ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನ ನಡೆಸುತ್ತಿರುವ ಎಸ್‍ಐಟಿ, ಐವರು ಸಿಡಿಗೇಡಿಗಳನ್ನ ಖೆಡ್ಡಾಗೆ ಬೀಳಿಸಿದೆ. ಎಸ್‍ಐಟಿ ತಂಡ ರಚನೆಯಾದ ಎರಡೇ ಗಂಟೆಯಲ್ಲಿ ಐವರನ್ನ ಅಧಿಕಾರಿಗಳು ಪತ್ತೆ ಮಾಡಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಎಸ್‍ಐಟಿ ಆಪರೇಷನ್‍ನ ಕಂಪ್ಲೀಟ್ ಡಿಟೇಲ್ಸ್: ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಮಧ್ಯಾಹ್ನ 2ಕ್ಕೆ ಎಸ್‍ಐಟಿ ರಚನೆ ಮಾಡಲಾಗಿತ್ತು. ಎಸ್‍ಐಟಿ ರಚನೆಯಾದ ಎರಡು ಗಂಟೆಯಲ್ಲಿ ಇಬ್ಬರು ಸಿಡಿಗೇಡಿಗಳು ವಶಕ್ಕೆ ಪಡೆಯಲಾಯ್ತು. ಬೆಂಗಳೂರಿನಲ್ಲಿ ಎರಡು ಕಡೆ ಪ್ರತ್ಯೇಕ ದಾಳಿ ನಡೆಸಿದ ಅಧಿಕಾರಿಗಳು ಇಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದರು. ವಶಕ್ಕೆ ಪಡೆದ ಇಬ್ಬರನ್ನ ನಾಲ್ಕು ಗಂಟೆಗಳ ಕಾಲು ಆರು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಎಸ್‍ಐಟಿ ತೀವ್ರ ವಿಚಾರಣೆಗೆ ಇಬ್ಬರು ತಮ್ಮ ಜೊತೆಯಲ್ಲಿದ್ದ ಮೂವರ ಮಾಹಿತಿಯನ್ನ ನೀಡಿದ್ದಾರೆ. ಇಬ್ಬರ ಮಾಹಿತಿ ಆಧರಿಸಿ ಮತ್ತೆ ಮೂವರಿಗೆ 3 ರಾಜ್ಯಗಳಲ್ಲಿ ಎಸ್‍ಐಟಿ ಬಲೆ ಬೀಸಿತ್ತು. ಹೈದರಾಬಾದ್, ಚೆನ್ನೈ ಮತ್ತು ಮಂಗಳೂರಲ್ಲಿ ತಲಾ ಒಬ್ಬರನ್ನ ವಶಕ್ಕೆ ಪಡೆಯಲಾಗಿದೆ. ಕೇವಲ ಆರು ಗಂಟೆಗಳಲ್ಲಿ ಐವರ ಆಪರೇಷನ್ ಮುಗಿಸಿದೆ. ಸದ್ಯ ಐವರು ಸಿಡಿಗೇಡಿಗಳ ಪೈಕಿ ನಾಲ್ವರಷ್ಟೇ ಎಸ್‍ಐಟಿ ವಶದಲ್ಲಿದ್ದು, ಒಬ್ಬರನ್ನು ವಿಚಾರಣೆ ಮಾಡಿ ಷರತ್ತಿನ ಮೇರೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.