– ನಾಲ್ಕು ಕಂಪನಿ ಹೊಂದಿದ್ದ ಯುವಕ
ಭೋಪಾಲ್: 28 ವರ್ಷದ ಯುವ ಉದ್ಯಮಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಘಟನಾ ಸ್ಥಳದಲ್ಲಿ ಉದ್ಯಮಿಯ ಡೈರಿ ಲಭ್ಯವಾಗಿದ್ದು, ಅದರಲ್ಲಿ ಐ ಲವ್ ಯು ನೀಲಂ ಎಂದು ಬರೆಯಲಾಗಿದೆ.
28 ವರ್ಷದ ಪಂಕಜ್ ಆತ್ಮಹತ್ಯೆಗೆ ಶರಣಾದ ಯುವ ಉದ್ಯಮಿ. ಇಂದೋರ್ ನಗರದ ಕನಾಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್ ನಲ್ಲಿ ಪಂಕಜ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಪಂಕಜ್ ಮುಂಬೈನಲ್ಲಿ ನಾಲ್ಕು ಇವೆಂಟ್ ಮ್ಯಾನೇಜ್‍ಮೆಂಟ್ ಕಂಪನಿ ಮಾಲೀಕರಾಗಿದ್ದು, ಇವರ ಹೆಸರು ಗಿನ್ನಿಸ್ ಬುಕ್ ನಲ್ಲಿ ದಾಖಲಾಗಿದೆ ಎಂದು ವರದಿಯಾಗಿದೆ.
ಪಂಕಜ್ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಕೋಣೆಯಲ್ಲಿ ಲಭ್ಯವಿದ್ದ ಡೈರಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಡೈರಿಯಲ್ಲಿ ಐ ಲವ್ ಯು ನೀಲಂ ಎಂದು ಬರೆಯಲಾಗಿದ್ದ, ಕೆಲ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾಹಿತಿ ಇದೆ.
ರಾಜಕೀಯ ಮುಖಂಡ ಸಂಜಯ್ ಶುಕ್ಲಾ ಮಗನ ಮದುವೆ ಆಯೋಜಿಸಲು ಪಂಕಜ್ ಇಂದೋರ್ ಗೆ ಆಗಮಿಸಿದ್ದರು. ಮಂಗಳವಾರ ರಾತ್ರಿ ಮದುವೆ ಕೆಲಸ ಮಾಡಿದ್ದ ಪಂಕಜ್, ಸುಸ್ತಾಗಿದೆ ಎಂದು ಹೋಟೆಲ್ ಗೆ ತೆರಳಿದ್ದರು. ಬೆಳಗ್ಗೆ ಬಂದ ಸಿಬ್ಬಂದಿ ಕೋಣೆಯ ಬಾಗಿಲು ತೆಗೆದಾಗ ನೇಣು ಬಿಗಿದು ಸ್ಥಿತಿಯಲ್ಲಿ ಪಂಕಜ್ ಶವ ಪತ್ತೆಯಾಗಿತ್ತು.