ಐಸಿಯುವಿನಲ್ಲಿದ್ದ 30 ವರ್ಷದ ಯುವಕನಿಂದ ಕೊನೆ ಕ್ಷಣದ ನರಕದರ್ಶನ

Public TV
2 Min Read
BNG 2 1

– ಐಸಿಯುವಿನಲ್ಲಿದ್ದಾಗ ತನ್ನವರಿಗಾಗಿ ಹಂಬಲಿಸಿ ಪ್ರಾಣಬಿಟ್ಟ

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ರೌದ್ರನರ್ತನ ತೋರುತ್ತಿದೆ. ಇತ್ತ ಬೆಂಗಳೂರಲ್ಲಿ ಹೆಣಗಳು ಉರುಳುತ್ತಿದೆ, ಬದುಕಿಗಿಲ್ಲಿ ನೋ ಗ್ಯಾರಂಟಿ ಅನ್ನೋವಂತಾಗಿದೆ. ಇದಕ್ಕೆ ಐಸಿಯುವಿನಲ್ಲಿದ್ದ ಯುವಕನೊಬ್ಬನ ಕೊನೆ ಕ್ಷಣದ ನರಕದರ್ಶನದ ವೀಡಿಯೋ ಸಾಕ್ಷಿ.

BNG 6

ಬೆಂಗಳೂರು ಯುವಕನ ಸಾವಿನ ಕೊನೆಯ ಕ್ಷಣದ ವೀಡಿಯೋವೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ವೀಡಿಯೋವನ್ನು ನೋಡಿದರೆ ಎಂತಹ ಕಲ್ಲು ಹೃದಯ ಕೂಡ ಕರಗುವಂತಿದೆ. ಕೊರೊನಾ ದೃಢಪಟ್ಟು 30 ವರ್ಷದ ಯುವಕ ಮೈಸೂರು ರಸ್ತೆಯ ಮೆಡಿಕಲ್ ಕಾಲೇಜ್‍ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಒಂದು ದಿನದ ಹಿಂದೆಯಷ್ಟೇ ಕುಟುಂಬಸ್ಥರಿಗೆ ವೀಡಿಯೋ ಮಾಡಿ ಕಳುಹಿಸಿದ್ದನು. ಕುಟುಂಬಸ್ಥರ ಬಳಿ ಏನೋ ಹೇಳಿಕೊಳ್ಳಬೇಕೆಂದು ಆಸೆ ಪಟ್ಟಿದ್ದ ಯುವಕ, ಆದರೆ ಒಂದು ಮಾತು ಆಡಲು ಸಾಧ್ಯವಾಗದೇ ಮೌನದ ವೀಡಿಯೋ ಕಳುಹಿಸಿದ್ದನು.

BNG 5 1

ಅದಕ್ಕೂ ಮುಂಚೆ ಆಸ್ಪತ್ರೆಯಲ್ಲಿ ನೀರು ಊಟ ಕೊಡ್ತಿಲ್ಲ ಟ್ರೀಟ್ ಮೆಂಟ್ ಕೊಡ್ತಿಲ್ಲ. ಪ್ಲೀಸ್ ನನ್ನ ಕರ್ಕೊಂಡು ಹೋಗಿ, ಇಲ್ಲಿದ್ರೆ ಬದುಕಲ್ಲ ಅಂತಾ ಯುವಕ ಕರೆ ಮಾಡಿದ್ದನು. ಈ ವೇಳೆ ಕುಟುಂಬಸ್ಥರು ಆಯ್ತು ನಾಳೆ ಕರೆದುಕೊಂಡು ಹೋಗ್ತೀವಿ ಅಂತ ಸಮಾಧಾನ ಪಡಿಸಿದ್ದಾರೆ. ಆ ಬಳಿಕ ಯುವಕನಿಗೆ ಮಾತು ಬರದೇ ಆಗಿದ್ದು, ಮರುದಿನವೇ ಯುವಕನ ಮೂಗು, ಬಾಯಲ್ಲಿ ರಕ್ತ ಸೋರಿ ಸಾವನ್ನಪ್ಪಿದ್ದಾನೆ. ಯುವಕನ ಸಾವಿನ ಸುದ್ದಿ ಕುಟುಂಬಸ್ಥರಿಗೆ ಬರಸಿಡಿಲಿನಂತೆ ಎರಗಿತ್ತು.

BNG 3 1

ಯುವಕ, ಸಾವಿಗೂ ಮುನ್ನ ತನ್ನ ಮೂಕರೋಧನೆ ಹಾಗೂ ತನ್ನ ಒದ್ದಾಟದ ಕೊನೆಯ ಕ್ಷಣವನ್ನು ವಿಡಿಯೋ ಮಾಡಿ ಕುಟುಂಬಕ್ಕೆ ಕಳಿಸಿದ್ದರಿಂದ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಬಲಿಯಾದ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ದಿನಕ್ಕೆ ಸಾವಿರಾರು ರೋಗಿಗಳು ದಾಖಲಾಗುತ್ತಿದ್ದು, ಹೀಗಾಗಿ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಸಿಗ್ತಿಲ್ಲ ಸರಿಯಾದ ಟ್ರೀಟ್ ಮೆಂಟ್ ಸಿಗ್ತಿಲ್ಲ ಅಂತಾ ಆರೋಪ ಕೇಳಿ ಬಂದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿರುವ ಆರೋಪ ಮಾಡಿ ಆಸ್ಪತ್ರೆಯ ಮುಂದೆ ಯುವಕನ ಕುಟುಂಬಸ್ಥರು ಕಣ್ಣೀರಿನ ಆಕ್ರೋಶ ಹೊರಹಾಕಿದ್ದಾರೆ.

BNG 1 1

ಇಲ್ಲಿ ರೋಗಿಗಳಿಗೆ ನೀರು ಕೊಡಬೇಕು ಅಂದ್ರೂ ಇಲ್ಲಿರುವ ಸಿಬ್ಬಂದಿಗೆ ಐನೂರು ರೂಪಾಯಿ ಕೊಡಬೇಕು. ದುಡ್ಡಿದ್ರೇ ಎಲ್ಲಾ ಇಲ್ದೆ ಇದ್ರೇ ಊಟ ತಿಂಡಿ ಕುಡಿಯೋಕೆ ರೋಗಿಗಳಿಗೆ ನೀರು ಕೊಡಲ್ಲ ಅಂತಾ ಬೇರೆ ರೋಗಿ ಗಳ ಕುಟುಂಬಸ್ಥರು ಕೂಡ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸಾವಿನ ಸರಣಿ ಹೆಚ್ಚಾಗುತ್ತಿರುವಾಗಲೇ ಬೇರೆ ರೋಗಿಗಳ ಕುಟುಂಬಸ್ಥರು ತಮ್ಮವರ ಡಿಸ್ಚಾರ್ಜ್‍ಗಾಗಿ ಆಸ್ಪತ್ರೆ ಅಲೆದಾಡುತ್ತಿದ್ದಾರೆ.

BNG 1 1

Share This Article
Leave a Comment

Leave a Reply

Your email address will not be published. Required fields are marked *