ಬೆಂಗಳೂರು: ಒಂದು ಧರ್ಮದ ಅಸಹಿಷ್ಣುತೆ ಇತರ ಧರ್ಮಗಳನ್ನ ಪ್ರಚೋದಿಸುತ್ತೆ ಎಂದು ನಟ ಚೇತನ್ ನಗರದಲ್ಲಿ ನಡೆದ ಗಲಭೆಯ ಪ್ರತಿಕ್ರಿಯೆ ನೀಡಿದ್ದಾರೆ.
ನಟ ಚೇತನ್ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಅವಹೇಳನಕಾರಿ ಫೇಸ್‍ಬುಕ್ ಪೋಸ್ಟ್ ಕುರಿತು ಮುಸ್ಲಿಂ ಜನಸಮೂಹ ನಡೆಸಿದ ಹಿಂಸಾಚಾರವು ಸಮರ್ಥನೀಯವಲ್ಲ” ಎಂದಿದ್ದಾರೆ.
ಅಲ್ಲದೇ “ವಾಕ್ ಸ್ವಾತಂತ್ರ್ಯವನ್ನು ಗರಿಷ್ಠ ಮಟ್ಟಿಗೆ ಎತ್ತಿಹಿಡಿಯಬೇಕು ಮತ್ತು ‘ಸರಿಯಾದ ಪ್ರಕ್ರಿಯೆಯ’ ಮೂಲಕ ವಿರೋಧಿಸಬೇಕು. ಎಲ್ಲಾ ಧರ್ಮಗಳು ಇಸ್ಲಾಂ ಸೇರಿದಂತೆ ವಿಮರ್ಶೆಗೆ ಮುಕ್ತವಾಗಿವೆ. ಒಂದು ಧರ್ಮದ ಅಸಹಿಷ್ಣುತೆ ಇತರ ಧರ್ಮಗಳನ್ನು ಪ್ರಚೋದಿಸುತ್ತದೆ. ಕೋಮು ಸೌಹಾರ್ದತೆಯನ್ನು ಅಡ್ಡಿಪಡಿಸುತ್ತದೆ” ಎಂದು ಫೇಸ್‍ಬುಕ್‍ನಲ್ಲಿ ನಟ ಚೇತನ್ ಬರೆದುಕೊಂಡಿದ್ದಾರೆ.
ಏನಿದು ಪ್ರಕರಣ?
ಮಂಗಳವಾರ ರಾತ್ರಿ ದುಷ್ಕರ್ಮಿಗಳು ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿ ಸಂಪೂರ್ಣ ಸುಟ್ಟು ಹಾಕಿದ್ದಾರೆ. ಶಾಸಕರ ಆಪ್ತ ನವೀನ್ ಫೇಸ್‍ಬುಕ್‍ನಲ್ಲಿ ಸಮುದಾಯವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಗುಂಪೊಂದು ದಿಢೀರ್ ಆಗಿ ರಾತ್ರಿ ಕಾವಲ್ ಭೈರಸಂದ್ರದಲ್ಲಿರುವ ಶಾಸಕರ ಮನೆ ಮುಂದೆ ಜಮಾಯಿಸಿ ಬೆಂಕಿ ಹಚ್ಚಿದ್ದರು.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) August 12, 2020
ಅಷ್ಟೇ ಅಲ್ಲದೇ ಡಿಜೆ ಪೊಲೀಸ್ ಠಾಣೆಯ ಮೇಲೂ ಕಲ್ಲೂ ತೂರಾಟ ಮಾಡಿದ್ದು, ಪೊಲೀಸ್ ಠಾಣೆಯಲ್ಲಿದ್ದ 50ಕ್ಕೂ ಹೆಚ್ಚು ಬೈಕ್‍ಗಳಿಗೆ ಬೆಂಕಿ ಹಚ್ಚಿದ್ದರು. ಅಲ್ಲದೇ ರಸ್ತೆಯಲ್ಲಿದ್ದ ಎಲ್ಲ ವಾಹನಗಳಿಗೆ ಬೆಂಕಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ರಾತ್ರಿ ಪೊಲೀಸ್ ಗಲಭೆಯ ವೇಳೆ ಫೈರಿಂಗ್ ಮಾಡಿದ್ದು, ಮೂವರು ಬಲಿಯಾಗಿದ್ದಾರೆ. ಪೊಲೀಸರು 170 ಮಂದಿಯನ್ನು ಬಂದಿಸಿದ್ದು, ಉಳಿದವರು ಬೆಂಕಿ ಹಚ್ಚಿ ಧ್ವಂಸ ಮಾಡಿದ ನಂತರ ಊರು ಬಿಟ್ಟು ಪರಾರಿಯಾಗಿದ್ದಾರೆ.