೇಶಿ ಸಿಗರೇಟ್ ಗಳನ್ನು ತನ್ನ ಒಳ ಉಡುಪು, ಸ್ಯಾನಿಟರಿ ಪ್ಯಾಡ್, ಸಾಕ್ಸ್ ನಲ್ಲಿ ಬಚ್ಚಿಟ್ಟು ಯಾರಿಗೂ ತಿಳಿಯದ ಹಾಗೆ ಸಾಗಾಟದಲ್ಲಿ ತೊಡಗಿದ್ದಳು.
ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಾಚರಣೆಗಿಳಿದ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 1.10 ಕೋಟಿ ರೂ. ಮೌಲ್ಯದ 2.41 ಚಿನ್ನ ವಶಕ್ಕೆ ಪಡೆದು ಸಮೀರಾಳನ್ನು ಬಂಧಿಸಿದ್ದಾರೆ.