ಹಾವೇರಿ: ಪ್ರತಿಯೊಬ್ಬರಿಗೂ ಕಾರು ಖರೀದಿಸಬೇಕು ಎನ್ನುವ ಆಸೆ ಇರುತ್ತದೆ. ಇದೀಗ ಅದಕ್ಕೆ ಪೂರಕ ಎಂಬಂತೆ ಆನ್‍ಲೈನ್ ಮಾರಾಟವು ತೆರೆದುಕೊಂಡಿದೆ. ಇದನ್ನೆ ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ ಒಎಲ್‌ಎಕ್ಸ್‌ನಲ್ಲಿ ಕಾರು ಮಾರಾಟಕ್ಕಿದೆ ಎಂದು ಹಾಕಿಕೊಂಡಿದ್ದಾನೆ. ಇದನ್ನು ನೋಡಿದ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶಿವಪುರ ಗ್ರಾಮದ ಯುವಕನೊಬ್ಬ ಖರೀದಿಗೆ ಮುಂದಾಗಿದ್ದಾನೆ. ಆರ್ಮಿ ಡಾಕ್ಟರ್ ಎಂದು ಹೇಳಿಕೊಂಡ ಆಸಾಮಿ ಯುವಕನಿಂದ ಹಣ ಹಾಕಿಸಿಕೊಂಡು ಹಣವೂ ಇಲ್ಲದೆ, ಕಾರು ಕೊಡದೇ ಮೋಸ ಮಾಡಿದ್ದಾನೆ.
Advertisement
ಕಳೆದ ಕೆಲವು ದಿನಗಳ ಹಿಂದೆ ಒಎಲ್‍ಎಕ್ಸ್ ಆ್ಯಪ್‍ನ ಜಾಹೀರಾತಿನಲ್ಲಿ ಸ್ವಿಫ್ಟ್ ಡಿಸೈರ್ ಕಾರು ಮಾರಾಟಕ್ಕೆ ಇದೆ ಎಂಬ ಜಾಹೀರಾತನ್ನು ಶಿವಪುರ ಗ್ರಾಮದ ಯುವಕ ಚೇತನ್ ಎಂಬಾತ ಗಮನಿಸಿದ್ದಾನೆ. ಜಾಹೀರಾತಿನಲ್ಲಿದ್ದ ನಂಬರ್ ಪಡೆದುಕೊಂಡು ಕರೆ ಮಾಡಿದ್ದಾನೆ. ಇದನ್ನೂ ಓದಿ: ಕೊರೊನಾ ಸೋಂಕಿತರಿಗೆ ಪುಸ್ತಕ ನೀಡಿ ಆತ್ಮಸ್ಥೈರ್ಯ ತುಂಬಿದ ಲ್ಯಾಬ್ ಟೆಕ್ನಿಷಿಯನ್
Advertisement
Advertisement
ಆಗ ತಿಮ್ಮನಗೌಡ ಎಂಬ ಹೆಸರಿನವನು ತಾನು ಆರ್ಮಿಯಲ್ಲಿ ಡಾಕ್ಟರ್ ಆಗಿದ್ದು, ಜಮ್ಮುಕಾಶ್ಮೀರ ಆರ್ಮಿ ಕ್ಯಾಂಪ್ ಗೆ ವರ್ಗಾವಣೆ ಆಗಿದೆ. ಹೀಗಾಗಿ ಕಾರು ಮಾರಾಟ ಮಾಡುತ್ತಿದ್ದೇನೆ ಎಂದು ಬಣ್ಣಬಣ್ಣದ ಮಾತುಗಳನ್ನು ಆಡಿದ್ದಾನೆ. ಆರ್ಮಿ ಡಾಕ್ಟರ್ ಎಂದು ಪರಿಚಯಿಸಿಕೊಂಡ ಮೇಲೆ ಯುವಕ ಚೇತನ್‍ಗೆ ಅವನ ಮೇಲೆ ಎಲ್ಲಿಲ್ಲದ ಭರವಸೆ ಮೂಡಿದೆ. ಕೊನೆಗೆ ಫೋನ್ ನಲ್ಲಿಯೇ ಒಂದು ಲಕ್ಷ ಹತ್ತು ಸಾವಿರ ರೂಪಾಯಿಗೆ ಕಾರಿನ ವ್ಯವಹಾರ ಮುಗಿಸಿಕೊಂಡು ಚೇತನ್ ಬಳಿಕ ಹಣ ವರ್ಗಾವಣೆಗೆ ಮುಂದಾಗಿದ್ದಾನೆ. ಇದನ್ನೂ ಓದಿ:ಲಾಕ್‍ಡೌನ್ ವೇಳೆ ಹಾವೇರಿಯಲ್ಲಿ ಮಹಿಳೆಯರು, ಯುವತಿಯರು ಸೇರಿ 40 ಜನ ನಾಪತ್ತೆ
Advertisement
ಸ್ವಿಫ್ಟ್ ಡಿಸೈರ್ ಕಾರಿನ ವ್ಯವಹಾರ ಒಂದು ಲಕ್ಷ ಹತ್ತು ಸಾವಿರ ರೂಪಾಯಿಗೆ ಮುಗಿದಿದೆ. ಕಡಿಮೆ ಬೆಲೆಗೆ ಕಾರು ಸಿಕ್ಕಿತು ಎಂಬ ಖುಷಿಯಲ್ಲಿದ್ದ ಚೇತನ್‍ಗೆ, ಆರ್ಮಿ ಡಾಕ್ಟರ್ ಎಂದು ಪರಿಚಯಿಸಿಕೊಂಡ ತಿಮ್ಮನಗೌಡ ಕಾರನ್ನು ಡೆಲಿವರಿ ಮಾಡಲು ಸೆಕ್ಯೂರಿಟಿ ಚಾರ್ಜ್, ಜಿಪಿಎಸ್ ಚಾರ್ಜ್, ಡಾಕ್ಯುಮೆಂಟ್ ಚಾರ್ಜ್, ಎನ್‍ಓಸಿ ಚಾರ್ಜ್ ಎಂದು ಬರೋಬ್ಬರಿ 71,798 ರೂಪಾಯಿಗಳನ್ನು ಫೋನ್ ಪೇ ನಂಬರ್ ಮೂಲಕ ಚೇತನ್ ಕಡೆಯಿಂದ ಹಣ ಹಾಕಿಸಿಕೊಂಡಿದ್ದಾನೆ. ನಂತರ ಕಾರು ಕೊಡದೆ, ಹಣವನ್ನೂ ಮರುಕಳಿಸದೆ ಯಾಮಾರಿಸಿದ್ದಾನೆ. ಕಾರಿಗಾಗಿ ಹಣ ಹಾಕಿ ಕಂಗಾಲಾದ ಚೇತನ್ ತಾನು ಮೋಸ ಹೋಗಿದ್ದೇನೆ ಎಂಬುದನ್ನು ಅರಿತುಕೊಂಡು ಹಾವೇರಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ತಿಮ್ಮನಗೌಡ ಎಂಬ ಹೆಸರಿನವನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾನೆ.