ಟೋಕಿಯೋ: ಒಲಿಂಪಿಕ್ಸ್ ಅಥವಾ ಬೇರೆ ಯಾವುದೇ ಕ್ರೀಡಾಕೂಟದಲ್ಲೂ ಕೂಡ ಆಥ್ಲೀಟ್ಸ್ ಗಳು ತಾವು ಪದಕ ಗೆದ್ದರೆ ಅದನ್ನು ಕಚ್ಚುವ ಫೋಟೋ ನಾವು ನೋಡಿರುತ್ತೇವೆ. ಹಾಗಾದರೆ ಈ ರೀತಿ ಪದಕ ಕಚ್ಚಲು ಕಾರಣವೇನು? ಈ ಕುರಿತು ಅಸಲಿ ಕಾರಣ ಕೇಳಿದರೆ ನೀವು ಕೂಡ ಒಂದು ಕ್ಷಣ ನಗುತ್ತೀರಿ.
Advertisement
ಹೌದು, ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಆಥ್ಲೀಟ್ಸ್ ಗಳು ಕಷ್ಟ ಪಟ್ಟು ತಮ್ಮ ದೇಶಕ್ಕಾಗಿ, ರಾಜ್ಯಕ್ಕಾಗಿ, ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಗೆದ್ದರೆ ಆ ಪದಕವನ್ನು ಕಚ್ಚಿಕೊಂಡು ನಿಂತಿರುವ ಫೋಟೋವನ್ನು ಸಾಕಷ್ಟು ಬಾರಿ ನಾವೆಲ್ಲರೂ ನೋಡಿದ್ದೇವೆ. ಪದಕ ಕಚ್ಚುವುದು ಇತಿಹಾಸದಿಂದಲೂ ನಡೆದುಕೊಂಡು ಬರುತ್ತಿದೆ. ಈ ಹಿಂದೆ ಚಿನ್ನದ ವ್ಯಾಪಾರಿಗಳು ಅಸಲಿ ಚಿನ್ನವನ್ನು ತಿಳಿಯಲು ಕಚ್ಚುತ್ತಿದ್ದರಂತೆ. ಅಸಲಿ ಚಿನ್ನ ಮೃದು ಲೋಹವಾಗಿರುವುದರಿಂದ ಕಚ್ಚಿದ ಭಾಗದಲ್ಲಿ ಹಲ್ಲಿನ ಗುರುತು ಕಾಣಿಸಿಕೊಳ್ಳುತ್ತಿತ್ತು. ಈ ಮೂಲಕ ಅಸಲಿ ಮತ್ತು ನಕಲಿ ಚಿನ್ನವನ್ನು ಪತ್ತೆ ಹಚ್ಚುತ್ತಿದ್ದರಂತೆ. ಇದನ್ನೂ ಓದಿ: ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿದ್ದು ಅತೀವ ಆನಂದ ನೀಡಿದೆ: ಮೀರಾಬಾಯಿ ಚಾನು
Advertisement
Advertisement
ಆದರೆ ಕ್ರೀಡಾಪಟುಗಳು ಕೂಡ ಈ ರೀತಿ ಚಿನ್ನವನ್ನು ಪರೀಕ್ಷಿಸುತ್ತಿದ್ದಾರ ಎಂಬ ಅನುಮಾನ ಮೂಡಿದರೆ ಅದು ತಪ್ಪು. ಒಲಿಂಪಿಕ್ಸ್‍ನಲ್ಲಿ ನೀಡುವ ಪದಕ ಪೂರ್ತಿ ಚಿನ್ನದಾಗಿರುವುದಿಲ್ಲ ಅಲ್ಪ ಪ್ರಮಾಣದ ಚಿನ್ನದ ಲೇಪಣ ಇರುತ್ತದೆ. ಇದು ಕ್ರೀಡಾಪಟುಗಳಿಗು ತಿಳಿದಿದೆ. ಆದರೂ ಕೂಡ ಆಥ್ಲೀಟ್ಸ್‍ಗಳು ಮಾತ್ರ ಆತನ ಕಣ್ಣಿಗೆ ಸುಂದರವಾಗಿ ಕಾಣಲು ಪದಕವನ್ನು ಕಚ್ಚುತ್ತಾರೆ ಎಂಬುದು ಬಯಲಾಗಿದೆ.
Advertisement
ಹಾಗಾದರೆ ಆತ ಯಾರು ಗೊತ್ತ ಆತ ಬೇರೆಯಾರು ಅಲ್ಲ ಫೋಟೋಗ್ರಾಫರ್. ಹೌದು ಪದಕ ಗೆದ್ದ ಕ್ರೀಡಾಪಟುಗಳು ಪದಕ ಗೆದ್ದ ಖುಷಿಯನ್ನು ಬೇರೆ ಬೇರೆ ರೀತಿಯಾಗಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯಲು ಈ ಹಿಂದೆ ಫೋಟೋಗ್ರಾಫರ್ ಒಬ್ಬರು ಪದಕವನ್ನು ಕಚ್ಚಿ ಫೋಸ್ ನೀಡುವಂತೆ ಕ್ರೀಡಾಪಟುವಿಗೆ ಸೂಚಿಸಿದ್ದರಂತೆ. ಅದು ಮುಂದುವರಿದಿದ್ದು, ಇದೀಗ ಕೂಡ ಪದಕ ಗೆದ್ದವರು ಈ ರೀತಿ ಪದಕ ಕಚ್ಚಿಕೊಂಡು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ.