ಬೆಂಗಳೂರು: ಭಾರತದ ಗಡಿಯಲ್ಲಿ ಚೀನಾ ಕಿರಿಕ್ ಮಾಡಿದ ಬೆನ್ನಲ್ಲೇ ಈಗ ದೇಶದಲ್ಲಿ ಸೈಬರ್ ಸಮರ ಆರಂಭಗೊಂಡಿದ್ದು, ಚೈನಾ ಅಪ್ಲಿಕೇಶನ್ ಗಳನ್ನು ಡಿಲೀಟ್ ಮಾಡುವ ಮೂಲಕ ಜನ ಬಿಸಿ ಮುಟ್ಟಿಸುತ್ತಿದ್ದಾರೆ.
ಹೌದು, ಭಾರತದ ಜನಸಂಖ್ಯೆಯೇ ಚೀನಾಗೆ ಈಗ ದೊಡ್ಡ ಮಾರುಕಟ್ಟೆಯಾಗಿದ್ದು, ಹಲವಾರು ಅಪ್ಲಿಕೇಶನ್ ಕಂಪನಿಗಳಿಗೆ ಭಾರತವೇ ಆದಾಯದ ಮೂಲವಾಗಿದೆ. ಭಾರತದಿಂದಲೇ ತನ್ನ ಕಂಪನಿಗಳು ಅತಿ ಹೆಚ್ಚು ಆದಾಯ ಪಡೆಯುತ್ತಿರುವ ವಿಚಾರ ತಿಳಿದಿದ್ದರೂ ಚೀನಾ ಮಾತ್ರ ಗಡಿಯಲ್ಲಿ ಕ್ಯಾತೆ ತೆಗೆಯುವುದನ್ನು ಬಿಟ್ಟಿಲ್ಲ.
Advertisement
Advertisement
ಚೀನಾದ ಕಾಟ ಹೆಚ್ಚಾಗುತ್ತಿದ್ದಂತೆ ಭಾರತದ ಜನ ರೊಚ್ಚಿಗೆದ್ದು ಚೀನಾ ಅಪ್ಲಿಕೇಶನ್ ಗಳನ್ನು ಬಳಸಂತೆ ಕರೆ ನೀಡುತ್ತಿದ್ದಾರೆ. ಈ ಅಭಿಯಾನ ಜಾಸ್ತಿ ಆಗುತ್ತಿದ್ದಂತೆ ಫೋನಿನಲ್ಲಿರುವ ಚೀನಾ ಅಪ್ಲಿಕೇಶನ್ ಗಳು ಯಾವುದು? ಹೊರ ದೇಶದಲ್ಲಿರುವ ಆಪ್ ಯಾವುದು ಎಂದು ಸುಲಭವಾಗಿ ತಿಳಿಯಲು ‘ರಿಮೂವ್ ಚೀನಾ ಆ್ಯಪ್’ ಹೆಸರಿನ ಅಪ್ಲಿಕೇಶನ್ ಪ್ಲೇ ಸ್ಟೋರ್ ನಲ್ಲಿ ಲ್ಯಾಂಡ್ ಆಗಿದೆ.
Advertisement
ಮೇ 17ಕ್ಕೆ ಆ್ಯಪ್ ರಿಲೀಸ್ ಆಗಿದ್ದೆ ತಡ ಕೇವಲ 10 ದಿನದಲ್ಲಿ 10 ಲಕ್ಷ ಅಪ್ಲಿಕೇಶನ್ ಗಳು ಡೌನ್ ಲೋಡ್ ಆಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮಾತ್ರ ಲಭ್ಯ ಇರುವ ಈ ಉಚಿತ ಆ್ಯಪ್ ಅನ್ನು ಜನ ಬಳಸುತ್ತಿದ್ದಾರೆ. ಈ ಆ್ಯಪ್ ಬಳಕೆ ಮಾಡಿದರೆ ಒಂದೇ ಕ್ಲಿಕ್ ನಲ್ಲಿ ಚೀನಾ ಮೂಲದ ಎಲ್ಲ ಅಪ್ಲಿಕೇಶನ್ ಗಳು ಡಿಲೀಟ್ ಆಗುತ್ತಿವೆ.
Advertisement
3.8 ಎಂಬಿ ಗಾತ್ರದ ಅಪ್ಲಿಕೇಶನ್ ಅನ್ನು ಒನ್ ಟಚ್ ಆ್ಯಪ್ ಕಂಪನಿ ಅಭಿವೃದ್ಧಿಪಡಿಸಿದ್ದು, ಅತಿ ಹೆಚ್ಚು ಜನರು 5 ಸ್ಟಾರ್ ನೀಡಿದ್ದಾರೆ. ಪರಿಣಾಮ ಪ್ಲೇ ಸ್ಟೋರ್ ನಲ್ಲಿ 4.8 ರೇಟಿಂಗ್ ಪಡೆದುಕೊಂಡಿದೆ.
ನಾವು ಶೈಕ್ಷಣಿಕ ಉದ್ದೇಶಕ್ಕಾಗಿ ಈ ಆ್ಯಪ್ ಅಭಿವೃದ್ಧಿ ಪಡಿಸಿದ್ದೇವೆಯೇ ಹೊರತು ಬಲವಂತವಾಗಿ ಅಪ್ಲಿಕೇಶನ್ ಗಳನ್ನು ಡಿಲೀಟ್ ಮಾಡಲು ಅಲ್ಲ. ಯಾವ ದೇಶದ ಯಾವ ಅಪ್ಲಿಕೇಶನ್ ಗಳನ್ನು ಅಭಿವೃದ್ಧಿ ಪಡಿಸಿದೆ ಎಂಬ ಮಾಹಿತಿ ಬಳಕೆದಾರರಿಗೆ ತಿಳಿಯಲು ನಾವು ಈ ಆ್ಯಪ್ ಬಿಟ್ಟಿದ್ದೇವೆ. ಈ ಕಾರಣಕ್ಕೆ ಇದು ಶಿಕ್ಷಣ ವಿಭಾಗದಲ್ಲಿ ಕಾಣಿಸುತ್ತಿದೆ. ಈ ಅಪ್ಲಿಕೇಶನ್ ಅನ್ನು ವಾಣಿಜ್ಯ ಬಳಕೆಗೆ ಮಾಡುವುದಿಲ್ಲ ಎಂದು ಒನ್ ಟಚ್ ಆಪ್ ಲ್ಯಾಬ್ಸ್ ಕಂಪನಿ ತಿಳಿಸಿದೆ.