-ಅಕ್ರಮ ಹಣ ವರ್ಗಾವಣೆಯ ಆರೋಪ
-ಇಡಿಯಿಂದ ದೀಪಕ್ ಕೋಚರ್ ಅರೆಸ್ಟ್
ನವದೆಹಲಿ: ಐಸಿಐಸಿಐ ಬ್ಯಾಂಕ್ ನ ಮಾಜಿ ಸಿಇಓ ಚಂದಾ ಕೋಚರ್ ಪತಿ, ಉದ್ಯಮಿ ದೀಪಕ್ ಕೊಚರ್ ಅವರ ಜಾರಿ ನಿರ್ದೇಶನಾಲಯ ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್ ಅವರ ಬಂಧನವಾಗಿದೆ.
ಬ್ಯಾಂಕ್ ಮತ್ತು ವಿಡಿಯೋಕಾನ್ ಗ್ರೂಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್ ಕೋಚರ್ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಹೆಚ್ಚಿನ ವಿಚಾರಣೆ ಹಿನ್ನೆಲೆ ದೀಪಕ್ ಕೋಚರ್ ಅವರನ್ನ ಇಡಿ ಬಂಧಿಸಿದೆ.
ಕಳೆದ ವರ್ಷವೇ ಜಾರಿ ನಿರ್ದೇಶನಾಲಯ ಚಂದಾ ಕೋಚರ್, ದೀಪಕ್ ಕೋಚರ್ ಮತ್ತು ವಿಡಿಯೋಕಾನ್ ಗ್ರೂಪ್ ನ ವೇಣುಗೋಪಾಲ್ ವಿರುದ್ಧ ಪಿಎಂಎಲ್‍ಎ (ಮನಿ ಲಾಂಡರಿಂಗ್ ತಡೆ ಕಾಯ್ದೆ) ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಐಸಿಐಸಿಐ ಬ್ಯಾಂಕ್ ಮಂಜೂರು ಮಾಡಿದ್ದ 1,875 ಕೋಟಿ ರೂ. ಸಾಲದಲ್ಲಿ ಅಕ್ರಮದ ಆರೋಪಗಳ ಕೇಳಿ ಬಂದ ಹಿನ್ನೆಲೆ ಪ್ರಕರಣ ದಾಖಲಾಗಿತ್ತು. ಈಗಾಗಲೇ ಚಂದಾ ಕೋಚರ್ ಇಡಿ ಅಧಿಕಾರಿಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
Enforcement Directorate (ED) arrests Deepak Kochar, husband of former ICICI Bank MD & CEO Chanda Kochar in connection with ICICI Bank-Videocon case: Enforcement Directorate (ED) officials pic.twitter.com/b86l6Gs2Eh
— ANI (@ANI) September 7, 2020