ಕೊಪ್ಪಳ: ನವಬೃಂದಾವನ ಗಡ್ಡೆಯಲ್ಲಿರುವ ಶ್ರೀಗಳ ಬೃಂದಾವನಗಳಲ್ಲಿ ಒಂದು ಬೃಂದಾವನಕ್ಕೆ ರಾಯರ, ಉತ್ತಾರಾಧಿ ಮಠದ ಅರ್ಚಕರು ಪೂಜೆ ವಿಚಾರವಾಗಿ ಗಲಾಟೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.
Advertisement
ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿರುವ ನವಬೃಂದಾವನ ಗಡ್ಡೆಯಲ್ಲಿ ಇತಿಹಾಸ ಕಾಲದ ತೀರ್ಥರ ಬೃಂದಾವನಗಳು ಇವೆ. ಅವರಿಗೆ ಭಕ್ತರು ಪೂಜೆಯನ್ನು ಸಲ್ಲಿಸಿ, ಶ್ರೀಗಳ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅದರಂತೆ ಗುರುವಾರದಂದು ಜಯತೀರ್ಥರ ಆರಾಧನೆ ಇದ್ದಿದ್ದು, ಆರಾಧನೆಯ ಪೂಜೆಯನ್ನು ಸಲ್ಲಿಸಲು ರಾಯರ ಮಠದ ಅರ್ಚಕರು ಹಾಗೂ ಭಕ್ತರು ನವಬೃಂದಾವನ ಗಡ್ಡೆಗೆ ಆಗಮಿಸಿ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ. ಆಗ ಉತ್ತಾರಾಧಿ ಮಠದ ಅರ್ಚಕರು, ರಾಯರ ಮಠದ ಅರ್ಚಕರಿಗೆ ಪೂಜೆ ಮಾಡಲು ಅವಕಾಶ ನೀಡಲಿಲ್ಲ. ನೀವು ಪೂಜೆ ಮಾಡಲು ಹೊರಟಿರುವ ಬೃಂದಾವನವು ಜಯತೀರ್ಥರ ಬೃಂದಾವನ ಅಲ್ಲ. ಅದು ರಘುವೀರ ತೀರ್ಥರ ಬೃಂದಾವನವಾಗಿದೆ. ಆ ಬೃಂದಾವನಕ್ಕೆ ನೀವು ಪೂಜೆ ಮಾಡುವಂತಿಲ್ಲ. ಜಯತೀರ್ಥರ ಬೃಂದಾವನ ಮಳಖೇಡನಲ್ಲಿದೆ. ಅಲ್ಲಿ ಆರಾಧನೆಯನ್ನ ಮಾಡಬೇಕು ಎಂದು ಅಡ್ಡಿಪಡಿಸಿದ್ದಾರೆ.
Advertisement
Advertisement
ಉತ್ತಾರಾಧಿ ಮಠದ ಅರ್ಚಕರು ಪೂಜೆಗೆ ನಿರಾಕರಿಸಿದ್ದರೂ ಕೂಡ ರಾಯರ ಮಠದ ಅರ್ಚಕರು ಮಳಖೇಡದಲ್ಲಿ ಇರುವುದು ಜಯತೀರ್ಥರ ಮೂಲ ಬೃಂದಾವನ ಅಲ್ಲ. ಮೂಲ ಬೃಂದಾವನ ಇರುವುದು ನವಬೃಂದಾವನದಲ್ಲಿಯೇ ನೀವು ಹೇಳುವ ಪ್ರಕಾರ ರಘುವೀರ ತೀರ್ಥರ ಬೃಂದಾವನ ಇದಲ್ಲ. ಇದು ಜಯತೀರ್ಥರ ಬೃಂದಾವನ ಎಂದು ಪಟ್ಟು ಹಿಡಿದ್ದಿದ್ದಾರೆ. ಈ ರೀತಿಯಾಗಿ ಎರಡು ಮಠದ ಅರ್ಚಕರ ನಡುವೆ ಮಾತಿನ ಚಕಮಕಿ ನಡೆದ ವೀಡಿಯೋ ಸದ್ಯ ವೈರಲ್ ಆಗಿದ್ದು, ಭಕ್ತರಲ್ಲಿ ಗೊಂದಲವನ್ನು ಉಂಟು ಮಾಡಿದೆ. ಇದನ್ನೂ ಓದಿ: ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಪೈಪ್ ಲೈನ್‍ಗೆ ಕನ್ನ