ಬೆಂಗಳೂರು: ಬಿಗ್‍ಬಾಸ್ ಮನೆಯ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡ ಸೆಲೆಬ್ರಿಟಿಗಳು ಮನೆ ಪ್ರವೇಶ ಮಾಡಿದ ನಂತರ ಮೊದಲ ದಿನ ಹೇಗೆ ನಮ್ಮನ್ನು ರಂಜಿಸುತ್ತಾರೆ. ಏನು ಸುದ್ದಿ ಸಿಗಬಹುದು ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಒಂದು ಪ್ರೇಮ್ ಕಹಾನಿ ಕಣ್ಣಿಗೆ ಬಿದ್ದಿದೆ.
ಹಾಸ್ಯ ನಟ ಮಂಜು ಪಾವಗಡ ಮತ್ತು ಮಾಡೆಲ್ ದಿವ್ಯಾ ಸುರೇಶ್ ನಡುವಿನ ಒಂದು ಸಣ್ಣ ವೀಡಿಯೋ ಇಬ್ಬರ ನಡುವೆ ನಡೆದ ಸಂಭಾಷಣೆ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಮಾತಿನ ಭರದಲ್ಲಿ ನಿಮಗೋಸ್ಕರ ಏನು ಬೇಕಾದರೂ ಮಾಡುತ್ತೇನೆ ಎಂದು ಹೇಳಿ ಮಂಜು ಜೋರಾಗಿ ನಕ್ಕಿದ್ದಾರೆ. ಈ ದೃಶ್ಯವನ್ನು ನೋಡಿದ ಅಭಿಮಾನಿಗಳು ಸಖತ್ ಕ್ಯೂಟ್ ಎಂದಿದ್ದಾರೆ.
ದಿವ್ಯಾ ಸುರೇಶ್ ತಮ್ಮ ಬಟ್ಟೆಗಳನ್ನು ಜೋಡಿಸುವ ಸಮಯದಲ್ಲಿ ಅಲ್ಲೇ ಇದ್ದ ಮಂಜು ಪಾವಗಡ ಅವರಿಗೆ ಬಟ್ಟೆ ಮಡಿಚಿಕೊಡಲು ಹೇಳಿದ್ದಾರೆ. ಆಗ ಮಂಜು, ನಿಮಗೋಸ್ಕರ ಏನು ಬೇಕಾದರೂ ಮಾಡುತ್ತೇನೆ ಏನೇ ಇದ್ದರೂ ಹೇಳಿ ಎಂದಿದ್ದಾರೆ. ಈ ವೇಳೆ ದಿವ್ಯಾ ಸುರೇಶ್ ನಿಮ್ಮ ಕೈಯಲ್ಲಿ ಕೆಲಸ ಮಾಡಿಸಲ್ಲ. ನಿಮ್ಮ ಕೈಗಳಿಗೆ ನೋವಾದರೆ ನನ್ನ ಮನಸ್ಸಿಗೆ ನೋವಾಗುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಅಲ್ಲಿದ್ದ ದಿವ್ಯ ಉರುಡುಗ ನಕ್ಕು ಇವತ್ತಿಗೆ ಇಷ್ಟು ಸಾಕು, ಇವರು ಇನ್ನು ನಿದ್ದೆ ಮಾಡಲ್ಲ ಎಂದು ಕಾಲೆಳೆದಿದ್ದಾರೆ.
ಪ್ರಾಣ ಹೋದರೂ ಸರಿ ಏನು ಬೇಕಾದರೂ ಮಾಡುತ್ತೀನಿ.. ಯಾವಾಗ ಬೇಕಾದರೂ ನಿಮಗೋಸ್ಕರ ಮಾಡುತ್ತೇನೆ. ಮಾತಿಗಿಂತ ವಿಶ್ವಾಸ ಬೇಕಾ ನಿಮಗೆ ಪ್ರೀತಿ, ವಿಶ್ವಾಸಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದಿದ್ದಾರೆ. ಇದನ್ನೆಲ್ಲಾ ನಂಬಲ್ಲ ದಿವ್ಯ ಎಂದಿದ್ದಾರೆ. ಪ್ರಪಂಚದಲ್ಲಿ ಸಾವಿರ ಜನರನ್ನ ನೋಡಿರಬಹುದು. ಆದರೆ ಆ ಸಾವಿರದ 1ನೇ ಜನನೇ ನಾನು ಎಂದಿದ್ದಾರೆ. ಆಗ ದಿವ್ಯಾ ನೀವು ಚೆನ್ನಾಗಿರಬೇಕು ಅಷ್ಟೇ ನನಗೆ ಎಂದು ನಕ್ಕಿದ್ದಾರೆ.
ದಿವ್ಯಾ ಸುರೇಶ್ ಅವರ ಕುಟುಂಬದ ಕುರಿತಾಗಿ ವಿಚಾರ ಮಾಡುವಾಗ ಕೆಲವು ವಿಚಾರಗಳನ್ನು ಮಾತನಾಡುತ್ತಾ ನಾನು ಉನ್ನತ ಶಿಕ್ಷಣವನ್ನು 8 ವರ್ಷ ಮಾಡಿದ್ದೇನೆ. ಪಿಯುಸಿಯಲ್ಲಿ ಒಂದೇ ವಿಷಯವನ್ನು 8 ವರ್ಷ ಬರೆದಿದ್ದೇನೆ. ಈಗಲೂ ಬರೆಯುತ್ತೇನೆ. ಕಷ್ಟ ಪಟ್ಟಿದ್ದೇನೆ 8 ವರ್ಷ ಬರೆದಿದ್ದೇನೆ. ನಮ್ಮ ಅಪ್ಪ ಈಗಲೂ ಬರೆಯಲು ಹೇಳುತ್ತಾರೆ ಆದರೆ ಆಗುತ್ತಿಲ್ಲ. 8 ವರ್ಷ ಬರೆದಿರುವ ಕುರಿತಾಗಿ ನನಗೆ ಹೆಮ್ಮೆ ಇದೆ ಎಂದು ಹೇಳುತ್ತಾ ಆ್ಯಪಲ್‍ನ್ನು ಕಚ್ಚಿ ತಿಂದು ನಕ್ಕಿದ್ದಾರೆ.
ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ತುಂಬಾ ಆತ್ಮೀಯವಾಗಿ ಮಾತನಾಡುತ್ತಿದ್ದಾರೆ. ಈ ಇಬ್ಬರಿಂದ ಇನ್ನೂ ಹೆಚ್ಚಿನ ಮನರಂಜನೆ ಸಿಗಬಹುದು ಎಂದು ಅಭಿಮಾನಿಗಳು ನೀರಿಕ್ಷಿಸುತ್ತಿದ್ದಾರೆ. ಮಂಜು ಅವರು ತನ್ನದೇ ಶೈಲಿಯಲ್ಲಿ ಮಾತನಾಡುತ್ತಾ ಎಲ್ಲರನ್ನು ನಕ್ಕುನಗಿಸುತ್ತಾ ಮನೆಯವರ ಮುಖದಲ್ಲಿ ನಗು ತರಿಸುವ ಕೆಲಸವನ್ನು ಮಾಡುತ್ತಿದ್ದಾರೆ.