ಮುಂಬೈ: ಐಸ್ಕ್ರೀಮ್ನಲ್ಲಿ ವಿಷ ಬೆರೆಸಿ ತಂದೆಯೊಬ್ಬ ಮಕ್ಕಳಿಗೆ ಕೊಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಇದನ್ನೂ ಓದಿ: ಜೋಕಾಲಿ ತಂದ ಆಪತ್ತು- ಎರಡು ಎಳೆಯ ಜೀವಗಳಿಗೆ ಕುತ್ತು
Advertisement
ಅಲಿಷನ್ ಅಲಿ(5) ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ಮಕ್ಕಳಾದ ಅಲಿನ(7), ಅರ್ಮಾನ್(2) ಸಾವು ಬದುಕಿನ ಮಧ್ಯೆ ಹೋರಟ ಮಾಡುತ್ತಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂವರು ಮಕ್ಕಳಿಗೆ ಐಸ್ಕ್ರೀಮ್ನಲ್ಲಿ ವಿಷಬೇರಸಿ ಕೊಡಲಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ.
Advertisement
Advertisement
ಮನ್ಖುರ್ದ್ ಪ್ರಾಂತ್ಯದ ನಿವಾಸಿ ಮೊಹಮ್ಮದ್ ಅಲಿ ನೌಶಾದ್ ಜೂನ್ 25ರಂದು ತನ್ನ ಪತ್ನಿಯ ಜೊತೆಗೆ ಜಗಳವಾಡಿದ್ದಾನೆ. ಪತ್ನಿಯ ಮೇಲೆ ಇರುವ ಸಿಟ್ಟನ್ನು ಮಕ್ಕಳಿಗೆ ವಿಷ ಹಾಕುವ ಮೂಲಕವಾಗಿ ತಿರಿಸಿಕೊಂಡಿದ್ದಾನೆ. ನಂತರ ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳಿಗೆ ಐಸ್ಕ್ರೀಮ್ನಲ್ಲಿ ಇಲಿ ಪಾಷಾಣವನ್ನು ಬೇರೆಸಿ ಕೊಟ್ಟಿದ್ದಾನೆ. ಮಕ್ಕಳು ತಂದೆ ಕೊಟ್ಟಿದ್ದಾರೆ ಎಂದು ತಿಂದು ಬಿಟ್ಟಿದ್ದಾರೆ. ನಂತರ ಆರೋಗ್ಯದಲ್ಲಿ ಏರುಪೇರಾಗಿದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.
Advertisement
ಈ ಆಘಾತಕಾರಿ ಕೃತ್ಯದ ಬಗ್ಗೆ ಆರೋಪಿಯ ಹೆಂಡತಿ ದೂರು ನೀಡಿದ್ದೂ, ಮುಹಮ್ಮದ್ ಅಲಿ ನೌಶಾದ್ನನ್ನು ಮುಂಬೈ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.