ಐ ಲವ್ ಯು ಬರೆದು ವಿಷದ ಇಂಜೆಕ್ಷನ್ ಚುಚ್ಚಿಕೊಂಡ ವೈದ್ಯ

Public TV
1 Min Read
Injection 1

– ಮತ್ತೊಬ್ಬನ ಜೊತೆ ಪತ್ನಿಯ ಕಳ್ಳಾಟ

ಗುರುಗ್ರಾಮ: ಖಾಸಗಿ ಆಸ್ಪತ್ರೆಯ ವೈದ್ಯ ವಿಷದ ಇಂಜೆಕ್ಷನ್ ಚುಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ತಿಜೋರಿ ಮೇಲೆ ಐ ಲವ್ ಯು, ಗುಡ್ ಬೈ ಎಂದು ಬರೆದಿದ್ದಾರೆ.

Injection 2

ಮನುಜ್ ಸೋಡಿ ಆತ್ಮಹತ್ಯೆಗೆ ಶರಣಾದ ವೈದ್ಯ. ಗುರುಗ್ರಾಮದ ಸೆಕ್ಟರ್ 49ರ ಆರ್ಚಿಡ್ ಅಪಾರ್ಟ್‍ಮೆಂಟ್ ಫ್ಲ್ಯಾಟ್ ನಂಬರ್ 201ರಲ್ಲಿ ಮನುಜ್ ಕುಟುಂಬ ಸಮೇತರಾಗಿ ವಾಸವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿಯ ಐಸಿಯು ಎಕ್ಸಪರ್ಟ್ ಆಗಿ ಕೆಲಸ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಮಗಳ ಬಳಿ ಬಂದಿದ್ದ ಮನುಜ್ ಆಕೆ ಜೊತೆ ಕೆಲ ಸಮಯ ಕಳೆದಿದ್ದರು. ತದನಂತರ ತಮ್ಮ ಕೋಣೆಗೆ ತೆರಳಿ ವಿಷದ ಇಂಜೆಕ್ಷನ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Gurugram Police

ತುಂಬಾ ಸಮಯದಿಂದ ಮನುಜ್ ಹೊರ ಬರದಿದ್ದಾಗ ಮಗಳು ತಂದೆ ಕೋಣೆಗೆ ತೆರಳಿದ್ದಾಳೆ. ಅಪ್ಪರ ಬರೆದ ಸಾಲುಗಳನ್ನ ನೋಡಿ ಗಾಬರಿಯಾಗಿ ಕೂಗಿಕೊಂಡಾಗ ಇತರ ಸದಸ್ಯರು ಬಂದಿದ್ದಾರೆ. ತಂದೆ ತನ್ನ ಜೊತೆ ಯಾವ ಸಮಸ್ಯೆಗಳ ಬಗ್ಗೆ ಮಾತನಾಡಿರಲಿಲ್ಲ ಎಂದು ಮಗಳು ಹೇಳಿದ್ದಾಳೆ.

Police Jeep

ಇದ್ದ ಒಬ್ಬ ಮಗನನ್ನು ಕಳೆದುಕೊಂಡಿರುವ ವೃದ್ಧ ದಂಪತಿ ಕಣ್ಣೀರು ಹಾಕುತ್ತಿದ್ದಾರೆ. ಮಗ ಮತ್ತು ಸೊಸೆ ನಡುವೆ ಜಗಳ ಆಗುತ್ತಿತ್ತು. ಇಬ್ಬರ ವೈವಾಹಿಕ ಜೀವನ ಸುಖಮಯವಾಗಿರಲಿಲ್ಲ. ಸಾಂಸರಿಕ ಕಲಹ ಹಿನ್ನೆಲೆ ಮಗ ಮಾನಸಿಕವಾಗಿ ಕುಗ್ಗಿದ್ದನು. ಸೊಸೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆಯೂ ಆತನಿಗೆ ಅನುಮಾನವಿತ್ತು ಎಂದು ಮನುಜ್ ಪೋಷಕರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *