– 62 ರನ್‌ಗಳ ಮುನ್ನಡೆಯಲ್ಲಿ ಭಾರತ
– ನಾಯಕನ ಆಟವಾಡಿದ ಪೈನೆ
– ನೈಟ್ ವಾಚ್‌ಮ್ಯಾನ್ ಆಗಿ ಬುಮ್ರಾ ಕಣಕ್ಕೆ
ಆಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್‌ನ ಎರಡನೇ ದಿನವೇ 15 ವಿಕೆಟ್‌ಗಳು ಪತನಗೊಂಡಿದೆ. ಶುಕ್ರವಾರ ಒಂದೇ ದಿನವೇ ಭಾರತದ 5 ವಿಕೆಟ್‌ಗಳು ಪತನಗೊಂಡರೆ ಆಸ್ಟ್ರೇಲಿಯಾದ 10 ವಿಕೆಟ್‌ಗಳು ಉರುಳಿವೆ. ಭಾರತ ಸದ್ಯಕ್ಕೆ 62 ರನ್‌ಗಳ ಮುನ್ನಡೆಯಲ್ಲಿದೆ.
233 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಇಂದು 4 ವಿಕೆಟ್‌ಗಳ ಸಹಾಯದಿಂದ ಕೇವಲ 11 ರನ್‌ಗಳಿಸಿತು. ಇಂದು 4.1 ಓವರ್ ಆಡಿದ ಭಾರತ ಅಂತಿಮವಾಗಿ 93.1 ಓವರ್‌ಗಳಲ್ಲಿ 244 ರನ್‌ಗಳಿಗೆ ಆಲೌಟ್ ಆಯ್ತು.
Advertisement
Advertisement
ಮಿಚೆಲ್ ಸ್ಟ್ರಾಕ್ 4 ವಿಕೆಟ್ ಪ್ಯಾಟ್ ಕಮಿನ್ಸ್ 3, ಜೋಶ್ ಹ್ಯಾಝಲ್‌ವುಡ್ ಮತ್ತು ನಥನ್ ಲಿಯಾನ್ ತಲಾ ಒಂದು ವಿಕೆಟ್ ಕಿತ್ತರು.
Advertisement
ಆಸೀಸ್‌ಗೆ ಆರಂಭದಲ್ಲೇ ಶಾಕ್ ನೀಡಿದ ಬುಮ್ರಾ ತಂಡದ ಮೊತ್ತ 29 ಆಗುಷ್ಟರಲ್ಲೇ ಇಬ್ಬರು ಆರಂಭಿಕ ಆಟಗಾರರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಒಂದು ಹಂತದಲ್ಲಿ 111 ರನ್ ಗಳಿಸಿದ್ದಾಗ 7 ವಿಕೆಟ್ ಕಳೆದುಕೊಂಡು ಪರದಾಡುತ್ತಿದ್ದ ಆಸ್ಟ್ರೇಲಿಯಾ ನಾಯಕ ಟಿಮ್ ಪೈನೆ ಅವರ ಸಾಹಸದಿಂದ 72.1 ಓವರ್‌ಗಳಲ್ಲಿ 191 ರನ್‌ಗಳಿಸಿ ಆಲೌಟ್ ಆಯ್ತು.
Advertisement
ಲಬುಶೇನ್ 47 ರನ್(119 ಎಸೆತ, 7 ಬೌಂಡರಿ) ರನ್ ಗಳಿಸಿ ಔಟಾದರೆ ಟಿಮ್ ಪೈನೆ ಔಟಾಗದೇ 73 ರನ್(99 ಎಸೆತ, 10 ಬೌಂಡರಿ) ಹೊಡೆದರು. 18 ಓವರ್ ಬೌಲ್ ಮಾಡಿದ ಅಶ್ವಿನ್ 55 ರನ್ ನೀಡಿ 4 ವಿಕೆಟ್ ಕಿತ್ತರೆ ಉಮೇಶ್ ಯಾದವ್ 3 ವಿಕೆಟ್, ಬುಮ್ರಾ 2 ವಿಕೆಟ್ ಕಿತ್ತರು.
53 ರನ್‌ಗಳ ಮುನ್ನಡೆ ಪಡೆದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಈಗಾಲೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡು 6 ಓವರ್ ನಷ್ಟಕ್ಕೆ 9 ರನ್ ಗಳಿಸಿದೆ. 4 ರನ್ ಗಳಿಸಿ ಪೃಥ್ವಿ ಶಾ ಔಟಾಗಿದ್ದಾರೆ. 5 ರನ್ ಗಳಿಸಿದ ಮಯಾಂಕ್ ಅಗರ್‌ವಾಲ್ ಮತ್ತು ನೈಟ್ ವಾಚ್‌ಮ್ಯಾನ್ ಆಗಿ ಬಂದಿರುವ ಬುಮ್ರಾ 0 ರನ್ ಗಳಿಸಿ ನಾಳೆ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.