ಬೆಂಗಳೂರು: ಇಂಗ್ಲೆಂಡ್‍ನಲ್ಲಿ ನಡೆಯುವ ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಭಾರತ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ.
ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದ ಪ್ರಸಿದ್ಧ್ ಕೃಷ್ಣ. ಐಪಿಎಲ್ ಮುಂದೂಡಲ್ಪಟ್ಟ ಮೇಲೆ ಬೆಂಗಳೂರಿನ ತಮ್ಮ ನಿವಾಸಕ್ಕೆ ಹಿಂದಿರುಗಿದರು. ಈ ಸಂದರ್ಭ ಕೊರೊನಾ ಟೆಸ್ಟ್‍ಗೆ ಒಳಗಾದ ಪ್ರಸಿದ್ಧ್ ಕೃಷ್ಣ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಈ ಮೊದಲು ಕೋಲ್ಕತ್ತಾ ತಂಡದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿರ್ಯರ್ ಗೆ ತಂಡದಲ್ಲಿದ್ದ ವೇಳೆಯ ಕೊರೊನಾ ಪಾಸಿಟಿವ್ ಆಗಿತ್ತು. ಆ ಬಳಿಕ ಬಿಸಿಸಿಐ ಐಪಿಎಲ್‍ನ್ನು ಮುಂದೂಡಿಕೆ ಮಾಡಿತ್ತು. ಹಾಗಾಗಿ ಎಲ್ಲಾ ಆಟಗಾರರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ.
KKR and India pacer Prasidh Krishna tests COVID-19 positive
Read @ANI Story | https://t.co/14JVdbRRSM pic.twitter.com/AtvTHVKOjd
— ANI Digital (@ani_digital) May 8, 2021
ಪ್ರಸಿದ್ಧ್ ಕೃಷ್ಣ ಕೋಲ್ಕತ್ತಾ ತಂಡದ ಪರ 14ನೇ ಆವೃತ್ತಿಯ ಐಪಿಎಲ್‍ನಲ್ಲಿ 7 ಪಂದ್ಯಗಳಿಂದ 8 ವಿಕೆಟ್ ಕಬಳಿಸುವ ಮೂಲಕ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಪ್ರಸಿದ್ಧ್ ಕೃಷ್ಣ ಅವರು ಐಪಿಎಲ್‍ನಲ್ಲಿ ನೀಡಿದ ಉತ್ತಮ ಪ್ರದರ್ಶನವನ್ನು ಕಂಡು ನಿನ್ನೆ ಬಿಸಿಸಿಐ ಟೆಸ್ಟ್ ಚಾಂಪಿಯನ್‍ಶಿಪ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಪ್ರಕಟಿಸಿದ ಭಾರತ ತಂಡದಲ್ಲಿ ಮೀಸಲು ಆಟಗಾರನಾಗಿ ಸ್ಥಾನ ಕಲ್ಪಿಸಿತ್ತು. ಆದರೆ ಇಂದು ಕೊರೊನಾ ದೃಢ ಪಟ್ಟಿದೆ. ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಇಂಗ್ಲೆಂಡ್‍ನಲ್ಲಿ ಜೂನ್ 18ರಂದು ಪ್ರಾರಂಭಗೊಳ್ಳಲಿದೆ.