-ದೇಶದಲ್ಲಿ 16 ಲಕ್ಷದ ಗಡಿ ದಾಟಿದ ಕೋವಿಡ್
ನವದೆಹಲಿ: ದೇಶದಲ್ಲಿ ಒಂದೇ ದಿನ ಅತ್ಯಧಿಕ ಕೊರೊನಾ ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಯಲ್ಲಿ ಒಟ್ಟು 55,079 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 16,38,871ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ 5,45,318 ಸಕ್ರಿಯ ಪ್ರಕರಣಗಳಿದ್ದು, 10.57,806 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 35,747 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. ನಿನ್ನೆ ಒಂದೇ ದಿನ 6,42,588 ಜನರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ದೇಶದಲ್ಲಿ ಒಟ್ಟು 1.88,32,970 ಮಂದಿ ಕೋವಿಡ್ ಟೆಸ್ಟ್ ಗೆ ಒಳಗಾಗಿದ್ದಾರೆ.
Advertisement
India's COVID tally crosses 16 lakh mark with the highest single-day spike of 55,079 positive cases & 779 deaths in the last 24 hours.
Total cases stand at 16,38,871 including 5,45,318 active cases, 10,57,806 cured/discharged & 35,747 deaths: Health Ministry pic.twitter.com/qh3paziC0C
— ANI (@ANI) July 31, 2020
Advertisement
ಕೊರೊನಾದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಅಮೆರಿಕ (1,54,963), ಬ್ರೆಜಿಲ್ (91,263), ಬ್ರಿಟನ್ (45,999) ಮತ್ತು ಮೆಕ್ಸಿಕೊ (45,361) ದೇಶಗಳು ವಿಶ್ವದಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿವೆ. ಇನ್ನು ದೇಶದಲ್ಲಿ ನೆರೆಯ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ತಮಿಳುನಾಡು, ದೆಹಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ರೆ , ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ.
Advertisement
The total number of #COVID19 samples tested up to 30th July is 1,88,32,970 including 6,42,588 samples tested yesterday: Indian Council of Medical Research (ICMR) pic.twitter.com/mqxmSzblV0
— ANI (@ANI) July 31, 2020