ಮುಂಬೈ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ತಿಂಗಳ ಕ್ರಿಕೆಟಿಗ ಪ್ರಶಸ್ತಿಯನ್ನು ಭಾರತ ತಂಡದ ಯುವ ವಿಕೆಟ್ ಕೀಪರ್, ಬ್ಯಾಟ್ಸ್‌ಮ್ಯಾನ್ ರಿಷಬ್ ಪಂತ್‍ಗೆ ನೀಡಿ ಗೌರವವಿಸಿದೆ.
Advertisement
ಎಲ್ಲಾ ಅಂತರಾಷ್ಟ್ರೀಯ ಪಂದ್ಯಗಳನ್ನು ಗಮನಿಸಿ ಮಹಿಳಾ ಮತ್ತು ಪುರಷರ ತಂಡದಲ್ಲಿ ಅತ್ಯುತ್ತಮ ಆಟವಾಡಿ ತಂಡಕ್ಕೆ ಸಹಕಾರಿಯಾದ ಆಟಗಾರರಿಗೆ ಐಸಿಸಿಯು ತಿಂಗಳ ಅತ್ಯುತ್ತಮ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಈ ಬಾರಿಯೂ ಪ್ರಶಸ್ತಿಗಾಗಿ ಪುರುಷರ ವಿಭಾಗದಲ್ಲಿ ಭಾರತದ ರಿಷಬ್ ಪಂತ್, ಇಂಗ್ಲೆಂಡ್‍ನ ಜೋ ರೂಟ್ ಮತ್ತು ಐಲ್ರ್ಯಾಂಡ್‍ನ ಫೌಲ್ ಸ್ಟ್ರೀಲಿಂಗ್ ಅವರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿತ್ತು. ಇದೀಗ ಐಸಿಸಿಯು ಫಲಿತಾಂಶವನ್ನು ಹೊರಹಾಕಿದ್ದು ಭಾರತದ ರಿಷಬ್ ಪಂತ್ ಮುಡಿಗೆ ತಿಂಗಳ ಕ್ರಿಕೆಟಿಗ ಪ್ರಶಸ್ತಿ ಒಲಿದಿದೆ.
Advertisement
A month to remember Down Under for @RishabhPant17 and India ????
Congratulations to the inaugural winner of the ICC Men’s Player of the Month award ????
???? https://t.co/aMWlU9Xq6H pic.twitter.com/g7SQbvukh6
— ICC (@ICC) February 8, 2021
Advertisement
ರಿಷಬ್ ಪಂತ್, ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗಾವಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‍ನಲ್ಲಿ 97 ರನ್ ಗಳಿಸಿ ಪಂದ್ಯ ಡ್ರಾ ಆಗುವಂತೆ ಮಾಡಿದ್ದರು. ಬ್ರಿಸ್ಪೇನ್‍ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ 97 ರನ್ ಗಳಿಸಿ ಟೆಸ್ಟ್ ಸರಣಿ ಗೆಲ್ಲಲು ಕಾರಣರಾಗಿದ್ದರು.
Advertisement
ಐಸಿಸಿಯ ಪ್ರಶಸ್ತಿ ಗೆದ್ದ ಬಳಿಕ ಈ ಕುರಿತು ಟ್ವೀಟ್ ಮಾಡಿದ ಪಂತ್, ಈ ಪ್ರಶಸ್ತಿಯನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲ್ಲಲು ಕಾರಣರಾದ ನಮ್ಮ ತಂಡಕ್ಕೆ ಅರ್ಪಣೆ ಮಾಡುತ್ತೇನೆ. ನನಗೆ ಮತಹಾಕಿ ಪ್ರಶಸ್ತಿ ಗೆಲ್ಲುವಂತೆ ಮಾಡಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
First South African to take 100 T20I wickets ✅
First ICC Women’s Player of the Month award winner ✅
Well done on an amazing January, Shabnim Ismail! ????????
???? https://t.co/nypfCuQvHg pic.twitter.com/CClKhKrAGP
— ICC (@ICC) February 8, 2021
ಐಸಿಸಿಯ ಮಹಿಳಾ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಶಬನಮ್ ಇಸ್ಮಾಯಿಲ್ ತಿಂಗಳ ಆಟಗಾರ್ತಿ ಪ್ರಶಸ್ತಿ ಗಳಿಸಿಕೊಂಡಿದ್ದಾರೆ. ಇಸ್ಮಾಯಿಲ್ ಪಾಕಿಸ್ತಾನದ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ 7 ವಿಕೆಟ್ ಪಡೆದು ಮಿಂಚಿದ್ದರು. ಇದೆ ಸರಣಿಯಲ್ಲಿ ಪಾಕಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 5 ವಿಕೆಟ್ ಕಿತ್ತು ತಂಡಕ್ಕೆ ಜಯ ತಂದುಕೊಟ್ಟಿದ್ದರು.