ಒಂದೇ ಕುಟುಂಬದ 12 ಜನರು ನೀರು ಪಾಲು

Public TV
1 Min Read
sarayu e1625904092297

ಲಕ್ನೋ: ಒಂದೇ ಕುಟುಂಬದ 12 ಜನರು ನೀರು ಪಾಲಾಗಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ನಡೆದಿದೆ.

ಆಗ್ರಾ ಮೂಲದ ಒಂದೇ ಕುಟುಂಬದ 15 ಜನ ಅಯೋಧ್ಯೆಗೆ ಆಗಮಿಸಿತ್ತು. ಶ್ರೀರಾಮನ ದರ್ಶನ ಪಡೆದು ಹಿಂದಿರುಗವಾಗ ಗುಪ್ತಾರ್ ಘಾಟ್ ಗೆ ತೆರಳಿದ್ದಾರೆ. ನದಿಯ ಮೆಟ್ಟಿಲುಗಳ ಕೆಲವರು ಸ್ನಾನಕ್ಕೆ ಮುಂದಾಗಿದ್ದಾರೆ. ಹರಿವು ಹೆಚ್ಚಾಗಿದ್ದರಿಂದ ಒಬ್ಬರು ಕಾಲು ಜಾರಿ ನೀರು ಪಾಲಾಗಿದ್ದಾರೆ. ಒಬ್ಬರ ರಕ್ಷಣೆಗಾಗಿ ನದಿಗೆ ಇಳಿದ 12 ಜನ ಸಹ ನೀರುಪಾಲಾಗಿದ್ದಾರೆ. 12ರಲ್ಲಿ ಆರು ಶವಗಳ ಪತ್ತೆಯಾಗಿದ್ದು, ಮೂವರನ್ನು ರಕ್ಷಿಸಲಾಗಿದೆ. ಇನ್ನೂ ಮೂವರ ಪತ್ತೆಗಾಗಿ ಶೋಧನಾ ಕಾರ್ಯ ಮುಂದುವರಿದಿದೆ.

Ayodhya News 696x374 1 medium

ರಕ್ಷಣೆಗೊಳಗಾದ ಮೂವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಸ್ಥಳೀಯ ನಾವಿಕರ ನೆರವಿನೊಂದಿಗೆ ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ ಎಂದು ಅಯೋಧ್ಯೆಯ ಜಿಲ್ಲಾಧಿಕಾರಿ ಅನುಜ್ ಕುಮಾರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *