ಭುವನೇಶ್ವರ: ಇಂಡೋ-ಚೀನಾ ಸಂಘರ್ಷದಲ್ಲಿ ಹುತಾತ್ಮರಾದ ಸೈನಿಕರಿಗೆ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಂತಾಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ ರಾಜ್ಯದ ಇಬ್ಬರು ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿ ಮಾದರಿಯಾಗಿದ್ದಾರೆ.
ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ 20 ಸೈನಿಕರಲ್ಲಿ ಒಡಿಶಾದ ಇಬ್ಬರು ಜವಾನರು ಇದ್ದಾರೆ. ಕಂಧಮಾಲ್ ಜಿಲ್ಲೆಯ ಬಿಯರ್ ಪಂಗದಿಂದ ಚಂದ್ರಕಾಂತ್ ಪ್ರಧಾನ್ ಮತ್ತು ರೈರಂಗ್‍ಪುರದ ನಂದೂರಂ ಸೊರೆನ್ ಅವರು ಚೀನಾ ಸೇನೆ ಜೊತೆಗೆ ಹೋರಾಡಿ ಮಡಿದಿದ್ದಾರೆ. ಇದನ್ನೂ ಓದಿ: ಇಂಡೋ-ಚೀನಾ ಸಂಘರ್ಷ- ಹುತಾತ್ಮರಲ್ಲಿ ಬಿಹಾರ್ ರೆಜಿಮೆಂಟ್‍ನ ಯೋಧರೇ ಹೆಚ್ಚು
Advertisement
Advertisement
ಈ ಕುಡಿತು ಟ್ವೀಟ್ ಮಾಡಿರುವ ನವೀನ್ ಪಟ್ನಾಯಕ್ ಅವರು, “ನಮ್ಮ ರಾಷ್ಟ್ರದ ಸಮಗ್ರತೆಯನ್ನು ಕಾಪಾಡಿ ಗಾಲ್ವಾನ್ ಕಣಿವೆಯಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ಭಾರತೀಯ ಸೇನೆಯ ಧೈರ್ಯಶಾಲಿಗಳಿಗೆ ಧನ್ಯವಾದ. ಕೆಚ್ಚೆದೆಯ ಹುತಾತ್ಮರ ಕುಟುಂಬಗಳಿಗೆ ಅಗಲಿಕೆ ನೋವು ಸಹಿಸುವ ಶಕ್ತಿ ಸಿಗಲಿ” ಎಂದು ಹೇಳಿದ್ದಾರೆ. ಇದನ್ನೂ ಓದಿ: ನಮ್ಮ ತಾಳ್ಮೆಯನ್ನು ಕೆಣಕಬೇಡಿ -ವೈರಿ ಚೀನಾಗೆ ಮೋದಿ ಖಡಕ್ ಸಂದೇಶ
Advertisement
ಇಂಡೋ-ಚೀನಾ ಸಂಘರ್ಷದಲ್ಲಿ ಮಡಿದ ರಾಜ್ಯದ ಇಬ್ಬರು ಯೋಧರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂ. ನೀಡಲಾಗುವುದು. ಯೋಧರ ಕುಟುಂಬದ ನೆರವಿಗೆ ಸರ್ಕಾರ ನಿಂತಿದೆ ಎಂದು ಪಟ್ನಾಯಕ್ ಟ್ವಿಟ್ ಮಾಡಿದ್ದಾರೆ. ಇದನ್ನೂ ಓದಿ: ಗಾಲ್ವಾನ್ ಕಣಿವೆಯ ಸಾರ್ವಭೌಮತ್ವ ಯಾವಗಲೂ ನಮಗೆ ಸೇರಿದ್ದು- ಮತ್ತೆ ಕೆಣಕಿದ ಚೀನಾ
Advertisement
CM @Naveen_Odisha expressed deep grief over death of two Odia soldiers in #galwanvalleyclash in #Ladakh. Hailing their supreme sacrifice for the motherland, CM announced ex-gratia of ₹25 lakh each from CMRF to next of kin of martyrs & conveyed sympathy to the bereaved families.
— CMO Odisha (@CMO_Odisha) June 17, 2020