ಮದುವೆಗೆ ಉಡುಪುಗಳು ನಗರದಲ್ಲಿ ಸಿಗುತ್ತದೆ. ಆದರೆ ಬೇಕಾದ ರೀತಿಯ ಇಂದಿನ ಸ್ಟೈಲ್‌ಗೆ ತಕ್ಕಂತೆ ಉಡುಪುಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಆದರೆ ನೀವು ಚಿಂತೆ ಮಾಡಬೇಕಾದ ಅಗತ್ಯವೇ ಇಲ್ಲ. ಬೇಕಾದ ಶೈಲಿಯ, ವಿಶಿಷ್ಟ ವಿನ್ಯಾಸಕಾರರು ಮಾಡಿರುವ ಉಡುಪುಗಳು ಬೇಕಾದ ದರದಲ್ಲಿ ʼಸಮ್ಯಕ್ʼನಲ್ಲಿ ಸಿಗುತ್ತದೆ.
2006ರಲ್ಲಿ ಬೆಂಗಳೂರಿನಲ್ಲಿ ಸಮ್ಯಕ್ ತನ್ನ ಮಳಿಗೆಯನ್ನು ಆರಂಭಿಸಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಮೆಚ್ಚುಗೆ ಗಳಿಸಲು ಕಾರಣವೂ ಇದೆ. ಸಾಧಾರಣವಾಗಿ ಮದುವೆಯ ಸಂದರ್ಭದಲ್ಲಿ ಮಹಿಳೆಯರ ಉಡುಪುಗಳ ಖರೀದಿಯ ಬಗ್ಗೆ ಹೆಚ್ಚು ಚರ್ಚೆ ಆಗುತ್ತದೆ. ಆದರೆ ಈಗ ಕಾಲ ಬದಲಾಗಿದ್ದು ಪುರುಷರೂ ಉಡುಪುಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಈ ನಿಟ್ಟಿನಲ್ಲಿ ಸಮ್ಯಕ್ ಮಹಿಳೆಯರ ಮತ್ತು ಪುರುಷರ ವಸ್ತ್ರಗಳ ಸಂಗ್ರಹವನ್ನೇ ತೆರೆದಿದೆ. ಒಂದೇ ಮಳಿಗೆಯಲ್ಲಿ ಎರಡು ಕಡೆಯವರಿಗೆ ವಸ್ತ್ರಗಳು ಸುಲಭವಾಗಿ ಸಿಗುವ ಕಾರಣ ಮೆಚ್ಚುಗೆಗೆ ಪಾತ್ರವಾಗಿದೆ.
ಕಂಚಿಪುರಂ ಸಿಲ್ಕ್, ಬನಾರಸಿ, ಎಂಬ್ರಾಯಿಡರಿ ರೀತಿಯ ಸೀರೆಗಳು ಡಿಸೈನರ್ ಸಲ್ವಾರ್, ಗೌನ್, ಕುರ್ತಾಗಳು ಇಲ್ಲಿ ಲಭ್ಯವಿದೆ. ಶ್ರೇಷ್ಠ ವಿನ್ಯಾಸಕಾರರದಾದ ಸಬ್ಯಸಾಚಿ, ಮನೀಷ್ ಮಲ್ಹೋತ್ರಾ, ಅನಿತಾ ಡೋಂಗ್ರೆ, ರೋಹಿತ್ ಬಾಲ್, ಅನುಶ್ರೀ ರೆಡ್ಡಿ ವಿನ್ಯಾಸ ಮಾಡಿದ ವಧು-ವರರ ಉಡುಪುಗಳು ಸಮ್ಯಕ್‌ನಲ್ಲಿ ಸಿಗುವುದು ವಿಶೇಷ.
ಪುರುಷರಿಗೆ ಬೇಕಾದ ಶೆರ್ವಾನಿ, ಇಂಡೋ ವೆಸ್ಟರ್ನ್ ಶೆರ್ವಾನಿ, ಕುರ್ತಾ ಪೈಜಾಮಾ, ವೆಸ್ಟ್ ಕೋಟ್ ಅಲ್ಲದೇ ಕ್ಲಾಸಿಕ್, ಟುಕ್ಸೆಡೋ, ಜೋಧ್‌ಪುರಿ ಶೈಲಿಯ ಸೂಟ್ಸ್ ಇಲ್ಲಿ ದೊರೆಯುತ್ತದೆ. ಇಲ್ಲಿರುವ ಕಲೆಕ್ಷನ್‌ಗಳು ವಿನ್ಯಾಸಗಾರರಿಗೆ ಸಹ ಪ್ರೇರಣೆ ನೀಡಿದೆ. ದೇಶದ ಎಲ್ಲೆಡೆ ಉತ್ತಮವಾದ ಸಂಪರ್ಕವಿದ್ದು ಉತ್ತಮವಾಗಿರುವುದರಲ್ಲಿ ಉತ್ತಮ ಗುಣಮಟ್ಟದ ವಸ್ತ್ರಗಳನ್ನು ಆಯ್ಕೆ ಮಾಡಿ ಗ್ರಾಹಕರಿಗೆ ನೀಡುವುದರಲ್ಲಿ ಸಮ್ಯಕ್ ಯಾವಾಗಲೂ ಮುಂದಿರುತ್ತದೆ.
ಗ್ರಾಹಕರ ನಂಬಿಕೆ ವಿಶ್ವಾಸ ಸಿಗುತ್ತಿದ್ದಂತೆ 2012ರಲ್ಲಿ https://www.samyakk.com ಹೆಸರಿನಲ್ಲಿ ವೆಬ್‌ಸೈಟ್ ಆರಂಭವಾಗಿದೆ. ವೆಬ್‌ಸೈಟ್‌ನಿಂದ ಭಾರತ ಮಾತ್ರವಲ್ಲ ವಿದೇಶದಲ್ಲೂ ಉತ್ತಮ ಪ್ರತಿಕ್ರಿಯೆಗಳು ಸಿಕ್ಕಿದೆ. ಆನ್‌ಲೈನ್ ವೆಬ್‌ಸೈಟ್ ತೆರದ ಬಳಿಕ ಶಾಪಿಂಗ್ ಸಹ ಸುಲಭವಾಯಿತು. ಜನರು ಕುಳಿತ ಸ್ಥಳದಿಂದಲೇ ಇಷ್ಟವಾಗಿರುವ ಬಟ್ಟೆಗಳನ್ನು ಖರೀದಿಸತೊಡಗಿದರು. ಯಾವುದಕ್ಕೂ ರಾಜಿಯಾಗದೇ ಗುಣಮಟ್ಟ ವಸ್ತುಗಳು ನಿಗದಿತ ಸಮಯದ ಒಳಗಡೆ ತಲುಪುತ್ತಿದ್ದ ಕಾರಣ ವಿದೇಶದಲ್ಲೂ ಸಮ್ಯಕ್‌ಗೆ ಗ್ರಾಹಕರು ಹುಟ್ಟಿಕೊಂಡರು.
ದೇಶದ ಎಲ್ಲ ವರ್ಗದ ಜನರಿಗೆ ಬೇಕಾದ ಉಡುಪುಗಳ ಮಳಿಗೆ ಸಮ್ಯಕ್. ಸಾಂಪ್ರದಾಯಿಕ ವಿನ್ಯಾಸದಿಂದ ಹಿಡಿದು ಆಧುನಿಕ ಸಮಕಾಲೀನರವರೆಗಿನ ಸಂಪೂರ್ಣ ಶ್ರೇಣಿಯ ಉಡುಪುಗಳು ಇಲ್ಲಿ ಸಿಗುವುದು ವಿಶೇಷ. ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳಿಂದ ಪ್ರೇರಣೆ ಪಡೆದು ವಸ್ತ್ರಗಳನ್ನು ವಿನ್ಯಾಸ ಮಾಡಲಾಗುತ್ತದೆ. ಮಹಿಳೆಯರಿಗೆ ಬೇಕಾದ ಸೀರೆಗಳು, ಲೆಹೆಂಗಾಗಳು ಮತ್ತು ಸಲ್ವಾರ್ ಸೂಟ್‌ಗಳು ಪುರುಷರಿಗಾಗಿ ಶೆರ್ವಾನಿ, ಸೂಟ್‌ಗಳು ಮತ್ತು ಇಂಡೋ-ವೆಸ್ಟರ್ನ್ ಸಾಂಪ್ರದಾಯಿಕ ಮತ್ತು ನವ ಸಾಂಸ್ಕೃತಿಕ ವಿನ್ಯಾಸಗಳ ಉಡುಪುಗಳು ಲಭ್ಯವಿದೆ.
ಬೆಂಗಳೂರು ನಗರದ ಹೃದಯಭಾಗದಲ್ಲಿ ತೆರೆಯಲಾದ ಅಂಗಡಿಯಲ್ಲಿ 5 ಮಳಿಗೆಗಳಿವೆ. ಪ್ರತಿ ಮಹಡಿಯಲ್ಲಿ ನಮ್ಮ ಸೊಗಸಾದ ಮತ್ತು ಡಿಸೈನರ್ ಉಡುಪುಗಳು ಮತ್ತು ಪರಿಕರಗಳ ಸಂಗ್ರಹವಿದೆ. ಖರೀದಿ ಮಾತ್ರವಲ್ಲ, ಗ್ರಾಹಕರಿಗೆ ಬೆಸ್ಪೋಕ್ ಸೇವೆಗಳು ಸಹ ಇಲ್ಲಿ ಸಿಗುತ್ತದೆ. ಫ್ಯಾಷನ್ ಸಲಹೆಗಾರರು ಯಾವುದೇ ಸಂದರ್ಭಕ್ಕೂ ಅತ್ಯುತ್ತಮವಾದ ವಿನ್ಯಾಸ ಮತ್ತು ಉಡುಪುಗಳ ಆಯ್ಕೆಗಳ ಶಿಫಾರಸು ಮಾಡುತ್ತಾರೆ.
ಉಡುಪುಗಳ ಪರಿಪೂರ್ಣತೆಗಾಗಿ ಕರಕುಶಲವಾಗಿ ತಯಾರಿಸಲಾಗುತ್ತದೆ ಮತ್ತು ಯಾವುದೇ ರೀತಿಯ ಕಡಿತ ಇರುವುದಿಲ್ಲ. ವಿಶ್ವಾದ್ಯಂತ ಬೆಲೆಗಳು ಏಕರೂಪವಾಗಿದೆ. ಉಡುಪುಗಳ ಮಾರಾಟದಲ್ಲಿ ದಶಕಗಳ ಅನುಭವ ಇರುವ ಕಾರಣ ಭಾರತದಲ್ಲಿ ಈಗ ಸಮ್ಯಕ್ ಒಂದು ನಂಬಿಕೆ ಮತ್ತು ಭಾರತದ ಅತ್ಯಂತ ಮೆಚ್ಚುಗೆ ಪಡೆದ ಬ್ರ್ಯಾಂಡ್‌ಗಳ ಪೈಕಿ ಒಂದಾಗಿದೆ.
ವಿಳಾಸ
ಸಮ್ಯಕ್
ಸಂಖ್ಯೆ 24, ಡಿಸೋಜಾ ವೃತ್ತ,
ರಿಚ್ಮಂಡ್ ರಸ್ತೆ, ಬೆಂಗಳೂರು – 560047,
0091-8041113330
esales@samyakk.com
080 – 43753548
ಮೊ : 78299 28490
ವೆಬ್‌ಸೈಟ್: www.samyakk.com