– ಸಾಮಾಜಿಕ ಅಂತರ ಇಲ್ಲವೇ ಇಲ್ಲ
ಬೆಂಗಳೂರು: ತಮ್ಮ ತವರು ರಾಜ್ಯಕ್ಕೆ ಹೋಗಲು ಬಿಹಾರಿ ಕೂಲಿ ಕಾರ್ಮಿಕರು ಬೆಂಗಳೂರಿನ ಸ್ಯಾಟ್‍ಲೈಟ್ ಬಸ್ ನಿಲ್ದಾಣ ಬಳಿ ನೂರಾರು ಜನ ಜಮಾಯಿಸಿದ್ದಾರೆ.
ಪೊಲೀಸರು ಸುಮಾರು 150 ಜನರಿಗೆ ಮಾತ್ರ ಆನ್‍ಲೈನ್‍ನಲ್ಲಿ ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟು, ತಮ್ಮ ರಾಜ್ಯಕ್ಕೆ ಕಳುಹಿಸಿ ಕೊಡಲು ನಿರ್ಧರಿಸಿದ್ದರು. ಆದರೆ ಏಕಾಏಕಿ 600ಕ್ಕೂ ಹೆಚ್ಚು ಜನ ಯಾವುದೇ ಸಾಮಾಜಿಕ ಅಂತರವಿಲ್ಲದೇ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದು ಜಮಾಯಿಸಿದ್ದಾರೆ.
ಆನ್‍ಲೈನ್‍ನಲ್ಲಿ ಟಿಕೆಟ್ ನೊಂದಾಯಿಸಿಕೊಳ್ಳಲು ಬಿಹಾರಿ ಕಾರ್ಮಿಕರು ಯಾವುದೇ ಸಾಮಾಜಿಕ ಅಂತರವಿಲ್ಲದೇ ಕುಳಿತಿದ್ದಾರೆ. ಇದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಸಿಗದ ಕಾರಣ ಸಾಮಾಜಿಕ ಅಂತರ ಕಾಪಾಡದಕ್ಕೆ ಪೊಲೀಸರು ಲಾಠಿ ಬೀಸಿದ್ದಾರೆ. ಇದಕ್ಕೂ ಬಿಹಾರಿ ಕಾರ್ಮಿಕರು ಬಗ್ಗಲಿಲ್ಲ. ನಂತರ ಕೆಎಸ್‌ಆರ್‌ಪಿ ವಾಹನ ಮೂಲಕ ಹೆಚ್ಚುವರಿ ಪೊಲೀಸರನ್ನ ಸ್ಥಳಕ್ಕೆ ಕರಿಸಿಕೊಳ್ಳಲಾಗಿದೆ.
ಈ ವೇಳೆ ಗುಂಪು ಗುಂಪಾಗಿ ಇದ್ದವರನ್ನು ಪೊಲೀಸರು ಚದುರಿಸಿದರು. ಆದರೆ ರಸ್ತೆಯ ಡಿವೈಡರ್ ಜಂಪ್ ಮಾಡಿ ಮತ್ತೆ ರಸ್ತೆ ಪಕ್ಕದಲ್ಲೇ ನಿಂತುಕೊಂಡು ಉದ್ಧಟತನ ಪ್ರದರ್ಶಿಸಿದ್ದಾರೆ.