ಮುಂಬೈ: ಐಪಿಎಲ್ 2020ರ ಟೂರ್ನಿ ಅಂತ್ಯವಾಗುತ್ತಿದಂತೆ ಬಿಸಿಸಿಐ ಹೊಸ ಆವೃತ್ತಿಗೆ ಸಿದ್ಧತೆ ನಡೆಸಿದೆ. ಅಲ್ಲದೇ ಐಪಿಎಲ್ 2021ರ ಆವೃತ್ತಿಯ ಟೂರ್ನಿಗೆ ಹೊಸ ತಂಡ ಕೂಡ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಕೊರೊನಾ ವೈರಸ್ ಕಾರಣದಿಂದ ಯುಎಇನಲ್ಲಿ 2021ರಲ್ ಆಯೋಜಿಸಲಾಗಿತ್ತು, ಆದರೆ ಮುಂಬರುವ ಆವೃತ್ತಿಯನ್ನು ಭಾರತದಲ್ಲೇ ನಡೆಸುವ ಅವಕಾಶಗಳಿದೆ. ಇದೇ ವೇಳೆ ಗುಜರಾತ್ ತಂಡ 2021ರ ಆವೃತ್ತಿಯಲ್ಲಿ ಟೂರ್ನಿಗೆ ಸೇರ್ಪಡೆಯಾಗುವ ಅವಕಾಶವಿದ್ದು, ಪರಿಣಾಮ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ಸಿದ್ಧವಾಗುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಅಹ್ಮದಾಬಾದ್ ಮೂಲವಾಗಿ ರಚನೆಯಾಗಲಿರುವ ಫ್ರಾಂಚೈಸಿಯನ್ನು ತನ್ನದಾಗಿಸಿಕೊಳ್ಳಲು ಕಾರ್ಪೊರೇಟ್ ದಿಗ್ಗಜ ಸಂಸ್ಥೆಯೊಂದು ಸಿದ್ಧವಾಗುತ್ತಿದೆ ಎನ್ನಲಾಗಿದೆ. ಉಳಿದಂತೆ ಗುಜರಾತ್ ಕ್ರಿಕೆಟ್ ಬೋರ್ಡ್ ಅಹ್ಮದಾಬಾದ್‍ನಲ್ಲಿ 1.10 ಲಕ್ಷ ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಬೃಹತ್ ಕ್ರೀಡಾಂಗಣನ್ನು ನಿರ್ಮಿಸಿತ್ತು.
Advertisement
ಉಳಿದಂತೆ ಬೆಟ್ಟಿಂಗ್ ಆರೋಪದ ಹಿನ್ನೆಲೆಯಲ್ಲಿ 2016, 2017ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಗಳಿಗೆ 2 ವರ್ಷ ನಿಷೇಧ ವಿಧಿಸಲಾಗಿತ್ತು. ಈ ಎರಡು ವರ್ಷ ಗುಜರಾತ್ ಲಯನ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡಗಳು ಟೂರ್ನಿಯಲ್ಲಿ ಭಾಗಿಯಾಗಿದ್ದವು. ರಾಜ್‍ಕೋಟ್ ಕೇಂದ್ರವಾಗಿ ಸುರೇಶ್ ರೈನಾ ನಾಯಕತ್ವದಲ್ಲಿ ಗುಜರಾತ್ ಲಯನ್ಸ್ ಈ ಎರಡು ಟೂರ್ನಿಗಳಲ್ಲಿ ಆಡಿತ್ತು.