ಒತ್ತಾಯದಿಂದ ಮದುವೆ ಮಾಡಿದ್ದಕ್ಕೆ ನವವಿವಾಹಿತೆ ಆತ್ಮಹತ್ಯೆಗೆ ಶರಣು

Public TV
1 Min Read
suicide

ಹೈದರಾಬಾದ್: ಒತ್ತಾಯಪೂರ್ವಕವಾಗಿ ಮದುವೆ ಮಾಡಿದ್ದರಿಂದ ಮನನೊಂದ ನವವಿವಾಹಿತೆಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಆಂದ್ರಪ್ರದೇಶದಲ್ಲಿ ನಡೆದಿದೆ.

ನವವಿವಾಹಿತೆಯನ್ನು ಚೈತನ್ಯ ಎಂದು ಗುರುತಿಸಲಾಗಿದೆ. ಈಕೆ ಮಂಕಲಡೋಡಿ ನಿವಾಸಿ ಶ್ರೀನಿವಾಸುಲು ಅವರ ಪುತ್ರಿ. ಈಕೆಯನ್ನು ಅಕ್ಟೋಬರ್ 29 ರಂದು ಕುರ್ಮನುಪಲ್ಲಿಯ ತಂಗವೇಲ್ (24) ಜೊತೆ ಮದುವೆ ಮಾಡಿಕೊಡಲಾಗಿತ್ತು. ಚೈತನ್ಯ ಮದುವೆಯಾಗಲು ಇಷ್ಟಪಡದ ಕಾರಣ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ತಂಗವೇಲ್ ತನ್ನ ಮಾವ ಶ್ರೀನಿವಾಸುಲುಗೂ ಇದೇ ಕಾರಣವನ್ನು ಹೇಳಿದ್ದನು.

marriage fb 020419062152 e1601448365714

ಇತ್ತ ಚೈತನ್ಯ ತನ್ನ ಪತಿ ಮನೆಯ ಬಾತ್‍ರೂಂನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತನ್ನ ಸಹೋದರಿಯ ಸಾವಿನ ಸುದ್ದಿಯನ್ನು ಚೈತನ್ಯ ಸಹೋದರರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ ಇದರಿಂದ ಕೋಪೋದ್ರಿಕ್ತರಾದ ಅವರು ತಂಗವೇಲ್ ಮನೆಯ ಮೇಲೆ ದಾಳಿ ಮಾಡಿದರು. ಅಲ್ಲದೆ ಮನೆಯ ವಸ್ತುಗಳನ್ನು ನಾಶಪಡಿಸಿದರು. ಘಟನೆ ಸಂಬಂಧ ಇಬ್ಬರು ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಸಿಐ ಶ್ರೀಧರ್ ಮತ್ತು ಎಸ್‍ಐ ನರೇಂದ್ರ ತಿಳಿಸಿದ್ದಾರೆ.

Police Jeep 1 2 medium

Share This Article
Leave a Comment

Leave a Reply

Your email address will not be published. Required fields are marked *