ಚಿಕ್ಕೋಡಿ(ಬೆಳಗಾವಿ): ಬಟ್ಟೆ ತೊಳೆಯಲು ಹೋದ ಒಂದೇ ಕುಟುಂಬದ ನಾಲ್ವರು ಸಹೋದರರು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದೆ.
ಹಲ್ಯಾಳ ಗ್ರಾಮದ ಪರಸಪ್ಪಾ ಗೋಪಾಲ ಬನಸೋಡೆ(42), ಸದಾಶಿವ ಬನಸೋಡೆ (36), ಧರೇಪ್ಪಾ (26), ಶಂಕರ(23) ಸೇರಿದಂತೆ ನಾಲ್ವರು ನೀರಿನ ಸೆಳೆತಕ್ಕೆ ಸಿಲುಕಿ ನದಿ ಪಾಲಾಗಿದ್ದಾರೆ.
Advertisement
Advertisement
ಗ್ರಾಮದಲ್ಲಿ ಲಾಲಸಾಬ ಉರಸ್ ಹಬ್ಬದ ನಿಮಿತ್ತ ಹಾಸಿಗೆ ಬಟ್ಟೆ ಬರೆ ತೊಳೆಯಲು ನದಿಗೆ ತೆರಳಿದ್ದ ನಾಲ್ಕು ಜನರಲ್ಲಿ ಧರೇಪ್ಪಾ ಕಾಲು ಜಾರಿ ನದಿಗೆ ಬಿದಿದ್ದಾನೆ. ಆತನನ್ನ ರಕ್ಷಿಸಲು ಮೂವರು ನದಿಗೆ ಜಿಗಿದಿದ್ದು, ನಾಲ್ವರು ನೀರಿನ ಸೇಳೆತಕ್ಕೆ ಸಿಲುಕಿ ನದಿಯಲ್ಲಿ ಕಣ್ಮರೆಯಾಗಿದ್ದಾರೆ. ಇದನ್ನೂ ಓದಿ: ರಾಜ್ಯದ ಭೂಪಟದಲ್ಲಿ ಶಿವಮೊಗ್ಗ ಬಿಟ್ರೆ ಬೇರೆ ಜಿಲ್ಲೆ ಇಲ್ವೇ ಇಲ್ವಾ: ಸಿಎಂಗೆ ಹೆಚ್.ಡಿ ರೇವಣ್ಣ ಪ್ರಶ್ನೆ
Advertisement
Advertisement
ನಾಲ್ಕು ಜನ ಸಹೋದರರು ಮೃತಪಟ್ಟಿರುವ ಸಾಧ್ಯತೆ ಹೆಚ್ಚಾಗಿದ್ದು, ಘಟನಾ ಸ್ಥಳಕ್ಕೆ ಅಥಣಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೋಲಿಸರು ಆಗಮಿಸಿದ್ದಾರೆ. ದೇಹಗಳನ್ನು ಹೊರ ತೆಗೆಯಲು ನುರಿತ ಈಜು ತಜ್ಞರನ್ನ ನದಿಗೆ ಇಳಿಸಿದ್ದರೂ ದೇಹಗಳು ಪತ್ತೆಯಾಗದ ಕಾರಣ ಎನ್ ಡಿ ಆರ್ ಎಫ್ ತಂಡವನ್ನ ಕರೆಯಿಸಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಅಥಣಿ ತಹಸಿಲ್ದಾರ್ ದುಂಡಪ್ಪ ಕೊಮಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ನದಿ ತೀರಕ್ಕೆ ಜನ ಹೋಗದಂತೆ ಕ್ರಮ ವಹಿಸದೇ ಇರುವುದೇ ಈ ಘಟನೆಗೆ ಕಾರಣ ಎಂದು ಅಧಿಕಾರಿಗಳ ವಿರುದ್ಧ ಆರೋಪ ಕೇಳಿ ಬಂದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.