RRR ಸಿನಿಮಾದ ಒಂದು ಸಾಂಗ್ ಶೂಟ್‍ಗೆ ರಾಜಮೌಳಿ ಬೃಹತ್ ಪ್ಲಾನ್

Public TV
2 Min Read
rrr rajamouli

ಹೈದರಾಬಾದ್: ನಿರ್ದೇಶಕ ಎಸ್.ಎಸ್.ರಾಜಮೌಳಿ ಎಂದರೆ ಸಿನಿಮಾಗಳ ಮಾಂತ್ರಿಕ, ಬಾಹುಬಲಿ ಸಿನಿಮಾ ಮೂಲಕವೇ ತಮ್ಮ ನಿರ್ದೇಶನದ ಕುರಿತು ಬೆರಗು ಮೂಡಿಸಿದ್ದಾರೆ. ಹೀಗಾಗಿ ಇವರ ಸಿನಿಮಾಗಳ ಮೇಲೆ ಇದೀಗ ಪ್ರೇಕ್ಷಕರ ನಿರೀಕ್ಷೆ ಸಹ ಅಷ್ಟೇ ಎತ್ತರಕ್ಕೆ ಏರಿದೆ. ರಾಜಮೌಳಿ ಸಹ ಅಷ್ಟೇ ಎಚ್ಚರದಿಂದ ಸಿನಿಮಾ ಮಾಡುತ್ತಿದ್ದು, ಅವರ ಮುಂದಿನ ಸಿನಿಮಾ ಆರ್‍ಆರ್‍ಆರ್ ಸಾಕಷ್ಟು ಕುತೂಹಲ ಮೂಡಿಸಿದೆ. ಇದೀಗ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು, ಆರ್‍ಆರ್‍ಆರ್ ಚಿತ್ರದ ಹಾಡೊಂದನ್ನು ಅದ್ಭುತವಾಗಿ ಮಾಡುತ್ತಿದ್ದಾರೆ.

RRR 1

ಆರ್‍ಆರ್‍ಆರ್ ಸಿನಿಮಾ ಈಗಾಗಲೇ ದಕ್ಷಿಣ ಚಿತ್ರ ರಂಗದಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಬಹುತಾರಾಗಣದ ಬಿಗ್ ಬಜೆಟ್ ಸಿನಿಮಾ ಆಗಿದೆ. ಜೂ.ಎನ್‍ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ಹಲವು ದಿಗ್ಗಜ ನಟರು ಸಿನಿಮಾದ ಭಾಗವಾಗುತ್ತಿದ್ದಾರೆ. ಇದನ್ನು ಹೊರತುಪಡಿಸಿದರೆ ಮೇಕಿಂಗ್ ವಿಚಾರದಲ್ಲಿ ರಾಜಮೌಳಿ ಯಾವ ರೀತಿ ಮ್ಯಾಜಿಕ್ ಮಾಡುತ್ತಾರೆ ಎಂಬುದಕ್ಕೆ ಬಾಹುಬಲಿ ಸರಣಿ ಸಿನಿಮಾಗಳೇ ಸಾಕ್ಷಿ. ಹೀಗಾಗಿ ಆರ್‍ಆರ್‍ಆರ್ ಸಿನಿಮಾವನ್ನು ಸಹ ಅಷ್ಟೇ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಒಂದು ಹಾಡಿನ ಚಿತ್ರೀಕರಣಕ್ಕೆ ರಾಜಮೌಳಿ ಅವರು ಮಾಡಿರುವ ದೊಡ್ಡ ಪ್ಲಾನ್. ಇದನ್ನೂ ಓದಿ: ದಿವಂಗತ ನಟ ಎನ್‍ಟಿಆರ್‌ಗೆ ಭಾರತ ರತ್ನ ನೀಡಿ – ಮೆಗಾಸ್ಟಾರ್ ಮನವಿ

RRR Poster

ಹೌದು ಒಂದು ಹಾಡಿಗಾಗಿ ಬರೋಬ್ಬರಿ ಒಂದು ತಿಂಗಳು ಚಿತ್ರೀಕರಣ ನಡೆಸುತ್ತಿದ್ದಾರಂತೆ. ಒಂದು ಹಾಡು ಚಿತ್ರೀಕರಣಕ್ಕೆ ಸಾಮಾನ್ಯವಾಗಿ 1 ವಾರ ಅಥವಾ 10 ದಿನಗಳ ಸಮಯವನ್ನು ತೆಗೆದುಕೊಳ್ಳುತ್ತಾರೆ. ಆದರೆ ರಾಜಮೌಳಿಯವರು ಬರೋಬ್ಬರಿ 30 ದಿನ ತೆಗೆದುಕೊಳ್ಳುತ್ತಿದ್ದಾರೆ. ಈ ಹಾಡಿನಲ್ಲಿ ದಿಗ್ಗಜ ನಟರಾದ ಜೂ.ಎನ್‍ಟಿಆರ್, ರಾಮ್‍ಚರಣ್ ಇಬ್ಬರೂ ನಟಿಸುತ್ತಿದ್ದಾರೆ. ಸಾಂಗ್ ಹೇಗೆ ಮೂಡಿಬರಲಿದೆ ಎಂಬುದು ಸದ್ಯ ಅಭಿಮಾನಿಗಳ ಕುತೂಹಲವಾಗಿದೆ. ಅಂದಹಾಗೆ ಈ ಸಿನಿಮಾವನ್ನು ದಾನಯ್ಯ ಅವರು ನಿರ್ಮಿಸುತ್ತಿದ್ದಾರೆ.

RRR a

ಶೂಟಿಂಗ್ ಬಹುತೇಕ ಕಂಪ್ಲೀಟ್
ಇನ್ನೂ ಖುಷಿಯ ವಿಚಾರ ಎಂಬಂತೆ ಆರ್‍ಆರ್‍ಆರ್ ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, 2 ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. ಮತ್ತೊಂದು ಹಾಡಿನಲ್ಲಿ ರಾಮ್‍ಚರಣ್ ಹಾಗೂ ಆಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಎಂ.ಎಂ.ಕೀರವಾಣಿ ಆರ್‍ಆರ್‍ಆರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಅಲ್ಲದೆ ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಪ್ಯಾಚಪ್ ಕೆಲಸಗಳು ಮಾತ್ರ ಬಾಕಿ ಇದ್ದು, ಕೇವಲ 10 ದಿನಗಳ ಕಾಲ ಶೂಟಿಂಗ್ ಮಾಡಬೇಕಿದೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದ್ದು, ಲಾಕ್‍ಡೌನ್ ಓಪನ್ ಆಗುತ್ತಿದ್ದಂತೆ ಚಿತ್ರತಂಡ ಶೂಟಿಂಗ್‍ನಲ್ಲಿ ಭಾಗವಹಿಸಲಿದೆ.

RRR komaram Bheem

ಆರ್‍ಆರ್‍ಆರ್ ಚಿತ್ರ ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಎಲ್ಲ ಭಾಷೆಗಳ ಡಿಜಿಟಲ್ ಹಾಗೂ ಸ್ಯಾಟೆಲೈಟ್ ಹಕ್ಕುಗಳನ್ನು ಜೀ5 ಮತ್ತು ನೆಟ್‍ಫ್ಲಿಕ್ಸ್ ಬರೋಬ್ಬರಿ 325 ಕೋಟಿ ರೂಪಾಯಿಗೆ ಕೊಂಡುಕೊಂಡಿವೆ. ಇನ್ನೂ ವಿಶೇಷ ಎಂಬಂತೆ ಆರ್‍ಆರ್‍ಆರ್ ಚಿತ್ರ ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಆಗಲಿದೆ. ವಿದೇಶಿ ಭಾಷೆಗಳ ಡಬ್ಬಿಂಗ್ ಹಕ್ಕನ್ನು ನೆಟ್‍ಫ್ಲಿಕ್ಸ್ ಪಡೆದುಕೊಂಡಿದೆ. ಆರ್‍ಆರ್‍ಆರ್ ಸಿನಿಮಾದ ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ವರ್ಷನ್ ಜೀ5ನಲ್ಲಿ ಪ್ರೀಮಿಯರ್ ಆಗಲಿದೆ. ಹಿಂದಿ ವರ್ಷನ್ ಮಾತ್ರ ನೆಟ್‍ಫ್ಲಿಕ್ಸ್‍ನಲ್ಲಿ ಪ್ರೀಮಿಯರ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Alia RRR

Share This Article
Leave a Comment

Leave a Reply

Your email address will not be published. Required fields are marked *