ನವದೆಹಲಿ: ಒಂದೇ ಮಾವಿನ ಮರದಲ್ಲಿ 121 ಬಗೆಯ ಹಣ್ಣುಗಳು ಬಿಡುವ ಮೂಲಕವಾಗಿ ಅಚ್ಚರಿಯನ್ನೂ ಮೂಡಿಸುತ್ತಿದೆ.
ಒಂದು ಮರದಲ್ಲಿ ಮಾವಿನ ಮರದಲ್ಲಿ 121 ಬಗೆಯ ಹಣ್ಣುಗಳು ಬಿಡುವ ಮೂಲಕವಾಗಿ ಮರ ಅಚ್ಚರಿ ಹಾಗೂ ಆಕರ್ಷಣೆಯ ಕೇಂದ್ರ ಬಿಂದು ಆಗಿದೆ. ಹದಿನೈದು ವರ್ಷದ ಈ ಮಾವಿನ ಮರದಲ್ಲಿ ತೋಟಗಾರಿಕಾ ಪರಿಣತರು ಕಳೆದ ಐದು ವರ್ಷಗಳಿಂದ ಇಂಥದ್ದೊಂದು ಪ್ರಯೋಗ ನಡೆಸಿದ್ದು, ಇದೀಗ 121 ಬಗೆಯ ಹಣ್ಣುಗಳನ್ನು ಒಂದೇ ಮರದಲ್ಲಿ ಕಾಣಲು ಸಾಧ್ಯವಾಗುವಂತಾಗಿದೆ. ಉತ್ತರಪ್ರದೇಶದ ಸಹರನ್‍ಪುರ ಜಿಲ್ಲೆಯಲ್ಲಿ ಇಂಥದ್ದೋಂದು ಪ್ರಯೋಗ ನಡೆದಿದೆ.
Saharanpur | Horticulturists grow 121 varieties of mangoes in single tree through grafting
We’re working on new species so that better varieties of mangoes can be produced. People can also use this technique: Bhanu Prakash Ram, Joint Director, Horticulture & Training Centre pic.twitter.com/eOCLwLZa1J
— ANI UP (@ANINewsUP) June 30, 2021
ತೋಟಗಾರಿಕಾ ಪ್ರಯೋಗ ಹಾಗೂ ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ರಾಜೇಶ್ ಪ್ರಸಾದ್ ಅವರು 121 ಬಗೆಯ ಮಾವಿನ ಗಿಡದ ರೆಂಬೆಗಳನ್ನು ಒಂದೇ ಮರಕ್ಕೆ ಕಸಿ ಮಾಡುವ ಮೂಲಕ ಹೀಗೊಂದು ಅಚ್ಚರಿಗೆ ಕಾರಣವಾಗಿದ್ದಾರೆ. ಈ ರೀತಿಯ ಕಸಿ ಮಾಡಿ ಆ ಮರದ ಆರೈಕೆಗೆ ವಿಶೇಷ ಗಮನ ನೀಡಲಾಗಿದೆ. ಪರಿಣಾಮವಾಗಿ ನೂರಕ್ಕೂ ಅಧಿಕ ಬಗೆಯ ಮಾವಿನಹಣ್ಣುಗಳು ಒಂದೇ ತಳಿಯ ಮಾವಿನ ಮರದಲ್ಲಿ ಸಿಗುವಂತಾಗಿದೆ.
ನಾವು ಹೊಸ ಜಾತಿ ಹಣ್ಣುಗಳ ಮರಗಳನ್ನು ಕಂಡು ಹಿಡಿಯುವಲ್ಲಿ ಕೆಲಸ ಮಾಡುತ್ತಿದ್ದೇವೆ ಇದರಿಂದ ಉತ್ತಮ ರೀತಿಯ ಮಾವಿನಹಣ್ಣನ್ನು ಉತ್ಪಾದಿಸಬಹುದು. ಜನರು ಈ ತಂತ್ರವನ್ನು ಸಹ ಬಳಸಬಹುದು ಎಂದು ತೋಟಗಾರಿಕೆ ಮತ್ತು ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ಭಾನು ಪ್ರಕಾಶ್ ರಾಮ್ ಹೇಳಿದ್ದಾರೆ.