– ಕೆಕೆಆರ್ ಪ್ಲೇ ಆಫ್ ಪ್ರವೇಶಿಸಲು ಅವಕಾಶವಿದೆ
ಅಬುಧಾಬಿ: 2020ರ ಐಪಿಎಲ್ ಟೂರ್ನಿಯಲ್ಲಿ 45 ದಿನಗಳಲ್ಲಿ 54 ತಂಡಗಳು ಪೂರ್ಣಗೊಂಡರೂ ಪ್ಲೇ ಆಫ್ ರೇಸ್ ಅಂತ್ಯವಾಗಿಲ್ಲ. ಇವತ್ತು ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಇವತ್ತು ದೆಹಲಿ ಮತ್ತು ಬೆಂಗಳೂರು ನಡುವೆ ಐಪಿಎಲ್ ಮ್ಯಾಚ್ ನಡೆಯಲಿದೆ.
ಇಂದಿನ ಮ್ಯಾಚ್‍ನಲ್ಲಿ ಆರ್‌ಸಿಬಿ ಗೆಲ್ಲಲೇಬೇಕಾಗಿದೆ. ಗೆದ್ದರಷ್ಟೇ ಪ್ಲೇ ಆಫ್‍ಗೆ ಆರ್ ಸಿಬಿಗೆ ಎಂಟ್ರಿ ಸಿಗುತ್ತೆ. ಅಪ್ಪಿತಪ್ಪಿ ಸೋತರೆ ಆಗ ಬೆಂಗಳೂರು ತಂಡದ ಭವಿಷ್ಯ ಹೈದ್ರಾಬಾದ್-ಮುಂಬೈ ನಡುವಿನ ಪಂದ್ಯದ ಮೇಲೆ ಅವಲಂಬಿತ ಆಗಿರುತ್ತೆ. ಮುಂಬೈ ಎದುರು ಹೈದ್ರಾಬಾದ್ ಸೋತರಷ್ಟೇ ಆರ್ ಸಿಬಿ ಆಸೆ ಜೀವಂತವಾಗಿರಲಿದೆ.
Advertisement
Advertisement
ಆವೃತ್ತಿಯ ಮೊದಲ ಪಂದ್ಯದಲ್ಲಿ ಡೆಲ್ಲಿ, ಬೆಂಗಳೂರು ತಂಡವನ್ನು 59 ರನ್ ಗಳ ಅಂತರದಿಂದ ಸೋಲುಣಿಸಿತ್ತು. ಈ ಸೋಲಿಗೆ ಕೊಹ್ಲಿ ಸೇನೆ ಪ್ರತಿಕಾರ ತೀರಿಸಿಕೊಳ್ಳಬೇಕಿದೆ. ಸದ್ಯ 13 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು 14 ಅಂಕಗಳೊಂದಿಗೆ ಬೆಂಗಳೂರು, ಡೆಲ್ಲಿ ತಂಡಗಳು ಕ್ರಮವಾಗಿ 2ನೇ ಮತ್ತು 3ನೇ ಸ್ಥಾನದಲ್ಲಿವೆ. ಆರ್ ಸಿಬಿ ಸದ್ಯ -0.145 ರನ್ ರೇಟ್ ಹೊಂದಿದ್ದು, ಡೆಲ್ಲಿ -0.159 ರನ್ ರೇಟ್ ಹೊಂದಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಪ್ಲೇ ಆಫ್ ಸ್ಥಾನ ಖಚಿತವಾಗುತ್ತದೆ. ಆದರೆ ಸೋತ ತಂಡದ ಭವಿಷ್ಯ ಹೈದರಾಬಾದ್-ಮುಂಬೈ ಪಂದ್ಯಗಳ ಫಲಿತಾಂಶದ ಮೇಲೆ ನಿರ್ಧಾರವಾಗುತ್ತದೆ.
Advertisement
Advertisement
ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಮುಂಬೈ ಗೆಲುವು ಪಡೆದರೇ ಯಾವುದೇ ಸಮಸ್ಯೆ ಆಗುವುದಿಲ್ಲ. ಒಂದೊಮ್ಮೆ ಸೋತರೆ ರನ್ ರೇಟ್ ಕಾರಣದಿಂದ ಹೈದರಾಬಾದ್ ತಂಡ 3ನೇ ಸ್ಥಾನ ಪಡೆಯಲಿದೆ. ಸದ್ಯ ಹೈದರಾಬಾದ್ ತಂಡ +0.555 ರನ್ ರೇಟ್ ಹೊಂದಿದೆ. ಆಗ 4ನೇ ಸ್ಥಾನಕ್ಕಾಗಿ ಆರ್ ಸಿಬಿ, ಡೆಲ್ಲಿ ಪಂದ್ಯದಲ್ಲಿ ಸೋತ ತಂಡ ಹಾಗೂ ಕೋಲ್ಕತ್ತಾ ನಡುವಿನ ತಂಡಗಳ ರನ್ ರೇಟ್ ಮೇಲೆ 4ನೇ ಸ್ಥಾನ ಖಚಿತವಾಗುತ್ತದೆ. ಕೋಲ್ಕತ್ತಾ ತಂಡ ಸದ್ಯ -0.214 ರನ್ ರೇಟ್ ಹಾಗೂ 14 ಅಂಕಗಳೊಂದಿಗೆ 4ನೇ ಸ್ಥಾನ ಪಡೆದುಕೊಂಡಿದೆ.
4ನೇ ಸ್ಥಾನಕ್ಕೆ ರನ್ ರೇಟ್ ಪ್ರಮುಖ ಪಾತ್ರವಹಿಸುವ ಕಾರಣದಿಂದ ಪಂದ್ಯದಲ್ಲಿ ಆರ್ ಸಿಬಿ ಮೊದಲು ಬ್ಯಾಟಿಂಗ್ ಮಾಡಿದರೆ 15 ರನ್ ಬಾಕಿ ಇರುವಂತೆ ಗೆಲ್ಲಬೇಕಿದೆ. ಆರ್ ಸಿಬಿ ಮೊದಲು ಬೌಲ್ ಮಾಡಿದರೆ ಡೆಲ್ಲಿ 22 ರನ್ ಗಳ ಗೆಲುವು ಪಡೆಯಬೇಕಿದೆ. ಇತ್ತ ಡೆಲ್ಲಿ ಮೊದಲು ಬ್ಯಾಟಿಂಗ್ ಮಾಡಿದರೆ 12 ಎಸೆತ ಬಾಕಿ ಇರುವಂತೆ ಆರ್ ಸಿಬಿ ಗೆಲುವು ಪಡೆಯಬೇಕಿದೆ. ಅಥವಾ ಡೆಲ್ಲಿ ಮೊದಲು ಬೌಲ್ ಮಾಡಿದರೆ 18 ಪ್ಲಸ್ ರನ್ ಗಳೊಂದಿಗೆ ಆರ್ ಸಿಬಿ ಗೆಲುವು ಪಡೆಯಬೇಕಿದೆ. ಉಳಿದಂತೆ ರಾಜಸ್ಥಾನ ತಂಡ ಅಂತಿಮ ಸ್ಥಾನ ಪಡೆದರೆ, ಚೆನ್ನೈ 7 ಹಾಗೂ ಪಂಜಾಬ್ ತಂಡ 6ನೇ ಸ್ಥಾನದಲ್ಲಿ ಟೂರ್ನಿಯಿಂದ ಹೊರ ನಡೆಯಲಿದೆ.