ನವದೆಹಲಿ: ಮಹಾಮಾರಿ ಚೀನಿ ವೈರಸ್ ದೇಶದಲ್ಲಿ ಅಟ್ಟಹಾಸ ಮುಂದುವರಿಸಿದ್ದು, ಒಂದೇ ದಿನ 1,069 ಮಂದಿ ಕೊರೊನಾ ವೈರಸ್ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಇದೀಗ ಸಾವಿನ ಸಂಖ್ಯೆ 1,00,842 ಮಂದಿ ಮೃತಪಟ್ಟಿದ್ದಾರೆ.
India's #COVID19 related deaths cross 1 lakh mark with 1,069 deaths reported in the last 24 hours.
With 79,476 new cases, the tally reaches 64,73,545 including 9,44,996 active cases, 54,27,707 cured/discharged/migrated cases & 1,00,842 deaths: Union Health Ministry pic.twitter.com/7QvhmAG2RS
— ANI (@ANI) October 3, 2020
Advertisement
ಕಳೆದ 24 ಗಂಟೆಯಲ್ಲಿ 79,476 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 64,73,545 ಕ್ಕೆ ಏರಿಕೆ ಆಗಿದೆ. 64,73,545 ಮಂದಿ ಸೋಂಕಿತರಲ್ಲಿ 9,44,996 ಸಕ್ರಿಯ ಪ್ರಕರಣಗಳಿದ್ದರೆ, 54,27,707 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
Advertisement
Advertisement
ದೇಶದಲ್ಲಿ ನಿನ್ನೆ ಒಂದೇ ದಿನ 11,32,675 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಈ ಮೂಲಕ ಇದೂವರೆಗೂ 7,78,50,403 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
Advertisement
COVID-19 Testing Update. For more details visit: https://t.co/dI1pqvXAsZ @MoHFW_INDIA @DeptHealthRes #ICMRFIGHTSCOVID19 #IndiaFightsCOVID19 #CoronaUpdatesInIndia #COVID19 pic.twitter.com/GvHhbIC7A2
— ICMR (@ICMRDELHI) October 3, 2020
ಕರ್ನಾಟಕದಲಿಯೂ ಕೊರೊನಾ ರಣಕೇಕೆ ಮುಂದುವರಿದಿದ್ದು, ನಿನ್ನೆ 8,793 ಕೊರೊನಾ ಪ್ರಕರಣಗಳು ಪತ್ತೆಯಾಗಿತ್ತು. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,20,630ಕ್ಕೆ ಏರಿಕೆಯಾಗಿದೆ. ಒಂದೇ ದಿನ 125 ಮಂದಿ ಕೊರೊನಾಗೆ ಬಲಿಯಾಗಿದ್ದು, ಇದುವರೆಗೆ 9,119 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.
ನಿನ್ನೆ ರಾಜ್ಯದಲ್ಲಿ 7,094 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 6,20,630 ಸೋಂಕಿತರ ಪೈಕಿ 1,11,986 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 4,99,506 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 827 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಿತ್ತು.