ನವದೆಹಲಿ: ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಒಂದೊಂದು ಲಕ್ಷ ಏರಿಕೆಯಾಗುತ್ತಿದ್ದು, ನಿನ್ನೆ 55 ಲಕ್ಷ ಗಡಿ ದಾಟಿದ್ದ ಸೋಂಕಿತರ ಸಂಖ್ಯೆ ಇಂದು 56 ಲಕ್ಷಕ್ಕೆ ಏರಿಕೆಯಾಗಿದೆ.
India's #COVID19 case tally crosses 56-lakh mark with a spike of 83,347 new cases & 1,085 deaths in last 24 hours.
The total case tally stands at 5,646,011 including 9,68,377 active cases, 45,87,614 cured/discharged/migrated & 90,020 deaths: Ministry of Health & Family Welfare pic.twitter.com/ATrAJsPIhr
— ANI (@ANI) September 23, 2020
Advertisement
ಕಳೆದ 24 ಗಂಟೆಯಲ್ಲಿ 83,347 ಮಂದಿಗೆ ಕೊರೊನಾ ಸೋಂಕು ಅಂಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 5,646,011ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ 1,085 ಮಂದಿ ಮಹಾಮಾರಿ ಕೋವಿಡ್ 19ಗೆ ಬಲಿಯಾಗಿದ್ದಾರೆ. ಹೀಗಾಗಿ ಇದೂವರೆಗೆ ದೇಶದಲ್ಲಿ 90,020 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.
Advertisement
Advertisement
5,646,011 ಸೋಂಕಿತರ ಪೈಕಿ 9,68,377 ಸಕ್ರಿಯ ಪ್ರಕರಣಗಳಿದ್ದು, 45,87,614 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
Advertisement
COVID-19 Testing Update. For more details visit: https://t.co/dI1pqvXAsZ @MoHFW_INDIA @DeptHealthRes #ICMRFIGHTSCOVID19 #IndiaFightsCOVID19 #CoronaUpdatesInIndia #COVID19 pic.twitter.com/BrH66c6cZv
— ICMR (@ICMRDELHI) September 23, 2020
ದೇಶದಲ್ಲಿ ನಿನ್ನೆ ಒಂದೇ ದಿನ 9,53,683 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಈ ಮೂಲಕ ಇದೂವರೆಗೂ 6,62,79,462 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.