– ಗೃಹಸಾಲದಲ್ಲಿ ಸಬ್ಸಿಡಿ ಸಹಾಯಧನ
ನವದೆಹಲಿ: ಮುಂದಿನ ಎರಡು ತಿಂಗಳೂ 8 ಕೋಟಿ ವಲಸೆ ಕಾರ್ಮಿಕರಿಗೆ ಉಚಿತ ಪಡಿತರ ವಿತರಣೆ, ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ಸಾಲ, ರೈತರಿಗೆ ಸಾಲದ ಬಡ್ಡಿಯಿಂದ ವಿನಾಯಿತಿ – ಇದು ಕೇಂದ್ರ ಸರ್ಕಾರ ಇಂದು ಪ್ರಕಟಿಸಿದ ಪ್ಯಾಕೇಜ್ ಗಳ ಮುಖ್ಯಾಂಶಗಳು.
ಕೈಗಾರಿಕೆ, ಉದ್ಯಮ, ರಿಯಲ್ ಎಸ್ಟೇಟ್, ಕಾರ್ಮಿಕರಿಗೆ ಪ್ಯಾಕೇಜ್ ಪ್ರಕಟಿಸಿದರೆ ಇಂದು ಬಡವರು, ಕೃಷಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಪ್ಯಾಕೇಜ್ ಪ್ರಕಟ ಮಾಡಿದೆ.
Advertisement
ಇಂದು ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಲಸೆ ಕಾರ್ಮಿಕರು, ರೈತರಿಗೆ ಚೈತನ್ಯ ತುಂಬುವ ಕೆಲಸವನ್ನು ಮಾಡಿದರು. ಒನ್ ನೇಷನ್, ಒನ್ ರೇಷನ್ ಕಾರ್ಡ್ ಮಹತ್ವದ ಘೋಷಣೆಯನ್ನು ಜಾರಿಗೊಳಿಸಿದರು.
Advertisement
One Nation One Ration Card will be implemented- 67 crore beneficiaries in 23 states covering 83% of PDS population will be covered by national portability by August 2020: FM Sitharaman pic.twitter.com/72s0bj6PD0
— ANI (@ANI) May 14, 2020
Advertisement
ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು:
* ಸರ್ಕಾರ ಲಾಕ್‍ಡೌನ್ ನಡುವೆಯೂ ನಿರಂತರವಾಗಿ ಕೆಲಸ ಮಾಡುತ್ತಿದೆ. 25 ಸಾವಿರ ಕೋಟಿಯ 25 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲಾಗುವುದು. ಇದು 3 ಕೋಟಿ ರೈತರಿಗೆ ಲಾಭವಾಗಲಿದೆ. * 3 ಕೋಟಿ ರೈತರಿಗೆ ಸಾಲದ ಬಡ್ಡಿಯಿಂದ ಪಾವತಿಯಿಂದ ವಿನಾಯ್ತಿ.
Advertisement
* ಬೀದಿ ಬದಿ ವ್ಯಾಪಾರಿ, ಮನೆಯಲ್ಲಿ ಕೆಲಸ ಮಾಡೋರಿಗೆ 10 ಸಾವಿರದವರೆಗೆ ಸಾಲ ಯೋಜನೆ. ಒಂದು ತಿಂಗಳಲ್ಲಿ ಈ ಯೋಜನೆಯನ್ನು ಸರ್ಕಾರ ಜಾರಿಗೆ ತರಲಾಗುವುದು. ಸಾಲ ಪಡೆದ ವ್ಯಾಪಾರಸ್ಥರು ಡಿಜಿಟಲ್ ಮೂಲಕ ವ್ಯವಹರಿಸಿದ್ರೆ ಹೆಚ್ಚು ಲಾಭ ಸಿಗಲಿದೆ. ಇದಕ್ಕಾಗಿ 5 ಸಾವಿರ ಕೋಟಿ ರೂ. ಮೀಸಲು. ಈ ಯೋಜನೆಯಿಂದ 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಲಾಭ ಸಿಗಲಿದೆ.
* ಮುಂದಿನ ಎರಡು ತಿಂಗಳೂ 8 ಕೋಟಿ ವಲಸೆ ಕಾರ್ಮಿಕರಿಗೆ 3500 ಕೋಟಿ ರೂ. ಅನುದಾನದಲ್ಲಿ ಉಚಿತ ಪಡಿತರ ವಿತರಣೆ. ಪ್ರತಿ ವ್ಯಕ್ತಿಗೆ ಅಕ್ಕಿ ಅಥವಾ ಗೋಧಿ 5 ಕೆ.ಜಿ ಹಾಗೂ ಕುಟುಂಬಕ್ಕೆ 1 ಕೆ.ಜಿ. ಕಾಳು ರಾಜ್ಯ ಸರ್ಕಾರಗಳಿಂದ ನೀಡಲಾಗುವುದು. ರೇಷನ್ ಕಾರ್ಡ್ ಇಲ್ಲದಿದ್ದರೂ ಪಡಿತರ ವಿತರಣೆ.
Free food grains supply to all migrants for the next 2 months. For non-card holders, they shall be given 5kg wheat/rice per person & 1 kg chana per family/month for 2 months. 8 crore migrants will benefit- Rs 3500 crores to be spent on this: FM pic.twitter.com/CNmYR5EwOX
— ANI (@ANI) May 14, 2020
* ನ್ಯಾಷನಲ್ ಪೋರ್ಟಬಿಟಲಿ (ಒನ್ ನೇಷನ್, ಒನ್ ರೇಷನ್ ಕಾರ್ಡ್) ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಯಾವುದೇ ರಾಜ್ಯದ ರೇಷನ್ ಕಾರ್ಡ್ ಇದ್ರೂ ಅದನ್ನ ನೀವು ಇರುವ ಸ್ಥಳದಲ್ಲಿ ಬಳಸಬಹುದು.
* ಕೊರೊನಾ ಸಮಯದಲ್ಲಿ ಕೃಷಿ ಕ್ಷೇತ್ರಕ್ಕೆ 63 ಲಕ್ಷ ಸಾಲವನ್ನು ಮಂಜೂರು ಮಾಡಲಾಗಿದೆ. ಈ ಸಾಲದ ಒಟ್ಟು ಮೊತ್ತ 86,600 ಕೋಟಿ ರೂಪಾಯಿ ಇದೆ.
* ನಗರ ಪ್ರದೇಶದಲ್ಲಿ ವಾಸವಾಗಿರುವ ಬಡವರಿಗೆ ಎಸ್‍ಡಿಆರ್‍ಎಫ್ ಮೂಲಕ 11 ಸಾವಿರ ಕೋಟಿ ಮಂಜೂರು ಮಾಡಲಾಗುವುದು. ನಿರಾಶ್ರಿತರರಿಗೆ ಸರ್ಕಾರದಿಂದ ದಿನಕ್ಕೆ ಮೂರು ಬಾರಿ ಊಟದ ವ್ಯವಸ್ಥೆ ಕಲ್ಪಿಸೋದರ ಜೊತೆಗೆ ಹಣದ ವ್ಯವಸ್ಥೆಯನ್ನು ಮಾಡಲಾಗುವುದು. 12 ಸಾವಿರ ಸ್ವಸಹಾಯ ಸಂಘಗಳಿಂದ 3 ಕೋಟಿ ಮಾಸ್ಕ್ ಮತ್ತು 1.20 ಲಕ್ಷ ಲೀಟರ್ ಸ್ಯಾನಿಟೈಸರ್ ಉತ್ಪಾದಿಸಲಾಗುವುದು, ಇದು ಪರೋಕ್ಷವಾಗಿ ನಗರ ಪ್ರದೇಶದಲ್ಲಿ ಉದ್ಯೋಗದ ದಿನಗಳನ್ನು ಹೆಚ್ಚಿಸುತ್ತದೆ.
* ದೇಶಾದ್ಯಂತ ಪೈಸಾ ಪೋರ್ಟಲ್ ಜಾರಿ. ಹೊಸದಾಗಿ 7,200 ಸ್ವಸಹಾಯ ಸಂಘಗಳು ಕಾರ್ಯ ಆರಂಭಗೊಂಡಿವೆ.
* ಗ್ರಾಮೀಣ ಬ್ಯಾಂಕುಗಳಿಗೆ ನಬಾರ್ಡ್ ನಿಂದ 29,500 ಕೋಟಿ ಸಹಾಯ.
* ವಲಸೆ ಕಾರ್ಮಿಕರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಇದರ ನೇರ ಲಾಭ ತಲುಪಿಸುವ ಗುರಿ ಇದೆ.
Rs 2 lakh crore concessional credit boost to 2.5 crore farmers through Kisan Credit Cards: FM Nirmala Sitharaman pic.twitter.com/I4uDiYmZd7
— ANI (@ANI) May 14, 2020
* ನಗರಗಳಿಂದ ಗ್ರಾಮಗಳಿಗೆ ತೆರಳಿರೋ ವಲಸೆ ಕಾರ್ಮಿಕರಿಗೆ ಪಂಚಾಯ್ತಿ ಮೂಲಕ ನರೇಗಾ ಯೋಜನೆ ಅಡಿ ಉದ್ಯೋಗ ಸೃಷ್ಟಿಸಲಾಗುವುದು. ಕನಿಷ್ಠ ವೇತನವನ್ನು 182ರಿಂದ 202 ರೂ.ಗಳಿಗೆ ಹೆಚ್ಚಿಸಲಾಗುತ್ತದೆ. ಪ್ರತಿಯೊಬ್ಬ ದಿನಗೂಲಿ ಕಾರ್ಮಿಕರ ಆರೋಗ್ಯ ತಪಾಸಣೆಗೆ ಪ್ರಾಮುಖ್ಯತೆ ನೀಡಲಾಗುವುದು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗಾಗಿ ಹೊಸ ಮಾರ್ಗದರ್ಶಿ ಪ್ರಕಟ.
* ಗ್ರಾಮ ಮತ್ತು ನಗರ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ವಲಸೆ ಕಾರ್ಮಿಕರಿಗೆ ಬಾಡಿಗೆ ಮನೆ. ಈ ಕುರಿತು ಸಂಬಂಧಿಸಿದ ಇಲಾಖೆಯಿಂದ ಶೀಘ್ರದಲ್ಲಿ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ. ನಗರದ ಬಡವರಿಗೆ ಬಾಡಿಗೆ ಮನೆಗಳನ್ನು ಸಂಕೀರ್ಣಗಳಾಗಿ ಮಾಡುವ ಪ್ಲಾನ್
* ಅತಿ ಸಣ್ಣ ಸಾಲದಾರರಿಗೆ ಮುದ್ರಾ ಶಿಶು ಯೋಜನೆಯಡಿಯ ಸಾಲ. ಮುದ್ರಾ ಯೋಜನೆಗಾಗಿ 15 ಸಾವಿರ ಕೋಟಿ. 12 ತಿಂಗಳು ಮುದ್ರಾ ಯೋಜನೆಯಡಿ (ಶಿಶು ಲೋನ್) ಶೇ.2ರಷ್ಟು ಬಡ್ಡಿ ವಿನಾಯ್ತಿ. ಈ ಯೋಜನೆಯಿಂದ ಸುಮಾರು 3 ಕೋಟಿ ಜನರಿಗೆ ಲಾಭ ಸಿಗಲಿದೆ.
* ಮಧ್ಯಮ ವರ್ಗಕ್ಕೆ ಗೃಹ ಸಾಲದಲ್ಲಿ ಸಬ್ಸಿಡಿ. ಈ ಸಬ್ಸಿಡಿಯ ಅವಧಿಯನ್ನು ಮಾರ್ಚ್ 2021ರವರೆಗೆ ವಿಸ್ತರಿಸಲಾಗುವುದು. 6 ರಿಂದ 18 ಲಕ್ಷ ಆದಾಯವುಳ್ಳ ಮಧ್ಯಮ ವರ್ಗಕ್ಕೆ ಸಬ್ಸಿಡಿ ಸಿಗಲಿದೆ.
Rs 30,000 crores additional emergency working capital funding through NABARD; 3 crore farmers to benefit: FM Nirmala Sitharaman https://t.co/jIBo46CdbL
— ANI (@ANI) May 14, 2020
* ಉದ್ಯೋಗ ಸೃಷ್ಟಿಗಾಗಿ 6 ಸಾವಿರ ಕೋಟಿ ಅನುದಾನ. ಬುಡಕಟ್ಟು ಮತ್ತು ಆದಿವಾಸಿಗಳಿಗೆ ತೋಟಗಾರಿಕೆ ಮತ್ತು ಅರಣ್ಯೀಕರಣದಲ್ಲಿ ಉದ್ಯೋಗ ಸೃಷ್ಟಿ.
* ನಬಾರ್ಡ್ ಮೂಲಕ ರೈತರಿಗೆ 30 ಸಾವಿರ ಕೋಟಿ ತುರ್ತು ಹಣಕಾಸು ನೆರವು. ಮೀನುಗಾರಿಗೆ ಮತ್ತು ಹೈನುಗಾರಿಕೆ ಸೇರಿದಂತೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ 2.5 ಲಕ್ಷ ಕೋಟಿ ಸಾಲ ವಿತರಣೆ.