– ಕಳೆದ 24 ಗಂಟೆಗಳಲ್ಲಿ 396 ಮಂದಿ ಬಲಿ
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಸ್ಫೋಟವಾಗುತ್ತಲೇ ಇದೆ. ಇದೀಗ ಒಂದೇ ದಿನ ಬರೋಬ್ಬರಿ 10,956 ಮಂದಿಯಲ್ಲಿ ಮಹಾಮಾರಿ ಕೊರೊನಾ ವೈರಸ್ ದೃಢಪಟ್ಟಿದೆ.
ಲಾಕ್ಡೌನ್ ಸಡಿಲಗೊಳಿಸಿದ ಬೆನ್ನಲ್ಲೇ ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 2,97,535ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಮಾಹಿತಿ ನೀಡಿದೆ.
Advertisement
Advertisement
ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನಿಂದಾಗಿ ಭಾರತ ದೇಶದಲ್ಲಿ 396 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಮಹಾಮಾರಿ ವೈರಸ್ಗೆ ಬಲಿಯಾದವರ ಸಂಖ್ಯೆ ಕೂಡ 8,498ಕ್ಕೆ ಏರಿಕೆಯಾಗಿದೆ.
Advertisement
2,97,535 ಕೊರೊನಾ ಸೋಂಕಿತರ ಪೈಕಿ 1,47,195 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 1,41,842 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
Advertisement
ಇನ್ನೂ ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 97,648ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ 38,716, ದೆಹಲಿಯಲ್ಲಿ 34,687 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ.
India reports the highest single-day spike of 10,956 new #COVID19 cases & 396 deaths in the last 24 hours. Total number of cases in the country now at 297535, including 141842 active cases, 147195 cured/discharged/migrated and 8498 deaths: Ministry of Health and Family Welfare pic.twitter.com/OM2YIgMfrO
— ANI (@ANI) June 12, 2020