ಬೆಂಗಳೂರು: ಯುಗಾದಿ ಹಬ್ಬದಂದು ಸಾಮಾಜಿಕ ಜಾಲತಾಣಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂಟ್ರಿಕೊಡುವ ಮೂಲಕವಾಗಿ ಸಖತ್ ಸುದ್ದಿಯಾಗಿದ್ದಾರೆ.
ಸ್ಯಾಂಡಲ್ವುಡ್ ನಟ ರವಿಚಂದ್ರನ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿನಲ್ಲಿ ನಕಲಿ ಖಾತೆ ಇರುವುದನ್ನು ಗಮನಿಸಿ ಯುಗಾದಿ ಹಬ್ಬದ ಪ್ರಯುಕ್ತ ನಾನು ಸೋಶಿಯಲ್ ಮೀಡಿಯಾಕ್ಕೆ ಬರುತ್ತೇನೆ ಎಂದು ಅಭಿಮಾನಿಗಳಿಗೆ ಹೇಳಿದ್ದರು. ಈ ಕುರಿತಾಗಿ ಕೆಲವು ಸಣ್ಣ ವೀಡಿಯೋ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು.
Welcome to 1n1ly Premaloka ???? Subscribe to the OFFICIAL 1n1ly Ravichandran YouTube channel to stay updated on great content from the #CRAZYSTAR #1n1ly #VRC #VRavichandran
Full video: https://t.co/Sn89llRtxH pic.twitter.com/JnD3jKSch3
— 1n1ly Ravichandran (@1n1ly_VRC) April 13, 2021
ಇದೀಗ ‘ಒನ್ ಎಂಡ್ ಒನ್ಲೀ ರವಿಚಂದ್ರನ್’ ಎನ್ನುವ ಹೆಸರಿನಲ್ಲಿ ಟ್ವಿಟ್ಟರ್, ಯೂಟ್ಯೂಬ್, ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದಿದ್ದಾರೆ. ಜನರಿಗೆ ಹೊಸ ವಿಚಾರಗಳ ಕುರಿತಾಗಿ ಮಾಹಿತಿ ಮತ್ತು ಜಾಗೃತಿಯನ್ನು ರವಿಚಂದ್ರನ್ ಅವರು ಸೋಶಿಯಲ್ ಮೀಡಿಯಾ ಮೂಲಕವಾಗಿ ಮೂಡಿಸಲಿದ್ದಾರೆ. ಕ್ರೇಜ್ ಸ್ಟಾರ್ ಸೋಶಿಲ್ ಮೀಡಿಯಾಕ್ಕೆ ಎಂಟ್ರಿ ಕೊಟ್ಟಿರುವುದು ಅಭಿಮಾನಿಗಳಿಗೆ ಸಖತ್ ಖಷಿಯಾಗಿದೆ. ಈಗಾಗಲೇ ಹಲವರು ರವೀಚಂದ್ರನ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡಿದ್ದಾರೆ.
View this post on Instagram
ಹೊಸ ಮಾಹಿತಿ ಜೊತೆಗೆ ಜನರಿಗೆ ಜಾಗೃತಿ ಮೂಡಿಸುವ ಸಂದೇಶ, ಧೂಮಪಾನ ಹಾಗೂ ಕೊರೊನಾ ಬಗ್ಗೆ ರವಿಚಂದ್ರನ್ ಜಾಗೃತಿ ಮೂಡಿಸಲಿದ್ದಾರೆ. ಜಾಗೃತಿ ಸಂದೇಶ ಕೆಲವು ವೀಡಿಯೋಗಳನ್ನು ಈಗಾಗಲೇ ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.