ನವದೆಹಲಿ: ಐಸಿಯುನಲ್ಲಿ ವೈದ್ಯರ ಸಮ್ಮುಖದಲ್ಲೇ ಐಸ್‍ಕ್ರೀಂ ಸೇವಿಸಿದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಇದನ್ನೂ ಓದಿ: ಕಾಡು ಹಂದಿಯನ್ನು ಕ್ರಿಮಿ ಕೀಟವೆಂದು ಘೋಷಿಸುವ ಪ್ರಕ್ರಿಯೆ ಪ್ರಾರಂಭ: ಗೋವಾ ಸಿಎಂ
ರೋಸಿ(29) ಮೃತ ಮಹಿಳೆಯಾಗಿದ್ದಾಳೆ. ಮೂಲತಃ ನಾಗಾಲ್ಯಾಂಡ್‍ನ ದಿಮಪುರದ ರೋಸಿ ದೆಹಲಿಯ ಬಿಜ್ವಸನ್ ಪ್ರದೇಶದಲ್ಲಿ ತನ್ನ ಅಕ್ಕನ ಮಗನ ಜೊತೆ ನೆಲೆಸಿದ್ದಳು. ಜೂ. 23ರಂದು ರೋಸಿಯ ಕೈ ಕಾಲುಗಳಿಂದ ರಕ್ತಸ್ರಾವ ಉಂಟಾಗಿ ತೀವ್ರ ನೋವಿನಿಂದ ಬಳಲುತ್ತಿದ್ದರು, ಆಸ್ಪತ್ರೆಗೆ ದಾಖಲಾಗಿರುವ ಈಕೆ ಐಸ್‍ಕ್ರೀಂ ಸೇವಿಸಿ ಪ್ರಾಣ ಬಿಟ್ಟಿದ್ದಾಳೆ.
Advertisement
Advertisement
ರೋಸಿಯ ಕೈ ಕಾಲುಗಳಿಂದ ರಕ್ತಸ್ರಾವ ಉಂಟಾಗಿ ತೀವ್ರ ನೋವಿನಿಂದ ಬಳಲುತ್ತಿದ್ದಳು. ಈ ವೇಳೆ ಆಕೆಯ ಅಕ್ಕನ ಮಗ ಸ್ಯಾಮ್ಯುಯೆಲ್ ಆಸ್ಪತ್ರೆಗೆ ದಾಖಲಿಸಿದ್ದನು. ಆಕೆಯ ಆರೋಗ್ಯ ಸುಧಾರಿಸದ ಹಿನ್ನಲೆ ಜೂ. 24 ರಂದು ಗುರುಗ್ರಾಮದ ಸೆಕ್ಟರ್ 10ರಲ್ಲಿನ ಆಲ್ಫಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ಆಕೆಯ ಆರೋಗ್ಯ ಕೂಡ ಸುಧಾರಿಸಿದ್ದು, ಆಸ್ಪತ್ರೆಯ ವೈದ್ಯರ ಸಮ್ಮುಖದಲ್ಲಿಯೇ ಆಕೆ ಐಸ್‍ಕ್ರೀಂ ಸೇವಿಸಿದರು. ಇದಾದ ಸ್ಪಲ್ಪ ಹೊತ್ತಿನಲ್ಲಿಯೇ ಆಕೆ ಸಾವನ್ನಪ್ಪಿದ್ದಾಳೆ.
Advertisement
Advertisement
ಐಸಿಯುನಲ್ಲಿ ಬೇರೆ ರೋಗಿ ಐಸ್‍ಕ್ರೀಂ ತಿನ್ನುವುದನ್ನು ನೋಡಿ ರೋಸಿ ಕೂಡ ಕೇಳಿದರು. ಅವರು ಸ್ಪ ಇಚ್ಛೆಯಿಂದ ಐಸ್ ಕ್ರೀಂ ತಿಂದಿದ್ದು, ಇದಕ್ಕೂ ತಮಗೂ ಸಂಬಂಧವಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಆಸ್ಪತ್ರೆ ಅದರಲ್ಲೂ ಐಸಿಯುನಲ್ಲಿ ರೋಗಿಗಳಿಗೆ ಅವರು ಐಸ್ ಕ್ರೀಂ ಅನ್ನು ಹೇಗೆ ನೀಡಿದ್ದಾರೆ. ಐಸಿಯುನಲ್ಲಿ ಇಂತಹ ವಸ್ತುಗಳನ್ನು ನೀಡಬಾರದು ಅಲ್ಲವೇ. ಈ ಘಟನೆ ಹಾಗೂ ವೈದ್ಯರ ನಿರ್ಲಕ್ಷ್ಯದ ಕುರಿತು ಸ್ಯಾಮುಯೆಲ್ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿ ಹರಿಯಬಿಟ್ಟಿದ್ದಾನೆ. ಚಿಕ್ಕಮ್ಮನ ಸಾವಿನ ಕುರಿತು ನ್ಯಾಯಕ್ಕೆ ಆಗ್ರಹಿಸಿ ವೀಡಿಯೋ ಮಾಡಿದ್ದನು.
ಇದಾದ 24 ಗಂಟೆಗಳ ಬಳಿಕ ಸ್ಯಾಮುಯೆಲ್ ಕೂಡ ಸಾವನ್ನಪ್ಪಿದ್ದಾನೆ. ಆತನ ಹೋಟೆಲ್ ರೂಮ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪ ಕೇಳಿ ಬಂದಿದೆ. ಆದರೆ, ಸ್ಯಾಮುಯೆಲ್ ಮುಖದ ಮೇಲೆ ಹಲ್ಲೆ ಮಾಡಿದ ಗುರುತುಗಳು ಕಂಡು ಬಂದಿದ್ದು, ಇದು ಆತ್ಮಹತ್ಯೆ ಅಲ್ಲ, ಕುರಿತು ಸರ್ಕಾರ ತಮಗೆ ನ್ಯಾಯ ಒದಗಿಸಬೇಕು ಎಂದು ಸ್ಯಾಮುಯೇಲ್ ತಂದೆ ಹೇಳಿದ್ದಾರೆ.
ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡು ಬಂದಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗೆ ಕಾಯುತ್ತಿದ್ದೇವೆ. ವರದಿ ಬಳಿಕ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.